ಆರೋಗ್ಯ-ಜೀವನಶೈಲಿ

ವಾಟರ್ ಅಲ್ಲ, ಡಾಕ್ಟರ್!

ವಾಟರ್ ಅಲ್ಲ, ಡಾಕ್ಟರ್!
Published On :

ನೀರಿನ ಬಗ್ಗೆ ನೂರಾರು ಸಿದ್ಧಾಂತಗಳುಂಟು. ಒಬ್ಬರು ದಿನಕ್ಕೆ ಇಂತಿಷ್ಟೇ ನೀರು ಕುಡೀಬೇಕು ಅಂದ್ರೆ ಮತ್ತೊಬ್ಬರದ್ದು ಬೇರೆ ಲೆಕ್ಕ. ಮಿನರಲ್ ವಾಟರ್ ಒಳ್ಳೇದು ಅಂದ್ರೆ, ಕುದಿಸಿ ಆರಿಸಿದ ನೀರಿನ ಮುಂದೆ ಯಾವುದೂ ಅಲ್ಲ ಅನ್ನೋದು ಹಳೆ ಥಿಯರಿ. ಒಟ್ಟಿನಲ್ಲಿ ಎಲ್ಲರೂ 'ನೀರು' ಕುಡಿಸುವವರೇ!
ನಮ್ಮ ದೇಹದ ಶೇ.70ಕ್ಕಿಂತಲೂ ಹೆಚ್ಚು ಪ್ರದೇಶವನ್ನು ಆವರಿಸಿರುವ ನೀರು ಮನುಷ್ಯನ ಅವಶ್ಯಗಳಲ್ಲಿ ಒಂದು. ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ, ಮ್ಯಾಗ್ನೇಷಿಯಂ ಹಾಗೂ ಕ್ಯಾಲ್ಸಿಯಂ ಸೇರಿದಂತೆ ಇತರೆ ಖನಿಜಾಂಶಗಳು ನೀರಲ್ಲಿರುತ್ತವೆ. ಸಿಕ್ಕ ಸಿಕ್ಕ ನೀರನ್ನು ಬೇಕಾಬಿಟ್ಟಿ ಕುಡಿದರೆ ಏನೂ ಉಪಯೋಗವಿಲ್ಲ. ಬದಲಾಗಿ ನಮ್ಮ ದೇಹದ ಅಗತ್ಯಗಳನ್ನು ಪೂರೈಸುವಂಥದ್ದನ್ನೇ ಕುಡೀಬೇಕು. ವಿಕಿರಣಗಳು, ರಾಸಾಯನಿಕ ವಸ್ತುಗಳು ಹಾಗೂ ಕೆಲವು ಸೂಕ್ಷ್ಮ ಜೀವಿಗಳಿಂದ ಕಲುಷಿತಗೊಳ್ಳುವ ನೀರು ತನ್ನ ಮಹತ್ವವನ್ನೇ ಕಳೆದುಕೊಳ್ಳುತ್ತದೆ. ದೇಹದ ಸಮತೋಲನವನ್ನೇ ಏರುಪೇರು ಮಾಡುವಂಥ ನೀರನ್ನು ಕುಡಿಯೋದಕ್ಕಿಂತ, ಕುಡಿಯದಿದ್ದರೇ ಒಳಿತು.  
ಹೊಸದೊಂದು ತಂತ್ರಜ್ಞಾನ
ಆರ್‌ಒ ಸಿಸ್ಟಂವುಳ್ಳ ವಾಟರ್ ಪ್ಯೂರಿಫೈಯರ್‌ನಿಂದ ಪೋಲಾಗುವ ನೀರನ್ನು ಆಯಸ್ಕಾಂತೀಯ ತಂತ್ರಜ್ಞಾನದಡಿಯಲ್ಲಿ ಶುದ್ಧೀಕರಿಸುವುದರಿಂದ ತಡೆಯಬಹುದು. ಆದರಿದು ಭಾರತದಲ್ಲಿನ್ನೂ ಹೆಚ್ಚು ಪ್ರಚಾರ ಪಡೆದಿಲ್ಲ. ಈ ತಂತ್ರಜ್ಞಾನದಿಂದ ಆಯಸ್ಕಾಂತೀಯ ಗುಣ ವಿಶೇಷಗಳನ್ನು ಹೊಂದುವ ನೀರು ದೇಹದ ಸಮತೋಲನವನ್ನು ಕಾಪಾಡಿ, ಆರೋಗ್ಯಕರ ಜೀವನ ನಡೆಸಲು ಸಹಕರಿಸುತ್ತದೆ.
    ಮೂತ್ರದಲ್ಲಿ ಪಿಎಚ್ ಲೆವೆಲ್ ಅನ್ನು ಸರಿಯಾಗಿರುವಂತೆ ನೋಡಿಕೊಂಡು ಆ್ಯಸಿಡ್ ಹಾಗೂ ಖನಿಜ ಲವಣಗಳು ಮೂತ್ರದಲ್ಲಿ ಹೊರ ಹೋಗುವಂತೆ ನೋಡಿಕೊಳ್ಳುತ್ತದೆ. ಈ ಕಿಡ್ನಿಯಲ್ಲಿನ ಕಲ್ಲುಗಳನ್ನು ಸಣ್ಣ ಚೂರುಗಳನ್ನಾಗಿಸಿ ರೋಗಿಗೆ ಯಾವುದೇ ನೋವಾಗದಂತೆ ಹೊರ ಹೋಗಲು ಆಯಸ್ಕಾಂತೀಯ ಗುಣವುಳ್ಳ ನೀರು ಅನುವು ಮಾಡಿಕೊಡುತ್ತದೆ. ಭವಿಷ್ಯದಲ್ಲೂ ಕಿಡ್ನಿ ಸ್ಟೋನ್ ಆಗದಂತೆ ಎಚ್ಚರವಹಿಸುತ್ತದೆ.
