ಆರೋಗ್ಯ-ಜೀವನಶೈಲಿ

ಕ್ಯಾನ್ಸರ್ ತಡೆಗೆ ರೆಡ್ ವೈನ್ ಮದ್ದು

ರೆಡ್ ವೈನ್ ನಲ್ಲಿರುವ ರೆಸ್ವಿರಟ್ರಾಲ್ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ತಡೆಯಲು ಸಹಕಾರಿಯಾಗುತ್ತದೆ ಎಂದು ಹೊಸ ...

ಕ್ಯಾನ್ಸರ್ ತಡೆಗೆ ರೆಡ್ ವೈನ್ ಮದ್ದು
ರೆಡ್ ವೈನ್
Published On :

ವಾಷಿಂಗ್ಟನ್: ರೆಡ್ ವೈನ್ ನಲ್ಲಿರುವ ರೆಸ್ವಿರಟ್ರಾಲ್ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ತಡೆಯಲು ಸಹಕಾರಿಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ಸಾಬೀತು ಪಡಿಸಿದೆ.

ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಬರಲು ಮದ್ಯವೇ ಕಾರಣ ಎಂದು ಹೇಳಿದ ಯುನಿವರ್ಸಿಟಿ ಆಫ್ ಕೊಲರಡೋ ಕ್ಯಾನ್ಸೆರ್ ಸೆಂಟರ್‌ನ ಡಾ. ರಾಬರ್ಟ್ ಕ್ಲಾಫನಿ , ಅತಿಯಾದ ಮದ್ಯದ ಸೇವನೆಯಿಂದ ಜೀವ ಕೋಶಗಳಿಗೆ ಹಾನಿಯುಂಟಾಗುತ್ತದೆ. ಆದೆರ ವೈನ್‌ನಲ್ಲಿರುವ ರೆಸ್ವಿರಟ್ರಾಲ್ ಹಾನಿಗೊಳಗಾದ ಜೀವಕೋಶಗಳನ್ನು ನಾಶ ಮಾಡುವ ಮೂಲಕ ಕ್ಯಾನ್ಸರ್ ತಡೆಗಟ್ಟುತ್ತದೆ.

ಮದ್ಯ ಸೇವನೆಯಿಂದಾಗಿ ಡಿಎನ್‌ಎಗೆ ಹಾನಿಗೊಳಗಾಗುತ್ತದೆ. ಅಲ್ಲಿನ ಒಂದು ಜೀವಕೋಶಕ್ಕೆ ಹಾನಿಯಾದರೆ ಅದು ಇನ್ನೊಂದು ಜೀವಕೋಶವನ್ನೂ ಹಾನಿ ಮಾಡುತ್ತದೆ. ಆದರೆ ರೆಸ್ವಿರಟ್ರಾಲ್ ಹಾನಿಯಾದ ಜೀವಕೋಶಗಳನ್ನು ನಾಶ ಮಾಡುವ ಶಕ್ತಿ ಇರುವುದರಿಂದ ಅಲ್ಲಿ ಕ್ಯಾನ್ಸರ್ ಹರಡುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಇದೇ ರೆಸ್ವಿರಟ್ರಾಲ್  ದೊಡ್ಡ ಕರುಳು ಮತ್ತು ಯಕೃತ್ತು ಕ್ಯಾನ್ಸರ್‌ನ್ನು ತಡೆಗಟ್ಟಲು ಸಾಧ್ಯವಾಗುವುದೇ? ಎಂಬುದರ ಬಗ್ಗೆ ಇದೀಗದ ಅಧ್ಯಯನ ನಡೆದುಕೊಂಡು ಬರುತ್ತಿದೆ ಎಂದು ಡಾ.ಕ್ಲಾಫನಿ ಹೇಳಿದ್ದಾರೆ.

ಅಡ್ವಾನ್ಸೆಸ್ ಇನ್ ಎಕ್ಸ್‌ಪೆರಿಮೆಂಟಲ್ ಮೆಡಿಸಿಲ್ ಆ್ಯಂಡ್ ಬಯಾಲಜಿಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.