ಆರೋಗ್ಯ-ಜೀವನಶೈಲಿ

ನೈಲ್ ಪಾಲಿಸಿ

Published On :

ಮನೆಯ ನಾಯಿಮರಿಯೇನೋ ಎಂಬಷ್ಟು ಪ್ರೀತಿಯಿಂದ ಉಗುರು ಬೆಳೆಸಿರುತ್ತೀರಿ. ಅದಕ್ಕೆ ಚೆಂದದ ಆಕಾರ ನೀಡಿ ಬಣ್ಣ ಹಚ್ಚಿ, ಮಾತನಾಡುವಾಗ ಸ್ವಲ್ಪ ಹೆಚ್ಚಾಗಿಯೇ ಕೈ ಬಳಸಿ ಉಗುರು ಪ್ರದರ್ಶಿಸಿರುತ್ತೀರಿ. ಅಂಥ ಉಗುರು ಮುರಿಯದಂತೆ ಕಾಪಾಡಲು ಕೆಲವು ಸಲಹೆಗಳನ್ನು ಕೇಳಿ...
-    ಉಗುರನ್ನು ನಿತ್ಯ ಮಾಯಿಶ್ಚರೈಸರ್‌ನೊಂದಿಗೆ ಮಸಾಜ್ ಮಾಡಿ. ಇದರಿಂದ ಚೆನ್ನಾಗಿ ರಕ್ತಸಂಚಾರವಾಗಿ, ಉಗುರುಗಳು ಹೆಚ್ಚು ಗಟ್ಟಿಗೊಳ್ಳುತ್ತವೆ.
-    ಸಾಕಷ್ಟು ನೀರು ಕುಡಿಯುವುದರಿಂದ ದೇಹ ಒಣಗುವುದು, ಉಗುರು ತುಂಡಾಗುವುದು ತಪ್ಪುತ್ತದೆ.
-    ನಿಮ್ಮ ಆಹಾರದಲ್ಲಿ ಎಲ್ಲ ಪೋಷಕಾಂಶಗಳಿರುವಂತೆ ನೋಡಿಕೊಳ್ಳಿ. ದೇಹಕ್ಕೆ ವಿಟಮಿನ್ ಮತ್ತು ಕ್ಯಾಲ್ಸಿಯಂ ಒದಗಿಸಿ.
-    ನಿತ್ಯ ಆಲಿವ್ ಎಣ್ಣೆಯಲ್ಲಿ 10-15 ನಿಮಿಷ ಕೈ ಬೆರಳುಗಳನ್ನು ಅದ್ದಿ. ತಿಂಗಳಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ.
-    ಉಗುರು ಕಚ್ಚುವ ಅಭ್ಯಾಸ ಬಿಡಿ.
-    ಡಿಟರ್ಜೆಂಟ್‌ಗಳು, ರಾಸಾಯನಿಕ ವಸ್ತುಗಳು ಕೈಗೆ ತಾಗಿದಾಗ ಉಗುರುಗಳ ಗಟ್ಟಿತನವನ್ನು ಹಾಳುಮಾಡುತ್ತವೆ. ಕೆಲಸ ಮಾಡುವಾಗ ಗ್ಲೌಸ್ ಬಳಸಿ.
-    ಬಾಟಲ್ ಮುಚ್ಚಳ ತೆಗೆಯಲು ಅಥವಾ ಇನ್ನಾವುದೇ ಸಣ್ಣ ಕೆಲಸಕ್ಕೆ ಉಗುರನ್ನು ಆಯುಧವಾಗಿ ಬಳಸಬೇಡಿ.
-    ಸಾಧ್ಯವಾದಷ್ಟು ನೈಲ್ ಪಾಲಿಷ್ ರಿಮೂವರ್‌ನಿಂದ ದೂರವಿರಿ. ಇದರಲ್ಲಿರುವ ಅಸಿಟೋನ್ ಉಗುರನ್ನು ಒಣಗಿಸಿ ಹಾಳುಗೆಡವುತ್ತದೆ.

- ಮಚ್ ಮುನಿಯಮ್ಮ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.