ಆರೋಗ್ಯ-ಜೀವನಶೈಲಿ

ಬೆಂಕಿ ಬಿತ್ತು!

ಹೊಟ್ಟೆಯಲ್ಲಿನ ವಾಯುವಿಕೋಪ ಅಂಶಗಳು ಅನ್ನನಾಳದ ಮೂಲಕ ಅಪ್ರಯತ್ನಪೂರ್ವಕವಾಗಿ ವಾಂತಿ ರೂಪದಲ್ಲಿ ಹೊರಬರುವ ಸ್ಥಿತಿಯೇ 'ಗ್ಯಾಸ್ಟ್ರೋ ...

ಬೆಂಕಿ ಬಿತ್ತು!
Published On :

ಹೊಟ್ಟೆಯಲ್ಲಿನ ವಾಯುವಿಕೋಪ ಅಂಶಗಳು ಅನ್ನನಾಳದ ಮೂಲಕ ಅಪ್ರಯತ್ನಪೂರ್ವಕವಾಗಿ ವಾಂತಿ ರೂಪದಲ್ಲಿ ಹೊರಬರುವ ಸ್ಥಿತಿಯೇ 'ಗ್ಯಾಸ್ಟ್ರೋ ಈಸೋಫೇಗಲ್ ರಿಫ್ಲಕ್ಸ್ ಡಿಸಾರ್ಡರ್‌' (ಜಿಇಆರ್‌ಡಿ). ಇದೊಂದು ಸಾಮಾನ್ಯ ಸಂಗತಿಯಾಗಿದ್ದು, ದಿನದಲ್ಲಿ ಹಲವು ಬಾರಿ ಮರುಕಳಿಸಬಹುದು.
ದೇಹದೊಳಗಿರುವ ನಿರೋಧಕ ಅಂಶಗಳಾದ ಆ್ಯಂಟಿ ರಿಫ್ಲಕ್ಸ್ ಬ್ಯಾರಿಯರ್ ಮೂಲಕ ಉಮ್ಮಳಿಕೆಯು ನಿಯಂತ್ರಿತವಾಗಿರುತ್ತದೆ. ಈ ಅಂಶಗಳು ಕ್ಷಣಿಕ ಸಡಿಲಿಕೆಯನ್ನು ಹೊರತುಪಡಿಸಿ ಯಾವಾಗಲೂ ಸಂಕೋಚನ ಸ್ಥಿತಿಯಲ್ಲಿರುವ ಸ್ವಾಭಾವಿಕ ಅಂಗರಚನೆಯ ಭಾಗಗಳಾದ ಕೆಳ ಈಸೋಫೇಗಲ್ ಸಂಪೀಡಕ ಸ್ನಾಯುವನ್ನು ಒಳಗೊಂಡಿರುತ್ತವೆ. ವ್ಯಕ್ತಿಯೊಬ್ಬ ಆಹಾರ- ನೀರನ್ನು  ತೆಗೆದುಕೊಂಡಾಗ ಇದು ತೆರೆದುಕೊಳ್ಳುತ್ತದೆ. ಆಗ ವಪೆಯಲ್ಲಿ ಪಿಂಚ್‌ಕಾರ್ಕ್ ಕ್ರಿಯೆ ಉಂಟಾಗಿ, ಕಿಬ್ಬೊಟ್ಟೆಯಲ್ಲಿ ಸುಮಾರು 1 ಸೆಂ.ಮೀ. ಈಸೋಫೇಗಸ್ ಒಳಗೊಂಡ ಫ್ರಿನೋಈಸೋಫೇಗಲ್ ಲಿಗಮೆಂಟ್ ಹೊಟ್ಟೆಯೊಳಗೆ ಸುತ್ತಿ ಬಳಸಿ ಪ್ರವೇಶಿಸುತ್ತದೆ. ಇದೇ ರೀತಿ ಹಿಯಾಟಸ್ ಹರ್ನಿಯಾ ಕೇಸಿನಲ್ಲಿ ಕಿಬ್ಬೊಟ್ಟೆಯಲ್ಲಿರುವ ಈಸೋಫೇಗಸ್ ಭಾಗದ ಬದಲಾಗಿ ಎದೆಯೊಳಗೆ ಒತ್ತಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಹೈಪೊಟೆನ್ಸಿವ್ ಎಲ್‌ಇಎಸ್ ಅಥವಾ ಹೆಚ್ಚಿನ ಪ್ರಮಾಣದ ಎಲ್‌ಇಎಸ್ ಟ್ರಾನ್ಸಿಯಂಟ್ ರಿಲಾಕ್ಸೇಷನ್ ಸಂಭವಿಸಬಹುದು. ಆಗಲೂ ನಮ್ಮ ದೇಹ ವ್ಯವಸ್ಥೆಯು ಅನ್ನನಾಳದ ಚಲನೆಯಿಂದ ಆಮ್ಲವನ್ನು ತೆರವುಗೊಳಿಸುತ್ತದೆ. ಹಾಗೂ ಈಸೋಫೇಗಲ್ ಸಬ್ ಮ್ಯೂಕೋಸಲ್ ಗ್ರಂಥಿಗಳಿಂದ ಬೈಕಾರ್ಬೋನೇಟ್ ಸ್ರವಿಸಿ ಲಾವಾರಸದ ಮೂಲಕ ಆಮ್ಲವು ಸ್ಥಿರೀಕರಣಗೊಳ್ಳುತ್ತದೆ. ಒಂದು ವೇಳೆ ಈ ತಡೆಯೂ ವಿಫಲವಾದಲ್ಲಿ ಟಿಶ್ಯೂ ರೆಸಿಸ್ಟೆನ್ಸ್ ಕೂಡ ಸಹಾಯ ಮಾಡುತ್ತದೆ. ಇಂಥ ತಡೆಗಳಿಂದ ಜಿಇಆರ್‌ಡಿ ಕಾಣಿಸಿಕೊಳ್ಳುತ್ತದೆ.

