ನಡು ಭಾರ

ಮಹಿಳೆ ಮಧ್ಯಮ ವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಬೊಜ್ಜು ಕಾಡ ತೊಡುತ್ತದೆ. ವಯಸ್ಸಾದಂತೆಲ್ಲ ಶರೀರದಲ್ಲಿಯ ಹಾರ್ಮೋನ್‌ಗಳ ಅಸಮತೋಲನ ತಲೆದೋರುತ್ತದೆ. ಐಷಾರಾಮಿ ಜೀವನ ಚಟುವಟಿಕೆರಹಿತ ಚದುರಂಗದಾಟಕ್ಕೆ ಅನುವು ಮಾಡುತ್ತದೆ. ಬೊಜ್ಜಿಗೆ ನಾಂದಿ ಹಾಡುತ್ತದೆ.
40 ವಸಂತಗಳು ದಾಟಿದ ನಂತರ ಮೆದುಳಿನ ಅಡಿಯಲ್ಲಿ ಪಿಟ್ಯುಟರಿ ಗ್ರಂಥಿಯ ಪ್ರಚೋದನೆಗೆ ಮಹಿಳೆಯರ ಕಿಬ್ಬೊಟ್ಟೆಯ ಬುಡದ ಅಂಡಾಶಯಗಳು ಪ್ರತಿಕ್ರಿಯಿಸುವುದಿಲ್ಲ. ಅಥವಾ ಅಲ್ಪ ಸ್ವಲ್ಪ ಸ್ಪಂದಿಸಬಹುದು. ಹೀಗಾಗಿ ಲೈಂಗಿಕ ರಸದೂತವಾದ ಇಸ್ಟ್ರೋಜನ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.
ಥೈರಾಯ್ಡ್ ಗ್ರಂಥಿಯ ಹಾರ್ಮೋನ್‌ಗಳು ಶರೀರದ ಚಯಾಪಚಯ (ಂಜಡಿಛಛ್ಟಿಟ್ಝಡಟ) ಕ್ರಿಯೆಗೆ ಹೇಗೆ ಅವಶ್ಯವೋ ಹಾಗೆ ಇಸ್ಟ್ರೋಜನ್ ಕೂಡಾ. ಶರೀರದಲ್ಲಿ ಇಸ್ಟ್ರೋಜನ್ ಹೆಚ್ಚಿದಂತೆ ಚಯಾಚಪಯ ಕ್ರಿಯೆ ಹೆಚ್ಚಾಗುತ್ತದೆ. ಆಮ್ಲಜನಕದ ಬಳಕೆಯೂ ಹೆಚ್ಚುತ್ತದೆ. ಕ್ಯಾಲರಿಗಳ ಕೋರಿಕೆ ಬಹಳವಾಗುತ್ತದೆ. ಇಸ್ಟ್ರೋಜನ್ ಕೊರತೆ ಮದ್ಯಮ ವಯಸ್ಸಿನ ಮಹಿಳೆಯರಲ್ಲಿ ತಲೆದೋರುವುದರಿಂದ ಇವುಗಳ ತದ್ವಿರುದ್ಧದ ಪರಿಣಾಮಗಳಿಗೆ ಹಾದಿ ಮಾಡಿ ಕೊಡುತ್ತದೆ. ಜತೆಗೆ ತಮ್ಮ ಚಟುವಟಿಕೆಗಳಿಗೆ ತಕ್ಕಂತೆ ಆಹಾರ ಸೇವನೆಯಲ್ಲಿ ಮಾರ್ಪಾಡನ್ನು ಮಹಿಳೆಯರು ಸಾಮಾನ್ಯವಾಗಿ ಮಾಡುವುದಿಲ್ಲವಾದ್ದರಿಂದ ತಮಗೆ ಅರಿವಿಲ್ಲದಂತೆ ಬೊಜ್ಜು ಬೆಳೆಯುತ್ತದೆ.
