ಆರೋಗ್ಯ-ಜೀವನಶೈಲಿ

ಸದಾ ಕಾಡುತ್ತಾ ನವೆಂಬರ್?

ಮೇಲ್ನೋಟಕ್ಕೆ ತುರಿಕೆ ಅನ್ನೋದು ತುಂಬಾ ಕ್ಷುಲ್ಲಕ ಅನಿಸಬಹುದಾದ ಕಿರಿಕಿರಿ. ಆದರೆ, ಅದನ್ನು ಹಾಗೆ ಬಿಟ್ಟರೆ...

ಸದಾ ಕಾಡುತ್ತಾ ನವೆಂಬರ್?
Published On :

ಮೇಲ್ನೋಟಕ್ಕೆ ತುರಿಕೆ ಅನ್ನೋದು ತುಂಬಾ ಕ್ಷುಲ್ಲಕ ಅನಿಸಬಹುದಾದ ಕಿರಿಕಿರಿ. ಆದರೆ, ಅದನ್ನು ಹಾಗೆ ಬಿಟ್ಟರೆ, ಅದು ಚರ್ಮರೋಗಕ್ಕೂ ಕಾರಣವಾಗಬಹುದು. ಒಂದು ಸಾರಿ ತುರಿಕೆ ಆರಂಭವಾದರೆ ಮತ್ತೆ ಮತ್ತೆ ಕೆರೆಯಬೇಕೆನಿಸುತ್ತದೆ. ಆದರೆ, ಅದು ಅಷ್ಟು ಒಳ್ಳೆಯದಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಚರ್ಮದ ಕಡಿತ (ನವೆ, ತುರಿಕೆ) ಒಂದು ರೀತಿಯ ಅನಪೇಕ್ಷಣೀಯ ಸಂವೇದನೆ. ಕಡಿತವಾಗುವ ಭಾಗವನ್ನು ತುರಿಸು, ಉಜ್ಜುವ ಪ್ರಕ್ರಿಯೆಗೆ ಪ್ರಚೋದಿಸುವುದು ಸೀಮಾರಹಿತ ನರಗಳ ಅಂಚುಗಳು. ಇದನ್ನು ಚರ್ಮದ ಮೇಲ್ಪದರದಲ್ಲಿರುವ ಸಿ/ಫೈಬರ್‌ಗಳು ರವಾನಿಸುತ್ತವೆ.

ಗಾಯ ವಾಸಿಯಾಗುವಾಗ...
ಗಾಯವಾದ ಚರ್ಮದ ಭಾಗವನ್ನು ಗುಣಪಡಿಸಲು ಹಲವು ರಾಸಾಯನಿಕ ಮಧ್ಯವರ್ತಿಗಳು ಅಂದರೆ ಹಿಸ್ಟಮೈನ್, ಪ್ರೊಸ್ಟಾಗ್ಲಾನ್ ಡೈನ್ ಹಾಗೂ ರಕ್ತದ ಜೊತೆಯಲ್ಲಿ ಕಂಡುಬರುವ ಬೆಳವಣಿಗೆಯ ಪ್ರಕ್ರಿಯೆಗಳಿಗೆ ಕಾರಣವಾಗುತ್ತವೆ. ಹಿಸ್ಟಮೈನ್ ಅಲೆರ್ಜಿನ್ ಕ್ರಿಯೆಗಳಿಗೆ ಪ್ರಮುಖ ರಾಸಾಯನಿಕ ಮಧ್ಯವರ್ತಿಯಾಗುತ್ತಿರುತ್ತದೆ. ಗಾಯ ವಾಸಿ ಮಾಡುವಲ್ಲಿ ಹಿಸ್ಟಮೈನ್‌ನ ಪಾತ್ರವೆಂದರೆ ರಕ್ತನಾಳಗಳ ಡಯಲೆಕ್ಟೇಷನ್‌ಗೆ ಅನುಕೂಲವಾಗಿ ಪ್ರತಿರೋಧ (ಇಮ್ಯೂನ್) ಸೆಲ್‌ಗಳು ಒಳಬರಲು ಸಹಾಯವಾಗುತ್ತದೆ. ಇದರಿಂದ ಗಾಯದಲ್ಲಿನ ಅಂಟು ರೋಗಗಳು ಇಲ್ಲವಾಗುತ್ತವೆ. ಅದೇ ಸಮಯದಲ್ಲಿ ಇದು ನರಗಳ ಅಂಚುಗಳ ಮೇಲೂ ಕೆಲಸ ಮಾಡುವುದರಿಂದ ಅಲ್ಲಿ ತುರಿಕೆಯ ಅನುಭವವಾಗುತ್ತದೆ. ಗುಣಮುಖವಾಗುವ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ಭಿನ್ನಗೊಂಡ ಸೆಲ್‌ಗಳು ಬದಲಾಯಿಸಲ್ಪಡುತ್ತವೆ. ನರಗಳ ಜೀವಕೋಶಗಳು ಕೂಡಾ ಗುಣಮುಖವಾಗುವ ಕಾರ್ಯದಲ್ಲಿ ಭಾಗಿಯಾಗಿರುತ್ತವೆ. ಹೊಸದಾಗಿ ಗುಣಮುಖವಾದ ನರಗಳ ಜೀವಕೋಶಗಳು ಬೆಳೆಯಲು ಆರಂಭವಾಗಿ ಅದು ಕ್ರಿಯಾಶೀಲವಾಗಲು ಸಂಜ್ಞೆ ಕೊಡಲು ಮತ್ತು ತೆಗೆದುಕೊಳ್ಳಲು ಆರಂಭಿಸಿತೆಂದರೆ ಗಾಯ ವಾಸಿಯಾಗುತ್ತಿರುವ ಸಂಕೇತವಾಗಿರುತ್ತದೆ. ಇಲ್ಲಿ ಕಡಿತ ಸಾಮಾನ್ಯ ಪ್ರಕ್ರಿಯೆ.

