ಆರೋಗ್ಯ-ಜೀವನಶೈಲಿ

ಚೈಲ್ಡ್ ಚಟ

ತಮಗರಿವಿಲ್ಲದೆಯೇ ಮಾಡಿದ ಕ್ರಿಯೆಯನ್ನು ಮತ್ತೆಮತ್ತೆ ಪುನರಾವರ್ತಿಸುವುದಕ್ಕೆ ಚಟ ಎನ್ನುತ್ತಾರೆ. ಮಕ್ಕಳೂ ಇದರಿಂದ ಹೊರತಾಗಿಲ್ಲ...

ಚೈಲ್ಡ್ ಚಟ
Published On :

ತಮಗರಿವಿಲ್ಲದೆಯೇ ಮಾಡಿದ ಕ್ರಿಯೆಯನ್ನು ಮತ್ತೆಮತ್ತೆ ಪುನರಾವರ್ತಿಸುವುದಕ್ಕೆ ಚಟ ಎನ್ನುತ್ತಾರೆ. ಮಕ್ಕಳೂ ಇದರಿಂದ ಹೊರತಾಗಿಲ್ಲ.
ಸೂಕ್ತ ಬೆಳವಣಿಗೆ ಹಂತದಲ್ಲಿರುವ ಪ್ರತಿ ಮಗುವಿಗೂ ಚಟಗಳಿರುತ್ತವೆ. ಇವು ಕೆಲವೇ ಕೆಲವು ದಿನಗಳಲ್ಲಿ ಮರೆಯಾದರೆ ಮತ್ತೆ ಕೆಲವು ಮಕ್ಕಳಲ್ಲಿ ದೀರ್ಘಕಾಲೀನವಾಗಿರುತ್ತದೆ. ಆದರೆ ಯಾವುದೇ ಚಟ ಮಕ್ಕಳಿಗೆ ತೊಂದರೆ ಕೊಡಬಹುದಾದಲ್ಲಿ ಅದನ್ನು ಅನಾರೋಗ್ಯಕಾರಿ ಚಟಗಳೆನ್ನುತ್ತಾರೆ. ಇಂಥ ಚಟಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ?

  • ಪೋಷಕರ ಪ್ರೀತಿಯಿಂದ ಮಗು ವಂಚಿತವಾದರೆ, ಅದರಲ್ಲಿ ತಾಯಿಯ ಗಮನದ ಕೊರತೆಯಿಂದ.
  • ಮಗುವಿಗೆ ಕಾಡುವ ಅಭದ್ರತೆ, ಅಸುರಕ್ಷಿತ ಭಾವನೆ.
  • ಭಯ, ಸಿಟ್ಟು, ಗಾಬರಿ ಮುಂತಾದ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ.
  • ಇತರರ ಮೇಲೆ ಹಾನಿ-ಹಲ್ಲೆ ಮಾಡುವ ಮನಸ್ಥಿತಿ ರೂಢಿಸಿಕೊಂಡಾಗ.
  • ಹೆಚ್ಚು ಮಕ್ಕಳಿದ್ದು, ಸೂಕ್ತ ಗಮನದ ಕೊರತೆಯಾದರೆ.
  • ಕಲಿಕೆಗೆ ಕಷ್ಟವಾದಾಗ. ಇತರೆ ಮಕ್ಕಳು, ಹೊಸ ಜಾಗ, ಹೊಸ ಸದಸ್ಯರೊಡನೆ ಹೊಂದಾಣಿಕೆ ಕಷ್ಟವಾದಾಗ.
  • ಭಾವನಾತ್ಮಕ ಒತ್ತಡವನ್ನು ಹೊರ ಹಾಕಲು.

