ಆರೋಗ್ಯ-ಜೀವನಶೈಲಿ

ವಿರಾಮ ಲಕ್ಷಣ

ವಿರಾಮ ಲಕ್ಷಣ
Published On :

ಫಿಟ್ನೆಸ್ ಎಂದರೆ ಬೆವರು ಹರಿಯೋವರೆಗೂ ಕಸರತ್ತು ಮಾಡೋದು ಎಂಬುದು ಎಲ್ಲರ ಭಾವನೆ.
ಆದರೆ, ವಿಶ್ರಾಂತಿಯಿಂದಲೂ ಫಿಟ್ನೆಸ್ ಕಾಪಾಡಿಕೊಳ್ಳಬಹುದು ಎಂಬುದು ಗೊತ್ತಾ? ತಜ್ಞರು ಪ್ರಯೋಗ, ಸಂಶೋಧನೆ ನಡೆಸಿ ಇದನ್ನು ಕಂಡುಕೊಂಡಿದ್ದಾರೆ.
ವ್ಯಾಯಾಮ, ಕಸರತ್ತು, ಜಿಮ್ಮಿಂಗ್ ಮಧ್ಯೆಮಧ್ಯೆ ವಿಶ್ರಾಂತಿ ಪಡೆಯಲೇಬೇಕು. ಹಾಗೆ ಮಾಡುವುದರಿಂದ ಫಿಟ್ನೆಸ್ ಪ್ರಕ್ರಿಯೆ ಪೂರ್ಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.  ಅಮೆರಿಕದ ಸ್ಟರ್ಲಿಂಗ್ ವಿಶ್ವವಿದ್ಯಾಲಯದ ತಜ್ಞರು ಸೈಕ್ಲಿಸ್ಟ್‌ಗಳ ಮೇಲೆ ಈ 'ವಿಶ್ರಾಂತಿ' ಪ್ರಯೋಗ ಮಾಡಿ ವೈಜ್ಞಾನಿಕ ಸತ್ಯಗಳನ್ನು ಕಂಡುಕೊಂಡಿದ್ದಾರೆ.
ಅಧ್ಯಯನ ವರದಿಯನ್ನು ಬದಿಗಿಟ್ಟು ನೋಡುವುದಾದರೆ, ವ್ಯಾಯಾಮ ಅಥವಾ ಕಸರತ್ತಿನ ಲಾಭ ಸಂಪೂರ್ಣ ದೊರಕಬೇಕಿದ್ದರೆ, ಈ ಕಸರತ್ತುಗಳನ್ನು ನಿಮ್ಮ ದೇಹಕ್ಕೆ ಹೇಗೆ ಅನ್ವಯಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ನಿರಂತರ ವ್ಯಾಯಾಮ ಮಾಡುವುದರಿಂದ ನೀವು ಅಂದುಕೊಂಡ ಲಾಭ ದಕ್ಕುವುದಿಲ್ಲ. ನಡುನಡುವೆ ವಿಶ್ರಾಂತಿ ಪಡೆದು ಕಸರತ್ತುಗಳನ್ನು ಮಾಡುವುದಾದರೆ ಅದರ ಸಂಪೂರ್ಣ ಲಾಭ ದೊರೆಯುತ್ತದೆ. ಹಾಗಿದ್ದರೆ ಏನು ಮಾಡಬೇಕು ಎಂದು ನೀವು ಕೇಳಬಹುದು. ಅದಕ್ಕೊಂದಿಷ್ಟು ಇಲ್ಲಿ ಸಲಹೆಗಳಿವೆ ನೋಡಿ.
4    ಯಾವುದೇ ಕಸರತ್ತಾಗಲೀ, ವ್ಯಾಯಾಮವಾಗಲೀ ವೇಗವಾಗಿ ಮಾಡಬೇಡಿ.
4    ಗಾಯಗಳಿಂದ ಮುಕ್ತಿ ಪಡೆಯುವುದಕ್ಕಾಗಿ ವಿಶ್ರಾಂತಿ ಪಡೆಯುವುದಕ್ಕಿಂತ ವ್ಯಾಯಾಮದ ಪೂರ್ಣ ಲಾಭ ಗಳಿಸಲು ಪಡೆಯುವ ವಿಶ್ರಾಂತಿ ಮಧ್ಯೆ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿ.
4    ತುಂಬಾ ಕಠಿಣವಾದ ಮತ್ತು ದೀರ್ಘವಾದ ವರ್ಕೌಟ್ ಮಾಡುತ್ತಿದ್ದರೆ ಅಷ್ಟೇ ಪ್ರಮಾಣದಲ್ಲಿ ವಿಶ್ರಾಂತಿ ಬೇಕು.
4    ಕಸರತ್ತು ಮಾಡಿದ ಮರುಕ್ಷಣದಿಂದಲೇ ವಿಶ್ರಾಂತಿಯ ಅಗತ್ಯವಿರುತ್ತದೆ.
4    ಪ್ರತಿ ವ್ಯಾಯಾಮದ ಮಧ್ಯೆಯೂ 5ರಿಂದ 10 ನಿಮಿಷದವರೆಗೂ ವಿಶ್ರಾಂತಿ ಇರಲಿ.
4    ವಿಶ್ರಾಂತಿಯೊಂದಿಗೆ ವ್ಯಾಯಮ ಮಾಡುವುದರಿಂದ ಗಾಯಗಳಾಗುವುದನ್ನು ತಪ್ಪಿಸಬಹುದು.
4    ಒಂದೇ ಗತಿಯಲ್ಲಿ ವ್ಯಾಯಾಮದ ತೀವ್ರತೆ ಇರಲಿ. ಒಂದು ದಿನ ಹೆಚ್ಚು ಒಂದು ದಿನ ಕಡಿಮೆ ಮಾಡುವುದಾಗಲಿ ಮಾಡಬೇಡಿ.
4    ಅನಾರೋಗ್ಯದಲ್ಲಿ ಸಮಯದಲ್ಲಿ ಹೆಚ್ಚಿನ ವ್ಯಾಯಾಮ ಮಾಡುವುದನ್ನು ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳುವುದೇ ಸೂಕ್ತ.
4    ಯಾವುದೇ ಕಸರತ್ತಾಗಲಿ, ವ್ಯಾಯಾಮ ಮಾಡುವಾಗ ಅನುಭವಿಗಳಿಂದ ಟಿಪ್ಸ್ ಪಡೆದರೆ ಒಳ್ಳೆಯದು.
4    ಹಾಗಂತ, ವ್ಯಾಯಾಮಕ್ಕಿಂತ ವಿಶ್ರಾಂತಿಯೇ ಹೆಚ್ಚಾಗದಂತೆ ನೋಡಿ ಕೊಳ್ಳಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.