ಆರೋಗ್ಯ-ಜೀವನಶೈಲಿ

ತಿನ್ಬೇಡಾ ಕಮಿ ನೀ ಸಕ್ಕರೆಯಾ!

ತಿನ್ಬೇಡಾ ಕಮಿ ನೀ ಸಕ್ಕರೆಯಾ!
Published On :

ಸಿಹಿ ಇದೆ ಎಂದ ಮಾತ್ರಕ್ಕೆ ಬೇಕಾದಷ್ಟು ತಿಂದರೆ ತೊಂದರೆ ತಪ್ಪಿದ್ದಲ್ಲ. ಯಾಕೆಂದರೆ, ನಾವು ತಿನ್ನುವ ಆಹಾರದಲ್ಲಿ ಕಾರ್ಬೋಹೈಟ್ರೇಟ್‌ಗಳು ಸಮೃದ್ಧವಾಗಿರುತ್ತವೇನೋ ನಿಜ. ಆದರೆ, ಅಪಾಯವಂತೂ ಇದ್ದೇ ಇರುತ್ತದೆ.
ಉದಾಹರಣೆಗಾಗಿ ಬೆಳ್ತಿಗೆ ಅಕ್ಕಿ, ಆಲೂಗಡ್ಡೆ ಹಾಗೂ ಸಕ್ಕರೆ ಹೊಂದಿರುವ ತಿಂಡಿಗಳು ಮತ್ತು ಪಾನೀಯಗಳು, ಸಿಹಿ ತಿಂಡಿಗಳು ಮತ್ತು ಪಿಷ್ಟ ಹೊಂದಿರುವ ಕಾರ್ಬೊಹೈಡ್ರೇಟ್‌ಗಳು ಶರೀರಕ್ಕೆ ಶಕ್ತಿಯನ್ನು ನೀಡುತ್ತವೆ. ಹಾಗಂತ ಅವುಗಳನ್ನು ಅತಿಯಾಗಿ ಸೇವಿಸುವುದರಿಂದಾಗಿ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಸಕ್ಕರೆಯಲ್ಲಿ ಕೇವಲ ಕ್ಯಾಲೋರಿಗಳಿವೆ ಹಾಗೂ ಯಾವುದೇ ವಿಟಮಿನ್‌ಗಳು, ಖನಿಜಾಂಶಗಳಿಲ್ಲ. ಒಂದು ಚಮಚದಲ್ಲಿ 16 ಕ್ಯಾಲೋರಿಗಳಷ್ಟು ಶಕ್ತಿ ಒದಗಿಸುತ್ತದೆ. ಹಾಗಾಗಿ, ಸಕ್ಕರೆ ಹೆಚ್ಚಾಗಿ ಸೇವಿಸುವುದರಿಂದ ಅದೊಂದು ಚಟವಾಗಿ ಪರಿಣಮಿಸುತ್ತದೆ. ಇದರಿಂದ ಯಾವುದೇ ಪೌಷ್ಟಿಕಾಂಶ ದೇಹಕ್ಕೆ ದೊರೆಯುವುದಿಲ್ಲ. ಕಾಲಕಳೆದಂತೆ ಗಂಭೀರವಾದ ಆರೋಗ್ಯ ಪರಿಣಾಮಗಳು ಉಂಟಾಗುತ್ತವೆ. ಅತಿಯಾದ ಸಕ್ಕರೆ ಸೇವನೆಯಿಂದ ಜಗತ್ತಿನಲ್ಲಿ ಪ್ರತಿವರ್ಷ 35 ದಶಲಕ್ಷ ಜನರು ಸಾವಿಗೀಡಾಗುತ್ತಾರೆ ಎಂಬುದು ಅದರ ಪರಿಣಾಮವನ್ನು ಸೂಚಿಸುತ್ತದೆ.
ಮದ್ಯ ಹಾಗೂ ತಂಬಾಕು ಸೇವನೆ ನಿಯಂತ್ರಿಸುವಂತೆ ಸಕ್ಕರೆ ಸೇವನೆಯನ್ನು ಕೂಡಾ ನಿಯಂತ್ರಿಸುವಲ್ಲಿ ಮುಂದಾಗಬೇಕು ಎಂದು ಕೆಲವು ಅಂತಾರಾಷ್ಟ್ರೀಯ ವಿಜ್ಞಾನಿಗಳು ಒತ್ತಾಯಿಸುತ್ತಿದ್ದಾರೆ. ಮದ್ಯಪಾನದಂತೆ ಸಕ್ಕರೆ ಕೂಡಾ ಲಿವರ್‌ಗೆ (ಜಠರಕ್ಕೆ) ಹಾನಿಯುಂಟು ಮಾಡುತ್ತದೆ. ಸಕ್ಕರೆಯನ್ನು ಕೊಳೆಯುವಂತೆ ಮಾಡುವ ಮದ್ಯವನ್ನು ತೆಗೆಯವ ಕಾರಣ, ಇದರಿಂದಲೇ ಅವುಗಳ ಸಂಬಂಧವನ್ನು ಅರಿತುಕೊಳ್ಳಬಹದು. ಹೆಚ್ಚುತ್ತಿರುವ ಸಕ್ಕರೆ ಸೇವನೆ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಭೀತಿಯನ್ನು ತಂದುದೊಡ್ಡಿದೆ ಎಂದು 'ನೇಚರ್‌' ಪತ್ರಿಕೆಯಲ್ಲಿ ವಿಜ್ಞಾನಿಗಳು ತಮ್ಮ ವಾದವನ್ನು ಮಂಡಿಸಿದ್ದಾರೆ.

ಏನೇನು ತೊಂದರೆ?

  •     ಜೀವಕೋಶಗಳ ಏರುಪೇರು.
  •     ಅತಿಯಾದ ರಕ್ತದ ಒತ್ತಡ.
  •     ಡಯಾಬಿಟಿಸ್.
  •     ಇನ್ಸುಲಿನ್ ಪ್ರತಿರೋಧಕತೆ.
  •     ಕೊಬ್ಬಿನ ಅಂಶ ಹೆಚ್ಚುವುದು.
  •     ಅಕಾಲ ವೃದ್ಧಾಪ್ಯ.
  •     ಹೃದಯದ ಸಮಸ್ಯೆಗಳು.
  •     ಬೊಜ್ಜುತನ, ಹಲ್ಲು ಹಾಳಾಗುವುದು.
  •     ಪೌಷ್ಟಿಕಾಂಶ ಕೊರತೆ.
  •     ಕ್ಯಾನ್ಸರ್ ಸಾಧ್ಯತೆ.
ಪರಿಹಾರ ಹೇಗೆ?
- ವನಿತಾ ಅಶೋಕ್, ಫಿಟ್ನೆಸ್ ಎಕ್ಸ್‌ಪರ್ಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.