ಆರೋಗ್ಯ-ಜೀವನಶೈಲಿ

ಕುಣಿದರೆ ಚೆನ್ನ...

ಕುಣಿದರೆ ಚೆನ್ನ...
Published On :

ನೃತ್ಯವು ಮನಸ್ಸನ್ನು ಮುದಗೊಳಿಸುವುದರೊಂದಿಗೆ ದೇಹದ ಕೆಲವು ಅಂಗಗಳಿಗೆ ಉತ್ತಮ ವ್ಯಾಯಾಮ ಒದಗಿಸುತ್ತದೆ...


ನೃತ್ಯ ದೇಹ, ಮನಸ್ಸು ಮತ್ತು ಭಾವನೆಗಳ ಸಂಕೀರ್ಣತೆಯುಳ್ಳ ಕಲೆ. ಸೃಜನಾತ್ಮಕ ಕೂಡಾ. ಹೀಗಾಗಿ ಪ್ರತಿ ನೃತ್ಯವೂ ಮನಸ್ಸನ್ನು ಮುದಗೊಳಿಸುವುದರೊಂದಿಗೆ ದೇಹದ ಕೆಲವು ಅಂಗಗಳಿಗೆ ಉತ್ತಮ ವ್ಯಾಯಾಮ ಒದಗಿಸುತ್ತದೆ. ಇದು ಹಲವು ಕಾಯಿಲೆಗಳಿಗೆ ಚಿಕಿತ್ಸಕ ರೂಪದಲ್ಲಿ ಕೆಲಸ ಮಾಡುತ್ತದೆ. ಮನಸ್ಸು, ದೇಹ ಎರಡೂ ಪ್ರಫುಲ್ಲವಾಗಿದ್ದರೆ ಕಾಯಿಲೆಗಳಿಗೆ ಜಾಗವೆಲ್ಲಿ? ನೃತ್ಯ ಚಿಕಿತ್ಸೆಯ ಒಂದು ವಿಹಂಗಮ ನೋಟ ಇಲ್ಲಿದೆ.

ಉಪಯೋಗಗಳು
ಕೆಲವು ವ್ಯಾಯಾಮಗಳು ಎಲ್ಲ ಅಂಗಾಂಗಗಳನ್ನು ತಲುಪುದಿಲ್ಲ. ಆದರೆ, ನೃತ್ಯವು ದೇಹದ ಅಡಿಯಿಂದ ಮುಡಿವರೆಗೆ ತಲುಪಿ, ಮನೋಲ್ಲಾಸಕರ ಅನುಭವ ನೀಡುವುದರ ಜೊತೆಗೆ, ಇಡೀ ನರವ್ಯೂಹವನ್ನು ಚೇತೋಹಾರಿಯಾಗಿಸುತ್ತದೆ.
ನೃತ್ಯ ಸೃಜನಶೀಲವಾಗಿದ್ದು, ಸೂಕ್ತ ಸಂಗೀತ ಸಂಯೋಜನೆಯಿಂದ ಅದರ ಸೊಗಸು ವರ್ಧಿಸುತ್ತದೆ. ನೃತ್ಯ ಚಿಕಿತ್ಸೆಯಲ್ಲಿ ಭಾಗವಹಿಸುವರು ಇದು ಚಿಕಿತ್ಸೆ ಎಂಬ ಅರಿವಿಲ್ಲದೆ ಆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ನೃತ್ಯದ ದೃಶ್ಯ ಪರಿಣಾಮವಾಗಿ ಮಾನಸಿಕ ಒತ್ತಡ, ದೇಹದ ಬೊಜ್ಜು ಕಡಿಮೆಯಾಗುತ್ತದೆ.
ನೃತ್ಯದ ವೇಗಕ್ಕೆ ರಕ್ತ ಪರಿಚಲನೆ ಹೆಚ್ಚಿ ಮೆದುಳು ಶಾರ್ಪ್ ಆಗುತ್ತದೆ. ಹೃದಯ ಗಟ್ಟಿಯಾಗುತ್ತದೆ.
 ಎಲ್ಲ ವಿಧದ ನೃತ್ಯಗಳಲ್ಲೂ ಒಂದಿಲ್ಲೊಂದು ಚಿಕಿತ್ಸಕ ಅಂಶ ಇದ್ದೇ ಇರುತ್ತದೆ. ಅವುಗಳಲ್ಲಿ ಕೆಲವು ಇಲ್ಲಿವೆ...