ಕಡಿಮೆಯಾಗುತ್ತೆ ಜವಾಬ್ದಾರಿ
ಮಧ್ಯಮ ವಯಸ್ಸಿನಲ್ಲಿ ಮಹಿಳೆಯರು ಮಕ್ಕಳನ್ನು ಬೆಳೆಸುವ ದೈಹಿಕ ಹಾಗೂ ಮಾನಸಿಕ ಒತ್ತಡ ಹಾಗೂ ಪರಿಶ್ರಮಗಳ ಬಂಧನದಿಂದ ತುಸು ನಿರಾಳವಾಗುತ್ತಾರೆ. ಶಕ್ತಿಯ ವಿನಿಯೋಗ ಕಡಿಮೆಯಾಗಿರುತ್ತದೆ. ಆದರೆ ಹೆಚ್ಚು ತಿನ್ನುವ ಹವ್ಯಾಸ, ಐಷಾರಾಮಿ ಮನೋಭಾವ ಬಲಿಯುತ್ತಿರುತ್ತದೆ. ಇವೆಲ್ಲವುಗಳು ಬೊಜ್ಜು ಶೇಖರಣೆಗೆ ಸಹಕರಿಸುತ್ತದೆ. ಬೊಜ್ಜು ಶೇಖರಣೆ ಆಲಸ್ಯತನಕ್ಕೂ, ಆಲಸ್ಯತನ ಬೊಜ್ಜು ಶೇಖರಣೆಗೂ ಎಡೆಮಾಡಿಕೊಡುತ್ತದೆ. ಹೀಗಾಗಿ ಒಮ್ಮೆ ಆದಿ ಅಂತ್ಯಗಳಿಲ್ಲದ ಈ ವಿಷವೃತ್ತಕ್ಕೆ ಸಿಲುಕಿದರೆ ಹೊರಬರುವುದು ಕಷ್ಟ.
ಹೆಚ್ಚುವರಿ ತೂಕ (ಕಢಜ್ಠ ಗಿಝ್ಝ್ಜಡಿ) ಹಾಗೂ ಬೊಜ್ಜು (ಕಛಿಜಡಜ) ಒಂದೇ ಅರ್ಥ ಬರುವ ಪದಗಳಲ್ಲ. ಹೆಚ್ಚುವರಿ ತೂಕದವರು ಬೊಜ್ಜಿನವರಾಗಿರಬೇಕು ಎಂದಿಲ್ಲ. ಕ್ರೀಡಾಪಟುಗಳಲ್ಲಿ, ಪರಿಶ್ರಮ ಜೀವಿಗಳಲ್ಲಿ ಮಾಂಸಖಂಡಗಳು ಬಲಿಷ್ಠವಾಗಿ ಬೆಳವಣಿಗೆಯಾಗುವುದರಿಂದ ತೂಕ ಹೆಚ್ಚಬಹುದು ಅಷ್ಟೇ.
ಬೇಜಾರಾದರೂ ಹೆಚ್ಚುತ್ತೆ ಬೊಜ್ಜು
ಬೊಜ್ಜು ಬರಲು ಆರಂಭವಾದರೆ ಮಹಿಳೆಯರು ಚಿಂತೆಗೊಳಗಾಗುತ್ತಾರೆ. ಅದನ್ನು ಕಡಿಮೆ ಮಾಡಿಕೊಳ್ಳಲು ಎಲ್ಲಿಲ್ಲದ ಪ್ರಯತ್ನಕ್ಕೆ ಮುಂದಾಗುತ್ತಾರೆ. ಅದು ತುಸು ಪರಿಣಾಮಕಾರಿ ಎಂದೆನಿಸುವುದು ಹೌದಾದರೂ ಮತ್ತೆ ತೂಕ ಇಳಿಯುವುದಿಲ್ಲ. ಪಥ್ಯದ ಗೀಳಿಗೆ ಜೋತು ಬೀಳುವುದು ಮುಂದುವರಿದಾಗ ಬೇಸರದಿಂದಾಗಿಯೇ ಇಳಿದ ಬೊಜ್ಜು ಮೊದಲಿನ ಸ್ಥಿತಿಗೆ ಮುಟ್ಟುತ್ತದೆ. ಹೀಗಾಗಿಯೇ ಹಲವು ನಿರ್ಧಾರಗಳಿಂದ ಪ್ರಾರಂಭವಾಗುವ ಪಥ್ಯದ ಗೀಳು ವಿಫಲವಾಗುತ್ತದೆ.
