ಹಾಸಿಗೆ ಹುಣ್ಣು
ಹಾಸಿಗೆ ಹುಣ್ಣುಗಳು ಅಥವಾ ಬೆಡ್‌ಸೋರ್ ಎಂದರೆ ಬಹಳ ದಿನಗಳಿಂದ ಮಲಗಿದ್ದಲ್ಲೇ ಮಲಗಿ ಆಗುವಂಥ ವ್ರಣಗಳು (ಹುಣ್ಣುಗಳು). ಈ ಹುಣ್ಣುಗಳು ರೋಗಿಗಳಿಗೆ ಒಂದು ಶಾಪ. ರೋಗಿ ತನ್ನ ರೋಗಕ್ಕಿಂತ ಹೆಚ್ಚಾಗಿ ಇವುಗಳಿಂದ ಬಹಳೇ ಕಷ್ಟ ಅನುಭವಿಸಬೇಕಾಗುತ್ತದೆ. ಇದನ್ನು ನೋಡಲೂ ಆಗದು. ಅಂದಮೇಲೆ ಅನುಭವಿಸುವವರು ಕಷ್ಟ ಬೇರೆಯವರಿಗೆ ತಿಳಿಸುವುದು ಅಸಾಧ್ಯ.
ರೋಗಿಯ ಸೇವೆ ಮಾಡುವವರ ಅಲಕ್ಷ್ಯದಿಂದ ಹಾಸಿಗೆ ಹುಣ್ಣುಗಳಾಗುತ್ತವೆ. ಅಸಹಾಯಕನಾದ ರೋಗಿಯ ಸೇವೆ ಮಾಡುವವರು ಬಹಳ ಲಕ್ಷ್ಯ ಕೊಟ್ಟು, ಕಾಳಜಿಯಿಂದ ನೋಡಿಕೊಂಡಲ್ಲಿ ಮಾತ್ರ ಈ ಹುಣ್ಣುಗಳು ಆಗದಂತೆ ತಡೆಯಬಹುದು. ಇಂಥವರ ಸೇವೆ ಮಾಡುವವರಿಗೆ ಬಹಳ ಸಹನೆ ಅಗತ್ಯ.
ಆಗದಂತೆ ಎಚ್ಚರವಹಿಸಿ...
ಈ ಹುಣ್ಣುಗಳನ್ನು ಗುಣಪಡಿಸುವುದು ಕಷ್ಟ. ಹೀಗಾಗಿ, ಇವು ಆಗದಂತೆ ಎಚ್ಚರ ವಹಿಸುವುದೊಳಿತು. ಒಂದೇ ಜಾಗದಲ್ಲಿ ಮನುಷ್ಯನ ಚರ್ಮ ಹಾಸಿಗೆಗೆ ತರಿದು ತರಿದು ಚರ್ಮ ಸವೆದು ಅಲ್ಲಿಯೇ ನೋವಾಗುತ್ತದೆ. ಆ ನೋವು ಹೆಚ್ಚಾಗಿ ದೊಡ್ಡ ಹುಣ್ಣುಗಳಾಗುತ್ತವೆ. ಎಚ್ಚರ ತಪ್ಪಿದಲ್ಲಿ ಆ ಹುಣ್ಣುಗಳಲ್ಲಿ ಹುಳುಗಳಾಗುವುದುಂಟು.
ಏನು ಮಾಡಬೇಕು?
- ಒಂದೇ ಕಡೆಯ ಚರ್ಮ ಸವೆಯದಂತೆ ರೋಗಿಗಳನ್ನು ಮೇಲಿಂದ ಮೇಲೆ ಜಾಗ ಬದಲಿಸಿ ಹೊರಳಿಸುತ್ತಿರಬೇಕು.
- ಎರಡನೆಯದಾಗಿ ಹಾಸಿಗೆಗೆ ಹತ್ತುವ ಚರ್ಮದ ಭಾಗವನ್ನು ಮೆತ್ತಗಿಡಬೇಕು. ಇದಕ್ಕೆ ಪೆಟ್ರೋಲಿಯಂ ಜೆಲ್ಲಿ ಎಂಬ ವಾಸನೆ ಇಲ್ಲದ ವ್ಯಾಸಲಿಲ್ ಸಿಗುತ್ತದೆ. ಇದನ್ನು ಸವೆಯುತ್ತಿರುವ ಚರ್ಮದ ಭಾಗಕ್ಕೆ ದಿನಕ್ಕೆ 3 ಸಲವಾದರೂ ಹಚ್ಚಬೇಕು (ನೋವಾಗದಂತೆ).
- ಯಾವುದಾದರೂ ಟಾಲ್ಕಂ ಪೌಡರ್ ಉದುರಿಸಬೇಕು.
- ಒಂದೇ ಕಡೆ ಚರ್ಮದ ಮೇಲೆ ಭಾರ ಬೀಳದಂತೆ ರೋಗಿಯುನ್ನು ಮೇಲಿಂದ ಮೇಲೆ ಹೊರಳುಸುತ್ತಿರಬೇಕು.
- ಮಾರುಕಟ್ಟೆಯಲ್ಲಿ ಈಗ ವಾಟರ್ ಬೆಡ್‌ಗಳೂ ಲಭ್ಯವಿದ್ದು, ಅವುಗಳ ಸಕಾಲಿಕ ಬಳಕೆಯಿಂದ ಈ ಅನಾಹುತ ತಪ್ಪಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

