ಆರೋಗ್ಯ-ಜೀವನಶೈಲಿ

ಸ್ಟೆಪ್ 1, ಸ್ಟೆಪ್ 2

ಸ್ಟೆಪ್ 1, ಸ್ಟೆಪ್ 2
Published On :

ಬೇರೆಯವರಿಗಿಂತ ಚೆನ್ನಾಗಿ ಕಾಣಬೇಕು ಎಂದು ಯಾರೂ ಅಂದುಕೊಳ್ಳುವುದಿಲ್ಲ ಹೇಳಿ? ಆದರೂ ಕೆಲಸದ ನಡುವೆ ಆರೋಗ್ಯದಲ್ಲಿ ಸಮತೋಲನ ಕಂಡುಕೊಳ್ಳಲಾಗದೇ ಅಥವಾ ಊಟದಲ್ಲಿನ ಏರುಪೇರಿನಿಂದ ತೂಕ ಹೆಚ್ಚಾಗುತ್ತಿದೆ ಎಂದು ಬೇಜಾರಾಗಿದ್ದೀರಾ?
ಬೇಜಾರು ಬಿಟ್ಹಾಕಿ. ದಿನದಲ್ಲಿ ಕೇವಲ 3 ನಿಮಿಷ ಮಾಡುವ ಸುಲಭ ವ್ಯಾಯಾಮವೊಂದಿದೆ. ಅದಕ್ಕೆ ಶಾರ್ಟ್ ಬರ್ಸ್ಟ್ ಎಕ್ಸರ್ಸೈಜ್ ಎಂದು ಹೆಸರು. ಅಂದರೆ, ಮೆಟ್ಟಿಲುಗಳನ್ನು ಏರಿ ಇಳಿಯುವುದು. ಈ ವ್ಯಾಯಾಮವನ್ನು ದಿನದಲ್ಲಿ ಮೂರು ಬಾರಿ 30 ಸೆಕೆಂಡುಗಳ ಕಾಲ ಮಾಡಿದರೂ ಸಾಕು.
ಕೆಲವು ವಿವಿಗಳು ಈ ಬಗ್ಗೆ ಅಧ್ಯಯನ ಕೈಗೊಂಡು ಮೆಟ್ಟಿಲು ಹತ್ತುವುದರಿಂದ ಆಗುವ ಅನುಕೂಲಗಳನ್ನು ಕಂಡುಕೊಂಡಿವೆ. ಮನೆಯಲ್ಲಿರಬೇಕಾದರೆ ಮೆಟ್ಟಿಲುಗಳನ್ನು ಹತ್ತಿಳಿಯುವುದು, ರನ್ನಿಂಗ್ ಯಂತ್ರದಲ್ಲಿ ನಿರಂತರವಾಗಿ 30 ಸೆಕೆಂಡುಗಳ ಕಾಲ ಓಡುವುದಕ್ಕೆ ಸಮ. ಹೀಗೆ ಮಾಡುವುದರಿಂದ ತುಂಬಾ ಸಮಯ ತೆಗೆದುಕೊಂಡು ವಾರಪೂರ್ತಿ ಮಾಡುವ ದೀರ್ಘಾವಧಿಯ ವ್ಯಾಯಾಮದಷ್ಟೇ ಪರಿಣಾಮ ಬೀರುತ್ತದೆ. ಈ ವಿಷಯವನ್ನು ಕೆನಡದ ಬಯಾಲಜಿ ಸಿಸ್ಟಮ್ಸ್ ಪ್ರೊ. ಜಾಮಿ ಟಿಮ್ಮಾನ್ಸ್ ಖಚಿತಪಡಿಸಿದ್ದಾರೆ.
ಜಾಮಿ ಟಿಮ್ಮಾನ್ಸ್ ಮತ್ತು ಅವರ ತಂಡ ಕೆನಡಾ ಮತ್ತು ಬ್ರಿಟನ್ನ ನೂರಾರು ಅನ್ಫಿಟ್ ಮಧ್ಯ ವಯಸ್ಸಿನವರ ಮೇಲೆ 8 ವರ್ಷ ನಿರಂತರವಾಗಿ ಈ ವ್ಯಾಯಾಮವನ್ನು ಪ್ರಯೋಗಿಸಿ, ಈ ಸತ್ಯವನ್ನು ಕಂಡುಕೊಂಡಿದ್ದಾರೆ. ಹಂತಹಂತವಾಗಿ ಜಿಮ್ನಲ್ಲಿ ವ್ಯಾಯಾಮ ಮಾಡಿದಷ್ಟೇ ಉತ್ಸಾಹ, ಪರಿಣಾಮ ಮೆಟ್ಟಿಲು ಹತ್ತಿ ಇಳಿಯುವುದರಿಂದ ದೊರೆಯುತ್ತದೆ. ಫಿಟ್ನೆಸ್ ಮಾತ್ರವಲ್ಲದೆ ಆರೋಗ್ಯದಲ್ಲೂ ಸುಧಾರಣೆ ಕಂಡುಬರುತ್ತದೆ ಎನ್ನುವುದು ಈ ತಂಡದ ಅಧ್ಯಯನದ ಫಲಿತಾಂಶ.
ಇದರಿಂದ ಶ್ವಾಸಕೋಶ, ಹೃದಯ ಮತ್ತು ರಕ್ತನಾಳ ತೊಂದರೆಗಳು ನಿವಾರಣೆಯಾಗುತ್ತವೆ. ಹೆಚ್ಚು ಬಳಲದೆ, ಹಣ ವ್ಯಯ ಮಾಡದೆ ಹೆಚ್ಚಿನ ಲಾಭ ತಂದುಕೊಡುವ ಶಾರ್ಟ್ ಬರ್ಸ್ಟ್ ಎಕ್ಸ್ರ್ಸೈಜ್ನಿಂದ ಸಾಧ್ಯ ಎನ್ನುತ್ತಾರೆ ಟಿಮ್ಮಾನ್ಸ್. ಇದನ್ನು ವಿಜ್ಞಾನಿಗಳು ಪೂರ್ತಿಯಾಗಿ ಒಪ್ಪಿಕೊಂಡಿಲ್ಲ.

-ಎನ್.ಎಲ್. ಶಿವಮಾದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.