ಆಹಾರ ಸೇವನೆ ಮತ್ತು ಶಾರೀರಿಕ ವ್ಯಾಯಾಮ ಬೊಜ್ಜು ಕರಗಿಸುವ ಭಿನ್ನ ಭಿನ್ನ ಸಾಧನೆಗಳೆಂದು ತಿಳಿಯದೇ ಬಾಳಿನ ಭಾಗಗಳೆಂದು ಬಗೆದು ಬದುಕು ಸಾಗಿಸಬೇಕು. ಎಷ್ಟು ತಿನ್ನುತ್ತೇವೆ ಎನ್ನುವುದು ಮುಖ್ಯವಲ್ಲ. ಏನು ತಿನ್ನುತ್ತೇವೆ ಎಂಬುವುದು ಮುಖ್ಯ. ಬೊಜ್ಜು ಇಳಿಸುವ ಭರದಲ್ಲಿ ಇಲ್ಲಸಲ್ಲದ ಅಪಾಯಕರ ಉಪಾಯಗಳಿಗೆ, ವಿಫಲದಲ್ಲಿ ಕೊನೆಗೊಳ್ಳುವ ಪ್ರಯತ್ನಗಳಿಗೆ ವಿದಾಯ ಹೇಳಬೇಕು.'ಇಛಟಛಟ್ಛಿಜಜ ಉ್ಝಜಡಿ ಡ್ಟಿ ಇ್ಟ್ಟಡಡಿ ಛಟಿಜ ಟ್ಟಿಡಿ ಡ್ಟಿ ಛ್ಡ್ಠಿಡಡಿ ಝಿಜ ಛ್ಟಿಜಣ' ಎಂಬುದು ನೆನಪಿರಲಿ.
ಮನೆಗೆಲಸ ಮಾಡಿದ್ರೆ ಸಾಕು
ಮನೆಗೆಲಸ ಮಾಡುವಾಗ ಆಮ್ಲಜನಕದ ವಿನಿಯೋಗ, ಕ್ಯಾಲೋರಿಗಳ ಖರ್ಚು ಹೆಚ್ಚುತ್ತದೆ. ಬೊಜ್ಜು ಕರಗಿಸಲು ಆಟದ ಬಯಲಿನ ವ್ಯಾಯಾಮ ಬೇಕಾಗಿಲ್ಲ. ಮನೆಯಲ್ಲಿ ಕಸಮುಸುರೆ ಕೆಲಸ, ನೆಲ ಸಾರಿಸುವುದು, ತೊಳೆಯುವುದು, ಕಪಾಟು ಸ್ವಚ್ಛಗೊಳಿಸಿ ಪಾತ್ರೆ ಪಗಡಿಗಳನ್ನು ಓರಣವಾಗಿ ಹೊಂದಿಸಿಬಿಡುವುದು, ಬಟ್ಟೆ ತೊಳೆದರೂ ಬೊಜ್ಜು ಕರಗುತ್ತದೆ. ಇದರಿಂದ ದೈಹಿಕ, ಮಾನಸಿಕ, ಸ್ವಾಸ್ಥ್ಯಕ್ಕೆ ಭದ್ರ ಬುನಾದಿಯಾಗುವುದಲ್ಲದೆ, ಆಹಾರ ಸೇವನೆ ಹಾಗೂ ಬೊಜ್ಜು ಶೇಖರಣೆ ನಡುವಿನ ಶೀತಲ ಸಮರ ಶಾಂತಿಯಲ್ಲಿ ಕೊನೆಗೊಳ್ಳುತ್ತದೆ.
- ಡಾ. ಕರವೀರಪ್ರಭು ಕ್ಯಾಲಕೊಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


