ವಾ ಟೊಮೆಟೊ

ಟೊಮೆಟೊ ವಿಸ್ಮಯಕಾರಿ ಬಹುಮುಖ ಆಹಾರ. ಇದೊಂದು ಸಿಟ್ರಸ್‌ಯುಕ್ತ ಹಣ್ಣಾಗಿದ್ದರೂ ಇದನ್ನು ಹೆಚ್ಚಾಗಿ ತರಕಾರಿಯೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್ 'ಸಿ' ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಅಷ್ಟೇ ಅಲ್ಲ, ಟೊಮೆಟೊ ಉತ್ತಮ ಆರೋಗ್ಯಕ್ಕೆ ಅವಶ್ಯಕವಾದ ಇತರೆ ವಿಟಮಿನ್‌ಗಳು, ಮೆಗ್ನಿಷಿಯಂ, ರಂಜಕ ಮತ್ತು ತಾಮ್ರದ ಅಂಶಗಳನ್ನೂ ದೇಹಕ್ಕೆ ಒದಗಿಸಿ ಆರೋಗ್ಯವನ್ನು ಸುಧಾರಿಸುತ್ತದೆ. ಕಡಿಮೆ ಕ್ಯಾಲೋರಿಯ, ಕೊಬ್ಬು ಕರಿಗಸುವ ಅಂಶಗಳೂ ಇರುವ ತರಕಾರಿ ಇದು.
ಟೊಮೆಟೊವನ್ನು ಹಸಿಯಾಗಿ, ಬೇಯಿಸಿ ಅಥವಾ ಸಲಾಡ್, ಸ್ಯಾಂಡ್‌ವಿಚ್‌ಗಳಲ್ಲಿಯೂ ಬಳಸಬಹುದು. ಇಂಥ ವಂಡರ್ ತರಕಾರಿ ಅಥವಾ ಹಣ್ಣಿನ ಕೆಲವು ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ.
ಟೊಮೆಟೊ ಅಧಿಕ ಕೊಲೆಸ್ಟರಾಲ್, ಪಾರ್ಶ್ವವಾಯು ಮತ್ತು ಹೃದ್ರೋಗದ ವಿರುದ್ಧ ರಕ್ಷಣೆ ನೀಡುತ್ತದೆ.
ಇದಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಗುಣವಿದೆ. ಇದರಲ್ಲಿರುವ ಲೈಕೊಪೀನ್ ಅಂಶ ಹೊಟ್ಟೆ, ಗಂಟಲು, ಬಾಯಿ, ಅಂಡಾಶಯ ಹಾಗೂ ಅದಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಟೊಮೆಟೊದಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಜೀವಕೋಶಗಳಿಗೆ ಹಾನಿ ಮಾಡುವ ಫ್ರೀ-ರಾಡಿಕಲ್‌ಗಳ ವಿರುದ್ಧವೂ ಹೋರಾಡುತ್ತದೆ.
ಮೂಳೆಗಳನ್ನು ಟೊಮೆಟೊ ಶಕ್ತಿಶಾಲಿಯನ್ನಾಗಿಸುತ್ತದೆ. ಇದರಲ್ಲಿ ಲಭ್ಯವಿರುವ ಕ್ಯಾಲ್ಷಿಯಂ ಮತ್ತು ವಿಟಮಿನ್ ಕೆ ಎರಡೂ ಮೂಳೆಗಳ ಆರೋಗ್ಯಕ್ಕೆ ಅಗತ್ಯ. ಲೈಕೊಪೀನ್ ಅಂಶ ಅಸ್ತಿ ಮಜ್ಜೆಯ ಅಭಿವೃದ್ಧಿಗೊಳಿಸುವ ಮೂಲಕ ಅಸ್ತಿರಂಧ್ರತೆಯ ವಿರುದ್ಧವೂ ಹೋರಾಡುತ್ತದೆ.
ಇದರಲ್ಲಿರುವ ಬಿ-6 ವಿಟಮಿನ್ ರಕ್ತನಾಳಗಳನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಸಿ ಮತ್ತು ಎ ವಿಟಮಿನ್‌ಗಳು ದೇಹದ ರೋಗ ನೀರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಜ್ಯೂಸ್‌ಗೆ ಜೈ
ಟೊಮೆಟೊ ಎ, ಸಿ, ಕೆ ವಿಟಮಿನ್, ಫೊಲೆಟ್ ಮತ್ತು ಪೊಟ್ಯಾಷಿಯಂ ಹಾಗೂ ಹೇರಳವಾಗಿ ನೀರು ಮತ್ತು ನಾರಿನ ಅಂಶಗಳನ್ನು ಸಮೃದ್ಧವಾಗಿ ಒಳಗೊಂಡಿದೆ. ಇದರಿಂದ ತಯಾರಿಸಿದ ಜ್ಯೂಸ್ ಕಡಿಮೆ ಕ್ಯಾಲೋರಿ, ಲವಣ ಮತ್ತು ಸ್ಯಾಚ್ಯುರೇಟೆಡ್ ಕೊಬ್ಬು ಹೊಂದಿರುವ ಒಂದು ಆರೋಗ್ಯಕರ ಪೇಯ. ಇದು ದೇಹದ ಜೀವಕೋಶ ಮತ್ತು ಅಂಗಾಂಗಗಳನ್ನು ಹಾನಿಯಿಂದ ರಕ್ಷಿಸಿ ಮುಪ್ಪಿನ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರೊಂದಿಗೆ ಚರ್ಮವನ್ನು ಸ್ವಚ್ಛಗೊಳಿಸಿ, ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ತೂಕ ನಿರ್ವಹಣೆ ಹಾಗೂ ಕಣ್ಣಿನ ಆರೋಗ್ಯಕ್ಕೂ ಇದೊಂದು ಉತ್ತಮ ಪೇಯ.
ತೂಕ ಇಳಿಸಿಕೊಳ್ಳಿ
ತೂಕ ಕಡಿಮೆ ಮಾಡಲು ಟೊಮೆಟೊ ಸೇವನೆ ಒಂದು ಉತ್ತಮ ಮತ್ತು ಸರಳ ವಿಧಾನ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಬಲ್ಲದು. ಇದರ ನಾರಿನಾಂಶ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ಅಂಶವನ್ನು ಸಮತೋಲನದಲ್ಲಿಡಲು ಟೊಮೆಟೊ ಸಹಕಾರಿ. ಇದು ಕ್ರೊಮಿಯಂನ ಒಂದು ಉತ್ತಮವಾದ ಮೂಲವಾಗಿರುವುದರಿಂದ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಬಿ-1 ವಿಟಮಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ.
= ರಶ್ಮಿ ಕಾರ್ಗಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