ಕಾರಣಗಳು ಅನೇಕ...

  •     ಬೊಜ್ಜಿನ ಸಮಸ್ಯೆ.
  •     ಎಚ್ ಪೈಲರಿ ಸೋಂಕಿನ ವ್ಯಾಪಕತೆಯಲ್ಲಿನ ಇಳಿಕೆ.
  •     ಆಹಾರ ಪದ್ಧತಿಯ ಬದಲಾವಣೆ.
  •     ಒತ್ತಡ, ಧೂಮಪಾನ, ಮದ್ಯಪಾನ ಮುಂತಾದವು.
ರೋಗ ಲಕ್ಷಣಗಳೇನು?
  •     ಹೃದಯದಲ್ಲಿ ಉರಿ, ಎದೆ ನೋವು, ಆಹಾರ ಜಗಿಯುವಾಗ ತೊಂದರೆ.
  •     ಕೆಲವು ವೇಳೆ ಅಸ್ತಮಾ.
  •     ರಾತ್ರಿ ಹೆಚ್ಚಿನ ಪ್ರಮಾಣದ ಕೆಮ್ಮು, ಗಂಟಲು ಊತ.
  •     ಕಿವಿನೋವು ಹಾಗೂ ಹಲ್ಲಿನ ಸವೆತ.
  •     ನಿದ್ರಾಹೀನತೆ.
  •     ಶ್ರವಣಾಂಗದ ಮೇಲೆ ಒತ್ತಡ.
ರೋಗ ಪತ್ತೆ ಹೇಗೆ?
  •     ಆಹಾರ ಜಗಿಯುವಲ್ಲಿ ತೊಂದರೆ.
  •     ರಕ್ತಸ್ರಾವ.
  •     ತೂಕದಲ್ಲಿ ಇಳಿಕೆ.
  •     ಆ್ಯಂಟಾಸಿಕ್ ಔಷಧಿಗಳಿಗೆ ಪ್ರತಿಕ್ರಿಯೆ ಸಾಧ್ಯವಾಗದೇ ಇದ್ದಲ್ಲಿ ರೋಗ ವಿಚಾರಣಾ ಪರೀಕ್ಷಾ ಕ್ರಮಗಳ ಅವಶ್ಯಕತೆಯಿರುತ್ತದೆ.
  •     ಬಯಾಪ್ಸಿಗಳನ್ನು ಒಳಗೊಂಡ ಅಥವಾ ಹೊರತಾದ ಎಂಡೋಸ್ಕೋಪಿ, 24 ಗಂಟೆಗಳ ಪಿಎಚ್ ಮಾನೆಟರಿಂಗ್, ಕಾಂಟ್ರಾಸ್ಟ್ ಎಕ್ಸ್‌ರೇಗಳು ಹಾಗೂ ಮ್ಯಾನೋಮೆಟ್ರಿ ಮುಂತಾದ ಕ್ರಮಗಳನ್ನು ಇದು ಒಳಗೊಳ್ಳುತ್ತದೆ.
ಅಪಾಯ ಏಕೆ?
  •     ಅಲ್ಸರ್ ಆ್ಯಕ್ಷನ್‌ಗಳು
  •     ಸಂಕೋಚನ
  •     ಹ್ಯಾಮರೇಜ್
  •     ತೂತುಕೊರೆತ
ತಡೆ ಹೇಗೆ?
  •     ಉತ್ತಮ ಜೀವನಶೈಲಿ ಮತ್ತು ಆಹಾರ ಅಭಿರುಚಿಗಳನ್ನು ಅಳವಡಿಸಿಕೊಳ್ಳಬೇಕು.
  •     ಹಾಸಿಗೆಯ ತಲೆಭಾಗವನ್ನು ಎತ್ತರಿಸುವುದು.
  •     ರಾತ್ರಿ ಟೈಟಾಗಿರುವ ಬಟ್ಟೆಗಳನ್ನು ಧರಿಸದಿರುವುದು.
  •     ಮಲಗುವ ವೇಳೆಯಲ್ಲಿ ದೇಹಕ್ಕೆ ಒಗ್ಗದ ತಿನಿಸುಗಳನ್ನು ತಿನ್ನದಿರುವುದು.
  •     ತೂಕ ಇಳಿಸಿಕೊಳ್ಳುವುದು.
  •     ಧೂಮಪಾನ ಹಾಗೂ ಮದ್ಯಪಾನವನ್ನು ತ್ಯಜಿಸುವುದು.
  •     ಊಟದ ಪ್ರಮಾಣದಲ್ಲಿ ಕಡಿಮೆ ಮಾಡುವುದು.
  •     ಚಾಕೊಲೇಟ್, ವಾಯು ಪ್ರಕೋಪವನ್ನು ಹೆಚ್ಚಿಸುವ ತಿನಿಸುಗಳು, ಕೊಬ್ಬು, ಮಸಾಲೆ ಪದಾರ್ಥಗಳು, ಟೊಮೇಟೊ ಇರುವ ಆಹಾರಗಳು, ಸಿಟ್ರಸ್ ಪಾನೀಯಗಳು, ಕಾಫಿ, ಚಹಾ, ಕೋಲಾ ಇರುವ ಪಾನೀಯಗಳನ್ನು ವರ್ಜಿಸುವುದು.
ಮೇಲ್ವಿಚಾರಣೆ ಅಗತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.