    ಮೂತ್ರ ಚೀಲದಲ್ಲಿ ಯಾವುದೇ ತೊಂದರೆಯಾದರೂ ಗುಣಪಡಿಸುವ ಶಕ್ತಿ ಈ ನೀರಿಗಿದೆ.
    ಪೂರ್ಣ ದೇಹದ ಆ್ಯಸಿಡಿಟಿಯನ್ನು ಕಡಿಮೆ ಮಾಡುವ ಈ ನೀರು ಜೀವಕೋಶಗಳು ಹೆಚ್ಚೆಚ್ಚು ಆ್ಯಕ್ಟಿವ್ ಆಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಪಿತ್ತರಸ ಹಾಗೂ ಆ್ಯಸಿಡ್ ಅನ್ನು ಕಡಿಮೆ ಮಾಡಿ ಜೀರ್ಣ ಕ್ರಿಯೆ ಸುಸೂತ್ರವಾಗಲು ನೆರವಾಗುತ್ತದೆ. ಅನಗತ್ಯ ವಸ್ತುಗಳು ದೇಹದಲ್ಲಿ ಶೇಖರಣೆಯಾಗದಂತೆ ಮಾಡಿ, ತ್ಯಾಜ್ಯಗಳನ್ನು ಹೊರ ಹಾಕುತ್ತದೆ.
    ಹೃದಯ ಹಾಗೂ ರಕ್ತದೊತ್ತಡವನ್ನು ಸಮ ಸ್ಥಿತಿಯಲ್ಲಿಡಲು ಈ ನೀರು ಒಳ್ಳೆಯದು. ಅಪಧಮನಗಳಲ್ಲಿ ಶೇಖರಣೆಗೊಂಡ ಕೊಬ್ಬು ಹಾಗೂ ಉಪ್ಪಿನಂಶವನ್ನೂ ಸ್ವಚ್ಛಗೊಳಿಸಬಲ್ಲದು ಈ ಆಯಸ್ಕಾಂತೀಯ ನೀರು.
    ಕಣ್ಣು ಊದಿಕೊಳ್ಳೋದು ಸೇರಿದಂತೆ ಕಣ್ಣಿಗೆ ಸಂಬಂಧಿಸಿದ ಇನ್‌ಫೆಕ್ಷನ್ ಹಾಗೂ ಗಾಯವಾದಾಗ ಈ ನೀರಿನಿಂದ ತೊಳೆದರೆ ಬಹು ಉಪಕಾರಿ. ಉತ್ತರ ಧ್ರುವೀಯವಾಗಿ ಆಯಸ್ಕಾಂತೀಯಗೊಳಿಸಿದ ನೀರು ಹೆಚ್ಚು ಆ್ಯಂಟಿಬಯಾಟಿಕ್ ಗುಣವನ್ನು ಹೊಂದುತ್ತದೆ.
    ಅಸ್ತಮಾ, ಕಫ, ಶೀತದಂಥ ಉಸಿರಾಟದ ತೊಂದರೆ ಹಾಗೂ ಕೆಲವು ಜ್ವರಕ್ಕೆ ಈ ನೀರಿನಿಂದ ಶಮನ ಸಾಧ್ಯ.
    ವಿಟಮಿನ್ ಹಾಗೂ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳುವ ಗುಣವುಳ್ಳ ಈ ನೀರಿನ ಸೇವನೆಯಿಂದ ದೇಹದಲ್ಲಿ ಆಕ್ಸಿಜನ್ ಅಂಶ ಹೆಚ್ಚುತ್ತದೆ.
ಸಸಿಗೂ ಅಗತ್ಯ
ಹೆಚ್ಚಿನ ಬೆಳೆ ತೆಗೆಯಲು, ಸಮೃದ್ಧವಾಗಿ ಹೂ ಬಿಡುವಂತೆ ಮಾಡಲು, ಸ್ಟ್ರಾಬರ್ರಿ, ಟೊಮೇಟೋ ಫಸಲು ಹೆಚ್ಚಾಗಲು, ಬೀಜ ಗಿಡವಾಗಲು, ಜೋಳದ ಉದ್ದ ಹೆಚ್ಚಾಗುವಂತೆ ಮಾಡಲು... ಹೀಗೆ ಎಲ್ಲವಕ್ಕೂ ಆಯಸ್ಕಾಂತೀಯ ಪ್ರಭಾವವುಳ್ಳ ನೀರು ಮುಖ್ಯ.


= ಡಾ. ಅಭಯಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.