ನೀ...ಜೋಡಣೆ

ಮಂಡಿ ನೋವು!
ಮಧ್ಯವಯಸ್ಕರು, ವೃದ್ಧರನ್ನು ಹೈರಾಣಾಗಿಸುವ ಸಮಸ್ಯೆ. ಮಂಡಿ ಚಿಪ್ಪಿನ ಸವೆತದಿಂದ ನೋವು ಉತ್ತುಂಗಕ್ಕೆ ಏರುತ್ತದೆ. ಮಂಡಿಗೆ ಕಳಂಕ ಬಂದರೆ ನಡೆದಾಡುವ ಮಾತೆಲ್ಲಿ? ಹೀಗೆ ಭಾವಿಸಿದರೆ ನಿಮ್ಮ ಎಣಿಕೆ ತಪ್ಪು. ಈಗ ಹೊಸ ಮಂಡಿಯೇ ಸಿಗುತ್ತದೆ!
'ಟೋಟಲ್ ನೀ ರೀಪ್ಲೇಸ್‌ಮೆಂಟ್' ಎಂಬುದು ಆ ಚಿಕಿತ್ಸೆಯ ಹೆಸರು. ಮಂಡಿ ಮರುಜೋಡಣೆ ಇತ್ತೀಚೆಗೆ ಅಭಿವೃದ್ಧಿ ಹೊಂದಿರುವ ಆಧುನಿಕ ಚಿಕಿತ್ಸೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ 'ಫೋರ್ಟಿಸ್ ಆಸ್ಪತ್ರೆ'ಯಲ್ಲಿ ಮಂಡಿ ಮರುಜೋಡಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಗುತ್ತಿದೆ. 'ಪರ್ಸೋನ -ದಿ ಪರ್ಸೋನಲೈಜಡ್ ನೀ ಸಿಸ್ಟಮ್' ಹೆಸರಿನಲ್ಲಿ ಜಿಮ್ಮರ್ ಇಂಡಿಯಾ ಕೃತಕ ಮಂಡಿಗಳನ್ನು ಸಿದ್ಧಪಡಿಸುತ್ತಿದೆ. ಡಾ.ಜೆ.ವಿ. ಶ್ರೀನಿವಾಸ್ ಮಂಡಿ ಮರು ಜೋಡಣೆಯ ಮುಖ್ಯ ಸರ್ಜನ್.
ಸ್ಟಾಂಡರ್ಡ್ ನೀ ಸಿಸ್ಟಮ್‌ಗಿಂತಲೂ ಹೆಚ್ಚು ಉಪಯೋಗಕಾರಿ ಮತ್ತು ಆರೋಗ್ಯಕಾರಿಯಾಗಿ ಪರ್ಸೋನಾ ನೀ ಸಿಸ್ಟಮ್ ಬಳಕೆಗೆ ಬಂದಿದೆ. ಸಾಟಿಯಿಲ್ಲದ ವೈಯಕ್ತೀಕರಣ ಗುಣಮಟ್ಟದಿಂದ ಕೂಡಿದೆ. ಶಸ್ತ್ರಚಿಕಿತ್ಸಕಾರರಿಗೆ ಸಶಕ್ತವಾಗಿ ಮಂಡಿ ಜೋಡನೆಗೆ ಸಹಕಾರಿಯಾಗಿ ರೂಪಿತಗೊಂಡಿವೆ. ಪ್ರತಿಯೊಬ್ಬನ ಮಂಡಿಯ ಗಾತ್ರದ ಅನುಸಾರ 20 ಬಗೆಯ ಮಾದರಿಗಳಲ್ಲಿ ಕೃತಕ ಮಂಡಿಗಳು ಲಭ್ಯ. ಮೊಳಕಾಲಿಗೆ ಅಭೂತಪೂರ್ವ ಮೇಲ್ಮೈ ಕವಚ ಒದಗಿಸುತ್ತದೆ. ಅಳವಡಿಸುವಿಕೆ ಸುಲಲಿತವಾಗಿರುವಂತೆ ರಚಿತವಾಗಿವೆ. ಫ್ಲೆಕ್ಸಿಬಲ್ ಆಗಿದ್ದು ಮೆಟಲ್‌ನ ಮಂಡಿಯನ್ನು ಅಳವಡಿಸಲಾಗಿದೆ ಎಂಬುದನ್ನು ಮರೆಸುತ್ತದೆ. ಮೊದಲಿನಂತೆ ನಡೆದಾಡಲು ಸಹಕರಿಸುತ್ತದೆ ಎಂದು ವಿವರಿಸುತ್ತಾರೆ ಡಾ.ಶ್ರೀನಿವಾಸ್.
ಪರ್ಸೋನದ ಕೃತಕ ಮಂಡಿಗಳನ್ನು ಸರಳವಾಗಿ ಮತ್ತು ಸುಲಭವಾಗಿ ಜೋಡಿಸಬಹುದಾಗಿದೆ. ಸೂಕ್ತ ಗಾತ್ರಗಳಲ್ಲಿ ಸಿಗುವುದರಿಂದ ಯಾವುದೇ ಸಮಸ್ಯೆ ಇಲ್ಲ.
-ಡಾ.ಜೆ.ವಿ. ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


