ಆರೋಗ್ಯ-ಜೀವನಶೈಲಿ

ಎಲ್ಲ ರೋಗಕ್ಕೂ ಬೆಲ್ಲ!

ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು. ಸಕ್ಕರೆಯ ಅತಿ ಬಳಕೆ ಸಕ್ಕರೆ ಕಾಯಿಲೆಯಂಥ ರೋಗಗಳನ್ನು ತಂದೊಡ್ಡುತ್ತದೆ..

Published On :

ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು. ಸಕ್ಕರೆಯ ಅತಿ ಬಳಕೆ ಸಕ್ಕರೆ ಕಾಯಿಲೆಯಂಥ ರೋಗಗಳನ್ನು ತಂದೊಡ್ಡುತ್ತದೆ. ಆದರೆ, ಬೆಲ್ಲದಲ್ಲಿ ಅಂಥ ಸಮಸ್ಯೆ ಇಲ್ಲ. ಕಬ್ಬಿನಿಂದ ಉತ್ಪಾದಿಸುವ ಪದಾರ್ಥದಲ್ಲಿ ಬೆಲ್ಲವೇ ಅತಿ ಶ್ರೇಷ್ಠ ಎನ್ನುತ್ತದೆ ಆಯುರ್ವೇದ. ಬೆಲ್ಲವು ದೇಹಕ್ಕೆ ತಂಪು ಹಾಗೂ ಚೈತನ್ಯವನ್ನು ನೀಡುವ ಟಾನಿಕ್. ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಅನಾರೋಗ್ಯಕ್ಕೆ ಬೆಲ್ಲವನ್ನು ಔಷಧಿಯಾಗಿ ಬಳಸಲಾಗುತ್ತದೆ. ಬೆಲ್ಲ ಮೂತ್ರಪಿಂಡದ ಚಟುವಟಿಕೆಗಳನ್ನು ಚುರುಕುಗೊಳಿಸಿ ಮೂತ್ರ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಬೆಲ್ಲದಲ್ಲಿ ಕ್ಯಾಲ್ಷಿಯಂ, ಮೆಗ್ನೀಶಿಯಂ, ಕಬ್ಬಿಣ, ರಂಜಕ ಮುಂತಾದ ಲವಣಗಳು, ಪ್ರೋಟಿನ್ ಹಾಗೂ ಕೊಬ್ಬಿನಾಂಶಗಳಿವೆ. ಆದರೆ, ಸಕ್ಕರೆ ಕೇವಲ ಸಿಹಿಯನ್ನು ಮಾತ್ರ ನೀಡುತ್ತದೆ. ಬೆಲ್ಲ ಸಿಹಿಯ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ನೀಡುತ್ತದೆ. ಅಂದರೆ ಬೆಲ್ಲ ಆಹಾರ ಮಾತ್ರವಲ್ಲ ಔಷಧಿಯೂ ಆಗಿದೆ. ಸಕ್ಕರೆ ತಯಾರಿಕೆಯಲ್ಲಿ ಕಬ್ಬಿನ ರಸದಿಂದ 'ಸುಕ್ರೋಸ್‌' ಎಂಬ ಸಿಹಿಯಂಶವನ್ನಷ್ಟೇ ಬೇರ್ಪಡಿಸಲು ಹೆಚ್ಚು ಗಮನಹರಿಸುವುದರಿಂದ ಮೇಲೆ ಹೇಳಿದ ಲವಣಾಂಶಗಳು ಕಾಕಂಬಿಯಲ್ಲಿ ಹೋಗುತ್ತವೆ. ಆದರೆ ಬೆಲ್ಲದಲ್ಲಿ ಸುಕ್ರೋಸ್ ಕಡ್ಮೆ ಪ್ರಮಾಣದಲ್ಲಿದ್ದರೂ, ಲವಣಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.