ಶುಗರ್‌ಗೆ ಮಯೂರ ನೃತ್ಯ
ಸೌಂದರ್ಯದ ಪ್ರತೀಕ, ದೈವಾಂಶ ಸಂಭೂತ ಪಕ್ಷಿ ನವಿಲಿನ ನೃತ್ಯ ಮಾಡಿದರೆ ಮಧುಮೇಹವೇನು, ಎಲ್ಲ ಕಾಯಿಲೆಯಿಂದ ಮುಕ್ತಗೊಳ್ಳಬಹುದು. ಅದರ ನಡೆ, ಮುಂದಕ್ಕೆ ಬಗ್ಗಿ ಹೆಜ್ಜೆ ಹಾಕುವ ರೀತಿ ಹೊಟ್ಟೆಯ ಹಾಗೂ ಸೊಂಟದ ಎಲ್ಲ ಭಾಗಗಳಿಗೂ ಚಿಕಿತ್ಸೆ ನೀಡುತ್ತದೆ. ಇದರಿಂದ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಿಸುತ್ತದೆ.

ಕಥಕ್
ಈ ನೃತ್ಯದ ಪಾದಗಳ ಅಡವು ತತ್ಕಾರ್ ರಕ್ತದ ಚಲನೆಗೆ ಸಹಕರಿಸುತ್ತದೆ. ಪಲ್ಟಾಸ್ ದೇಹವನ್ನು ಬಗ್ಗಿಸಿ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ತಿರುಗಿಸುವುದರಿಂದ ಬೊಜ್ಜು ಕರಗಿಸಲು ಸಹಕಾರಿಯಾಗುತ್ತದೆ.
ಕೋಲಾಟ (ದಾಂಡಿಯ)
ಈ ಸಾಂಪ್ರದಾಯಿಕ ಜಾನಪದ ನೃತ್ಯ ಮನಸ್ಸಿನ ದಣಿವೆಯನ್ನು ಶಾಂತಗೊಳಿಸುವುದರ ಜೊತೆಗೆ ಬೊಜ್ಜು ಕರಗಿಸಲು ಪರಿಣಾಮಕಾರಿಯಾಗಿದೆ.

ಹಾವಿನ ನೃತ್ಯ
ನೆಲದ ಮೇಲೆ ಮುದುರಿಕೊಂಡು ನಂತರ ನೇರವಾಗಿ ಹರಿಯುವ ರೀತಿ, ಮುಂದಕ್ಕೂ ಹಿಂದಕ್ಕೂ ಜೋಲಾಡುವ ರೀತಿ ಬೊಜ್ಜು ಕರಗಿಸುವುದರ ಜೊತೆಗೆ, ಬೆನ್ನುಹುರಿಯನ್ನು ಶಕ್ತಿಯುತವಾಗಿರಿಸುತ್ತದೆ.

ಉಚಿತ ತರಬೇತಿ
ಏ.29 ' ವಿಶ್ವ ಅಂತಾರಾಷ್ಟ್ರೀಯ ನೃತ್ಯ ದಿನ'. ಅಂದು ಫ್ರೆಂಚ್ ನೃತ್ಯ ಕಲಾವಿದ ಜೀನ್ ಜಾರ್ಜಸ್ ನೋವೆರ್ ಜನ್ಮ ದಿನ. ಅಂತಾರಾಷ್ಟ್ರೀಯ ಖ್ಯಾತಿಯ 'ಸೃಷ್ಟಿ ಅಭಿನಯ ಕಲಾವಿದ ಕೇಂದ್ರ' 8ನೇ ವರ್ಷದ ವಿಶ್ವನೃತ್ಯ ದಿನಾಚರಣೆಯನ್ನು 8 ದಿನ 8 ವೇದಿಕೆಗಳಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಂಗವಾಗಿ ಡಾ. ಎ.ವಿ. ಸತ್ಯನಾರಾಯಣ ಅವರು ಅಧ್ಯಯನ ನಡೆಸಿ ಅವಿಷ್ಕಾರ ಮಾಡಿರುವ ನೃತ್ಯದಲ್ಲಿ ಅಡಗಿರುವ ಚಿಕಿತ್ಸಾ ಮೌಲ್ಯಗಳ ಕಾರ್ಯಾಗಾರವನ್ನು ಏ.29ರಿಂದ ಮೇ 5ರವರೆಗೆ ರವೀಂದ್ರ ಕಲಾಕ್ಷೇತ್ರದ ಒಳ ಆವರಣದಲ್ಲಿ ನಿತ್ಯ ಬೆಳಗ್ಗೆ 10ರಿಂದ 11ರವರೆಗೆ ಉಚಿತವಾಗಿ ನಡೆಸಲಾಗುತ್ತಿದೆ. ವಿವರಗಳಿಗೆ ಮೊ. 9845698089 ಸಂಪರ್ಕಿಸಬಹುದು.

= ಎ.ವಿ. ಸತ್ಯನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.