ಏನೇನು ಪ್ರಚೋದಕ?
ಗಾಯಗೊಂಡಿರುವ ಚರ್ಮದ ಭಾಗ ದೇಹದ ಇತರೆ ಭಾಗಕ್ಕಿಂತ ಅತಿ ತೆಳುವಾಗಿದ್ದು, ಹೊಸದಾಗಿ ರೂಪುಗೊಂಡ ನರಗಳು ಉದ್ದೀಪನಕ್ಕೆ ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತದೆ. ಹೊಸದಾಗಿ ರೂಪುಗೊಂಡಿರುವ ಚರ್ಮಕ್ಕೆ ಅಗತ್ಯವಾದ ತೈಲ ಗ್ರಂಥಿಗಳು ಸಿಕ್ಕಿರುವುದಿಲ್ಲ. ಈ ರೀತಿಯ ಶುಷ್ಕತೆ (ಡ್ರೈನೆಸ್) ಕಡೆ ನರಗಳ ಅಂಚುಗಳಲ್ಲಿ ತುರಿಕೆ ಉಂಟು ಮಾಡುತ್ತದೆ. ಕೊಲಾಜೆನ್ (ಮೃದ್ವಸ್ಥ) ಜೀವ ವೈಜ್ಞಾನಿಕ ಸೇತುವಾದ ಫೈಬರ್‌ಗಳಾಗಿದ್ದು, ಅದೊಂದು ಮನುಷ್ಯನ ಸಂಯೋಜಕ ಊತಕ (ಕನೆಕ್ಟಿವ್ ಟಿಷ್ಯೂ). ಮೊದಲಿಗೆ ಕೊಲಾಜೆನ್‌ಗಳು ಬೆಳೆಯುವ ಸಮಯದಲ್ಲಿ ಒಂದೇ ರೀತಿಯಾಗಿ ಇರುವುದಿಲ್ಲ. ಇದು ಬಿಗುವಾಗಿದ್ದು, ಗಾಯ ವಾಸಿಯಾಗುತ್ತಿರುವ ಭಾಗ ಚಲಿಸುವಂತೆ ಮಾಡಿದಾಗ ಈ ಫೈಬರ್‌ಗಳು ವಿಕಸನಗೊಂಡು ಅದೂ ನಮಗೆ ನೋವು ಅಥವಾ ತುರಿಕೆ ಉಂಟುಮಾಡುತ್ತದೆ. ಕೆಲವೊಮ್ಮೆ ಯಾಂತ್ರಿಕ ಉದ್ದೀಪನ (ಮೆಕಾನಿಕಲ್ ಸ್ಟಿಮುಲಿ)ಗಳಿಂದ ತಣ್ಣನೆಯ ಗಾಳಿ ಅಥವಾ ಇನ್ಯಾವುದೇ ರಾಸಾಯಿನಿಕಗಳು ಸದಾ ತುರಿಕೆಗೆ ಪ್ರಚೋದಕವಾಗುತ್ತದೆ.

ಅಲರ್ಜಿಯೂ ಕಾರಣ
ನಾವು ಗಾಯಕ್ಕೆ ಬಳಸುವ ಮುಲಾಮುಗಳು ಅಥವಾ ಔಷಧಗಳು ಮತ್ತು ಆ ಭಾಗಕ್ಕೆ ಹಾಕುವ ಔಷಧಯುಕ್ತ ಪಟ್ಟಗಳು ಕೆಲವರ ಚರ್ಮಕ್ಕೆ ಒಗ್ಗದೇ ಅಲರ್ಜಿ ಆದಾಗಲೂ ತುರಿಕೆಯುಂಟಾಗುತ್ತದೆ. ಇನ್ನೂ ಕೆಲವರಿಗೆ ಕೀಲಾಯ್ಡ್ ಉಂಟಾಗುವ ಸಾಧ್ಯತೆಗಳಿದ್ದು, ಅಂಥವರಿಗೆ ಗಾಯ ಮಾಗಲು ನಿಧಾನವಾಗಿ, ಕಡಿತ ಬಹಳ ಸಮಯ ಇರುತ್ತದೆ.

-ಕೆ.ಎಸ್.ಸೋಮೇಶ್ವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.