ಆಗುವ ಸಮಸ್ಯೆ ಅಷ್ಟಿಷ್ಟಲ್ಲ
  •     ಆಗಾಗ ಕಾಡುವ ಸೋಂಕು, ನೆಗಡಿ, ಕೆಮ್ಮು
  •     ಉಗುರಿನ ಕೊಳೆ ಜೀರ್ಣಾಂಗಕ್ಕೆ ಸೇರಿ ಹೊಟ್ಟೆ ನೋವು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು.
  •     ಮಾನಸಿಕ-ದೈಹಿಕ ಆರೋಗ್ಯ ತೊಂದರೆಗಳು.
  •     ಆಹಾರ ವಿಷವಾಗಿ, ವಾಂತಿ-ಭೇದಿ.
  •     ಬೆರಳುಗಳ ಬೆಳವಣಿಗೆಯಲ್ಲಿ ಕುಂಠಿತ.
  •     ಬಾಯಿಯ ದುರ್ವಾಸನೆ.
  •     ದೈಹಿಕವಾಗಿ ಗಾಯಗೊಳ್ಳುವ ಸಾಧ್ಯತೆ.
  •     ಮಾತನಾಡಲು ತೊಂದರೆ, ಸಂವಹನ ಕೊರತೆ.
  •     ಮುಖ್ಯವಾಗಿ ಬಾಯಿ, ಹಲ್ಲಿಗೆ ಸಂಬಂಧಿಸಿದ ತೊಂದರೆಗಳು.
  •     ಮುಂಭಾಗದಲ್ಲಿ ಬಾಚಿದ ಹಲ್ಲುಗಳು, ನಡುವೆ ಸಂಧಿಗಳು.
  •     ಸವೆಯುವ ಹಲ್ಲು-ವಸಡು ವಕ್ರವಾಗುವ ಹಲ್ಲುಗಳು.
  •     ಚಿಕ್ಕದಾಗುವ ತುಟಿಗಳು, ಬಾಯಿ ಸದಾ ತೆರೆದೇ ಇರುವುದು. ಇದರಿಂದ ಊಟ ಮಾಡಲು ತೊಂದರೆ.
ಏನು ಮಾಡಬೇಕು?
  •     ಚಟಗಳಿಗೆ ಕಾರಣ ಹುಡುಕಿ ಚಿಕಿತ್ಸೆ ನೀಡಿ.
  •     ದೇಹ ಮನಸ್ಸು, ಎರಡನ್ನೂ ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.
  •     ಮೂರು ವರ್ಷಗಳ ನಂತರ ಮಕ್ಕಳಿಗೆ ಅವರ ಚಟಗಳಿಂದಾಗಬಹುದಾದ ಸಮಸ್ಯೆಗಳನ್ನು ವಿವರಿಸಿ.
  •     ಚಟ ಬಿಡಿಸಲು ಶಿಕ್ಷಿಸಬೇಡಿ, ಹಿಂಸಿಸಬೇಡಿ.
  •     ಮಕ್ಕಳ ಕೈಗಳು ಸದಾ ಕಾರ್ಯಮಗ್ನರಾಗಿರುವಂತೆ ನೋಡಿಕೊಳ್ಳಿ.
  •     ಮಕ್ಕಳಲ್ಲಿ ಉತ್ತಮ ಹವ್ಯಾಸ, ಕಲೆ ಚಿತ್ರಕಲೆಗಳತ್ತ ಆಸಕ್ತಿ ಮೂಡಿಸಿ
  •     ಪೋಷಕರು ಸಾಧ್ಯವಾದಷ್ಟು ಮಕ್ಕಳ ಜೊತೆಗೆ ಬೆರೆಯಿರಿ. ಅವರಿಗೆ ಆಟವಾಡಿಸಿ, ಮಲಗುವಾಗ ಕಥೆ ಹೇಳಿ, ಹಾಡು ಹೇಳಿ ಮಲಗಿಸಿ, ಅಭದ್ರತಾ ಭಾವನೆ ಹೋಗಲಾಡಿಸಿ.
  •     ಬೆರಳುಗಳಿಗೆ ಬ್ಯಾಂಡೇಜ್, ಉಗುರುಗಳಿಗೆ ಬಣ್ಣ, ಉದ್ದ ತೋಳಿನ ದೊಡ್ಡವರ ಷರ್ಟ್ ಹಾಕಿ. ಇದರಿಂದ ಬೆರಳುಗಳತ್ತ ಅವರ ಗಮನ ಮೂಡುವುದಿಲ್ಲ.
  •     ತುಟಿ ಮತ್ತು ನಾಲಿಗೆಗೆ ಲಘು ವ್ಯಾಯಾಮ ಮಾಡಿಸಿ.
  •     ಪದೇ ಪದೇ ಅವರನ್ನು ಚಟ ಬಿಡುವಂತೆ ಕಾಡದಿರಿ.
  •     ಚಟ ಬಿಡುವ ಲಕ್ಷಣ ತೋರಿಸಿದಾಗ ಪ್ರಶಂಸಿಸಿ, ಪ್ರೋತ್ಸಾಹಿಸಿ, ಸಣ್ಣ-ಪುಟ್ಟ ಬಹುಮಾನ ನೀಡಿ.
ಪತ್ತೆ ಹಚ್ಚೋದು ಹೇಗೆ?
ಬಾಯಿಂದ ಉಸಿರಾಡುತ್ತಿದ್ದಾರೆಯೇ?
    ಬೆರಳು ಚೀಪುತ್ತಿದ್ದಾರೆಯೇ?
    ಉಗುರು ಕಡಿಯುತ್ತಿದ್ದಾರೆಯೇ?
    ತುಟಿ ಕಚ್ಚುತ್ತಿದ್ದಾರೆಯೆ?
    ಹಲ್ಲು ಕಡಿಯುತ್ತಾರೆಯೇ?
- ಡಾ. ಕೆ.ವಿ. ಸಂತೋಷ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.