ಪ್ರೊಬಯೋಟಿಕ್ಸ್

ನಮ್ಮ ಶರೀರ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡುತ್ತಲೇ ಇರುತ್ತದೆ. ಆದರೆ ನವಜಾತ ಶಿಶುಗಳಲ್ಲಿ ಈ ರೋಗ ನಿರೋಧಕ ಸಾಮರ್ಥ್ಯ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಪರಿಣಾಮ ಮಕ್ಕಳು ಕಾಯಿಲೆಗೆ ಒಳಗಾಗುವ ಅಪಾಯ ಹೆಚ್ಚು.
ಇದಕ್ಕೆ ಮಗುವಿನ ಜನನದ ವೇಳೆ ಹೊಟ್ಟೆಯಲ್ಲಿ ಸೇರಿಕೊಳ್ಳುವ ಬ್ಯಾಕ್ಟೀರಿಯಾಗಳೇ ಕಾರಣ. ಹಾಗಾಗಿ ಮಕ್ಕಳು ಆಗಾಗ್ಗೆ ಕಾಯಿಲೆಗೆ ಒಳಗಾಗುತ್ತಾರೆ. ಇದರಿಂದ ರಕ್ಷಿಸಲು ಅವರಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವಂತೆ ಮಾಡಬೇಕು. ಮಗುವಿನ ಜೀರ್ಣಶಕ್ತಿ ಉತ್ತಮವಾದಷ್ಟು ಅದರ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ಮಾನವ ಶರೀರದಲ್ಲಿ ಚರ್ಮ, ಕೂದಲು, ನಾಲಗೆ, ರಕ್ತ ಎಲ್ಲೆಡೆಯೂ 100 ಟ್ರಿಲಿಯನ್‌ಗಿಂತಲೂ ಅಧಿಕ ಸೂಕ್ಷ್ಮ ಹುಳುಗಳಿವೆ! ಹಾಗಂತೆ ಹೆದರಬೇಕಿಲ್ಲ. ಅವುಗಳಲ್ಲಿ ಹೆಚ್ಚಿನವು ನಮ್ಮ ಆರೋಗ್ಯಕ್ಕೆ ಅಗತ್ಯ. ಈ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ಸಣ್ಣ ಕರುಳಿನಲ್ಲಿ ವಾಸಿಸುತ್ತವೆ. ಇವು ಒಂದು ರೀತಿಯ ರಾಸಾಯನಿಕಗಳನ್ನು ಬಿಡುಗಡೆಗೊಳಿಸುತ್ತವೆ. ಇವು ಹಾನಿಕಾರಕ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುವ ಮುಂಚೆಯೇ ಕೊಲ್ಲುತ್ತವೆ. ನಮ್ಮ ಆಹಾರದ ಮೂಲಕ ನಮ್ಮ ಶರೀರ ಸೇರುವ ಹಾನಿಕಾರಕ ಸೂಕ್ಷ್ಮ ಜೀವಾಣುಗಳ ವಿರುದ್ಧ ಹೋರಾಡಿ ಅವುಗಳನ್ನು ನಾಶಪಡಿಸುತ್ತವೆ ಮತ್ತು ನಮ್ಮ ದೇಹದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧವೂ ಹೋರಾಡುತ್ತವೆ. ಈ ವೈರುಧ್ಯವೇ ಆರೋಗ್ಯ ಸಂತುಲನೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ತಾಯಿ ಹಾಲು ಕುಡಿದರೆ ಗಟ್ಟಿ
ಸಾಮಾನ್ಯ ಪ್ರಸವದ ವೇಳೆಯಲ್ಲಿ ಜನನದ ಹಾದಿಯಲ್ಲಿ ನವಜಾತ ಮಗು ಒಳ್ಳೆಯ ಬ್ಯಾಕ್ಟೀರಿಯಾ ಡೋಸನ್ನು ತಾಯಿಯಿಂದ ಪಡೆಯುತ್ತದೆ. ಈ ಬ್ಯಾಕ್ಟೀರಿಯಾಗಳು ಮೊಲೆಹಾಲಿನಲ್ಲೂ ಇರುತ್ತವೆ. ಹಾಗಾಗಿ ತಾಯಿಹಾಲನ್ನು ಕುಡಿಯುವ ಹಸುಗೂಸುಗಳು ಸಾಕಷ್ಟು ಆರೋಗ್ಯವಂತವಾಗಿರುತ್ತವೆ. ಈಗ ಪ್ರೊಬಯೋಟಿಕ್ಸ್ ಕೂಡಾ ಇದಕ್ಕೆ ಪರ್ಯಾಯ ಉತ್ತರವಾಗಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಆಹಾರದೊಂದಿಗೆ ಸೇರಿಸಲಾಗುವ ಪ್ರೊಬಯೋಟಿಕ್ಸ್ ಸಣ್ಣ ಕರುಳಿನಲ್ಲಿ ರಕ್ಷಣಾ ಕವಚ ನಿರ್ಮಿಸಿ ಹಸುಗೂಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕರಿಸುತ್ತದೆ.
ಯಾವುದೇ ಮಗುವಿನ ಜೀವನದಲ್ಲಿ ಜನನದಿಂದ 2 ವರ್ಷದೊರೆಗಿನ ಕಾಲಾವಧಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಗತ್ಯ. ಇದಕ್ಕಾಗಿ ಪ್ರೊಬಯೋಟಿಕ್ಸ್ ಮೇಲೆ ವೈದ್ಯರು ವಿಶೇಷ ಭರವಸೆ ಇಟ್ಟಿದ್ದಾರೆ.
- ಡಾ. ಆದರ್ಶ್ ಇ., ಮಕ್ಕಳ ತಜ್ಞ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


