ಆರೋಗ್ಯ-ಜೀವನಶೈಲಿ

ಹೊಟ್ಟೆಯುರಿನಾ?

ಹೊಟ್ಟೆಯುರಿನಾ?
Published On :

ಬಾಯಿಗೂ ಹೊಟ್ಟೆಗೂ ಅವಿನಾಭಾವ ಸಂಬಂಧವಿದ್ದರೂ ಕೆಲವೊಮ್ಮೆ ಹೊಟ್ಟೆಗೆ ಬೇಕೆನಿಸುವುದು ಬಾಯಿಗೆ ಬೇಡವಾಗಿರುತ್ತದೆ. ಹೊಟ್ಟೆ ಬೇಡವೆನ್ನುವುದನ್ನು ಬಾಯಿ ಬೇಕೇ ಬೇಕು ಎನ್ನುತ್ತಿರುತ್ತದೆ. ಹೀಗಾಗಿಯೇ ಹಲವು ಕಾಯಿಲೆಗಳು ನಮಗೆ ಬಂದುಬಿಡುತ್ತವೆ.

ಆ್ಯಸಿಡಿಟಿ ಎಂಬುದೂ ಹೀಗೆ ಸಿಕ್ಕಸಿಕ್ಕ ಆಹಾರ ತಿನ್ನುವುದರಿಂದಲೇ ಆವರಿಸಿಕೊಳ್ಳುವ ಆರೋಗ್ಯ ಸಮಸ್ಯೆ. ಆ್ಯಸಿಡಿಟಿ 'ಹೊಟ್ಟೆಕಿಚ್ಚು' ಅಥವಾ 'ಹೊಟ್ಟೆಯುರಿ' ಎಲ್ಲ ಕಾಯಿಲೆಗಳಿಗೂ ಬುನಾದಿಯೂ ಹೌದು. ಆದ್ದರಿಂದಲೇ ಬಂದಿರುವ ಆ್ಯಸಿಡಿಟಿ ಹೋಗಲಾಡಿಸಲು ಮತ್ತು ಹತ್ತಿರ ಬರಲು ಸಿದ್ಧವಾಗಿರುವ ಈ ಹೊಟ್ಟೆಕಿಚ್ಚನ್ನು ಇನ್ನಷ್ಟು ದೂರ ಓಡಿಸಲು ಉತ್ತಮ ಆಹಾರ ಕ್ರಮದಿಂದ ಸುಲಭಸಾಧ್ಯ.

  • ಬೆಳಗಿನ ತಿಂಡಿಯ ಸಮಯದಲ್ಲಿ ಓಟ್ಸ್ ತಿಂದರೆ ಗ್ಯಾಸ್ಟ್ರಿಕ್ ಕಡಿಮೆಯಾಗುವುದು.
  • ಒಣ ಶುಂಠಿ ಸ್ವಲ್ಪ ಖಾರವಿದ್ದರೂ, ನಿರ್ದಿಷ್ಟ ಪ್ರಮಾಣದಲ್ಲಿ ತಿಂದಾದ ಆ್ಯಸಿಡಿಟಿ ನಿವಾರಣೆ ಸಾಧ್ಯ. 
  • ಲೋಳೆಸರ ಅಥವಾ ಅಲ್‌ವೆರಾ ಮನೆಯಲ್ಲಿರುವುದು ಒಳ್ಳೆಯದು. ಆ್ಯಸಿಡಿಟಿಯಿಂದ ಎದೆಯುರಿ ಕಾಣಿಸಿಕೊಂಡಾಗ ಲೋಳೆಸರವನ್ನು ತಿನ್ನಬಹುದು ಮತ್ತು ಅದರ ಜ್ಯೂಸ್ ಮಾಡಿ ಕುಡಿದರೆ ಉರಿ ಬೇಗ ಶಮನವಾಗುತ್ತದೆ.
  • ಹೊಕೂಸು, ಬೀನ್ಸ್, ಹಸಿರು ತರಕಾರಿ ಮತ್ತು ಸೊಪ್ಪು ಆ್ಯಸಿಡಿಟಿಗೆ ರಾಮಬಾಣ. ಹಸಿರು ತರಕಾರಿಗಳನ್ನು ಹಸಿಯಾಗಿಯೇ ತಿಂದರೆ ಉತ್ತಮ.
  • ಪಾಲಿಷ್ ಮಾಡಿದ ಅಕ್ಕಿಗಿಂತಲೂ, ಪಾಲಿಷ್ ಮಾಡದ ಕೆಂಪಕ್ಕಿ ರುಚಿಕರವೂ ಹೌದು, ಆ್ಯಸಿಡಿಟಿಯ ನಿವಾರಕವೂ ಹೌದು.
  • ತಣ್ಣನೆಯ ಹಾಲನ್ನು ನಿರ್ದಿಷ್ಟ ಸಮಯದಲ್ಲಿ ಎರಡು, ಮೂರು ಚಮಚ ಕುಡಿಯುತ್ತಾ ಬಂದರೆ ಆ್ಯಸಿಡಿಟಿಯಿಂದ ದೂರ ಇರಬಹುದು. ಕಾಫಿಯ ಬದಲು ಹರ್ಬಲ್ ಟೀ ಕುಡಿಯದರೂ ಒಳಿತು. ನಿತ್ಯ ಒಂದು ಲೋಟ ಬಿಸಿನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
  • ನಿತ್ಯದ ಆಹಾರದೊಂದಿಗೆ ಬಾಳೆಹಣ್ಣು, ಸೌತೆಕಾಯಿ, ಕಲ್ಲಂಗಡಿಗಳನ್ನು ತಿನ್ನುತ್ತಿದ್ದರೆ ಗ್ಯಾಸ್ಟ್ರಿಕ್ ಬಾರದು. ದಿನಾ ಎಳನೀರು ಸೇವನೆ ಹಾಗೂ ಪುದೀನಾ ಎಲೆಯನ್ನು ನೀರಿಗೆ ಹಾಕಿ ಕುದಿಸಿ, ಊಟದ ನಂತರ ಕುಡಿದರೆ ಒಳ್ಳೆಯದು.
  • ಊಟದ ನಂತರ ಒಂದು ಲವಂಗ ಜಗಿಯಿರಿ. ಇದು ಜೀರ್ಣಕ್ರಿಯೆಗೂ ಸಹಕಾರಿ. ಚ್ಯೂಯಿಂಗ್ ಗಮ್‌ನಿಂದಲೂ ಆ್ಯಸಿಡಿಟಿ ನಿವಾರಣೆ ಸಾಧ್ಯ. ಬೆಳ್ಳುಳ್ಳಿಯೂ ಗ್ಯಾಸ್ಟ್ರಿಕ್ ಹಾರಕ.
  • ಆ್ಯಸಿಡಿಟಿ ಇದ್ದವರು ಸಿಗರೇಟು ಮತ್ತು ಖಾರ ಪದಾರ್ಥಗಳಿಂದ ಕಡ್ಡಾಯವಾಗಿ ದೂರ ಇರಬೇಕು.
- ಸುಧೀಂದ್ರ ಜಮ್ಮಟಿಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.