ಆರೋಗ್ಯ-ಜೀವನಶೈಲಿ

ದಾಹಕ್ಕೆ ಎಳನೀರು ದಾರಿ

ಅಧಿಕ ಜೀವಸತ್ವ, ಖನಿಜಾಂಶಗಳಿರುವ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ನಿಸರ್ಗದತ್ತವಾಗಿ ಸುಲಭ ಬೆಲೆಗೆ ...

ದಾಹಕ್ಕೆ ಎಳನೀರು ದಾರಿ
Published On :

ಅಧಿಕ ಜೀವಸತ್ವ, ಖನಿಜಾಂಶಗಳಿರುವ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ನಿಸರ್ಗದತ್ತವಾಗಿ ಸುಲಭ ಬೆಲೆಗೆ ಸಿಗುವ ಎಳನೀರನ್ನು ಸೇವಿಸುವುದರ ಲಾಭಗಳು ಹಲವಾರು...
    ಉರಿಮೂತ್ರ ಕಡಿಮೆಯಾಗುತ್ತದೆ.
    ಹೃದಯ, ಪಿತ್ತಕೋಶ ಮತ್ತು ಮೂತ್ರ ಪಿಂಡಗಳಿಗೆ ಸಂಬಂಧಿಸಿದ ರೋಗಗಳಿಂದ ನರಳುವವರಿಗೆ ರಾಮಬಾಣ.
    ಒಂದು ಗ್ಲಾಸ್ ಎಳನೀರಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ನಿತ್ಯ ಸೇವಿಸಿದರೆ ನರದೌರ್ಬಲ್ಯ ನಿವಾರಣೆ.
    ಬೊಜ್ಜು ದೇಹವಿದ್ದರೆ ವಾರಕ್ಕೆ ಒಂದು ದಿನ ಎಳೆನೀರು ಕುಡಿದು ಉಪವಾಸ ಮಾಡಿದರೆ ದೇಹ ತೂಕ ಇಳಿಯುತ್ತದೆ.
    ಅತಿಸಾರ, ವಾಂತಿಯಾದಾಗ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಎಳನೀರು ಕುಡಿಯುವುದರಿಂದ ಬಳಲಿಕೆ ನಿವಾರಣೆಯಾಗುವುದು.
    ಅಂಗಾಲುಗಳು, ಅಂಗೈ ಉರಿಯುತ್ತಿದ್ದರೆ ಎಳನೀರು ಮತ್ತು ಸುಣ್ಣದ ತಿಳಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ, ಒಂದು ಚಿಟಿಕೆ ಅರಿಶಿನ ಪುಡಿ ಸೇರಿಸಿ ಅಂಗಾಲು, ಅಂಗೈಗೆ ಹಚ್ಚಿದರೆ ನೋವು ನಿವಾರಣೆಯಗುತ್ತದೆ.
    ಗರ್ಭಿಣಿಯರಿಗೆ ಮೂತ್ರ ವಿಸರ್ಜನೆ ಸಮಯದಲ್ಲಿ ಉರಿ ಬರುತ್ತಿದ್ದರೆ ಎಳನೀರು ಕುಡಿಯಬೇಕು.



ಬಸವರಾಜ ಗಂ. ಪುರಾಣಿಕಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.