Slim ಕಾರ್ಡ್

ನೀವು ಇನ್‌ಶರ್ಟ್ ಮಾಡಿದಾಗ ಹೊಟ್ಟೆ ತೆಳ್ಳಗೆ ಇದ್ದರೆ ಎಷ್ಟು ಚೆನ್ನ ಎಂದು ಅದೆಷ್ಟು ಬಾರಿ ಯೋಚಿಸಿರುವುದಿಲ್ಲ? ಅದಕ್ಕೆಂದೇ ನೀವು ಸಾಕಷ್ಟು ಕಸರತ್ತನ್ನೂ ಮಾಡಿರುತ್ತೀರಿ. ಮಾಡದ ವ್ಯಾಯಾಮಗಳಿಲ್ಲ. ಜಾಗಿಂಗ್ ಬಿಟ್ಟಿಲ್ಲ. ಸಾಲದು ಎಂಬಂತೆ ಜಿಮ್‌ಗೂ ಹೋಗುತ್ತಿರುತ್ತೀರಿ. ಆದರೆ ಹೀಗೆ ಮಾಡಿ ಹೊಟ್ಟೆ ಕರಗಿಸಿದರೆ ಅದು ಶಾಶ್ವತವೇ?
ಖಂಡಿತಾ ಅಲ್ಲ. ಇದು ಆ ವೇಳೆಗಷ್ಟೇ ಸೀಮಿತ. ಹಾಗಾದರೆ ಮತ್ತಿನ್ನೇನು ಮಾಡಬೇಕು? ಊಟ ಮಾಡುವುದನ್ನೇ ಬಿಡಬೇಕಾ? ಎಂಬ ಪ್ರಶ್ನೆ ಹುಟ್ಟಬಹುದು. ಆದರೆ ಊಟ ಬಿಡಬೇಕಿಲ್ಲ. ನಿಮ್ಮ ಆಹಾರದ ಕ್ರಮ ಬದಲಿಸಿಕೊಳ್ಳಿ. ಆಮೇಲೆ ಹೊಟ್ಟೆ ಏಕೆ ಕರಗುವುದಿಲ್ಲ. ನೀವೇ ನೋಡಿ. ಹಾಗಾದರೆ, ಏನು ಮಾಡಬೇಕು?
1. ದ್ವಿದಳ ಧಾನ್ಯ ತಿನ್ನಿ
ಸಾಧ್ಯವಾದಷ್ಟು ದ್ವಿದಳ ಧಾನ್ಯಗಳನ್ನು ಸೇವಿಸಿ. ಹಣ್ಣುಗಳು, ತರಕಾರಿಗಳು, ಕಡಿಮೆ ಕೊಬ್ಬಿನಂಶವಿರುವ ಹಾಲು ಉತ್ಪನ್ನಗಳು, ಮಾಂಸ ಹಾಗೂ ಮೀನುಗಳನ್ನು ಸೇವನೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿ ಬೊಜ್ಜು ಬೆಳೆಯುವುದಾಗಲೀ, ಅನಗತ್ಯ ಹೊಟ್ಟೆ ಬರುವುದಾಗಲೀ ಆಗುವುದಿಲ್ಲ.
2. ನಿದ್ದೆ ಮುಖ್ಯ
ನಿದ್ರೆ ಉತ್ತಮವಾಗಿ ಆದಷ್ಟು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಜತೆಗೆ ಹೊಟ್ಟೆಗೂ ಒಳ್ಳೆಯದು. ನಿದ್ದೆಗೂ ಹೊಟ್ಟೆಗೂ ಏನು ಸಂಬಂಧ ಎಂದು ಚಿಂತಿಸಬೇಡಿ. ನಿದ್ದೆ ಸಮರ್ಪಕವಾಗಿ ಆಗದಿದ್ದಲ್ಲಿ ಹಾರ್ಮೋನ್ ಮಟ್ಟದಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ಒಮ್ಮೊಮ್ಮೆ ಊಟ ಸರಿಯಾಗಿ ಆಗುವುದಿಲ್ಲ. ಕೆಲವೊಮ್ಮೆ ಹೆಚ್ಚೆಚ್ಚು ಊಟ ಮಾಡುವಂತಾಗುತ್ತದೆ. ಈ ಎರಡೂ ಹೊಟ್ಟೆಗೆ ಮಾರಕ. ಇದರಿಂದ ಗ್ಯಾಸ್ಟ್ರಿಕ್, ಎಸಿಟಿಡಿಯಂತಹ ರೋಗಗಳೂ ಬರುವುದಲ್ಲದೆ ಹೊಟ್ಟೆಯನ್ನು ಉಬ್ಬಿಸುತ್ತದೆ. ಹಾಗಾಗಿ, ದಿನಕ್ಕೆ ಕನಿಷ್ಠ 7 ಗಂಟೆಯಾದರೂ ನಿದ್ದೆ ಮಾಡಲೇಬೇಕು.
3. ಟೈಮ್‌ಗೆ ಸರಿಯಾಗಿ ಊಟ
ಇದು ಊಟದ ಸಮಯ! ಸರಿಯಾದ ಟೈಮಿಗೆ ಊಟ ಮಾಡಿ. ಗಡಿಬಿಡಿ ಇಲ್ಲದೇ ಆರಾಮವಾಗಿ ಒಂದೊಂದೇ ತುತ್ತನ್ನು ಸೇವಿಸಬೇಕು. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಸಮಯದ ಅಭಾವ ಮುಂದಿಟ್ಟುಕೊಂಡು ಗಬಗಬನೆ ತಿಂದಿರೋ ಜೋಕೆ. ಹೀಗೆ ಬೇಗನೆ ಊಟ ಮಾಡಿ ಮುಗಿಸುವುದರಿಂದ ನಿಮ್ಮ ಹೊಟ್ಟೆಗೆ ಎಷ್ಟು ಆಹಾರ ಹೋಗಿದೆ ಎಂಬುದು ಹಾರ್ಮೋನ್ ವ್ಯತ್ಯಾಸದಿಂದ ತಿಳಿಯದೇ ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡುತ್ತೀರಿ. ಹೀಗಾಗುವುದರಿಂದ ಹೊಟ್ಟೆ ಬರದೇ ಮತ್ತಿನ್ನೇನು?
4. ನಾರಿನಂಶದ ಆಹಾರ ತಿನ್ನಿ
ಪ್ರತಿ ಊಟಕ್ಕೂ ಮೊದಲು ಪೈನಾಪಲ್ ತಿನ್ನಿ. ಇದರಲ್ಲಿರುವ ಬ್ರೋಮ್‌ಲೈನ್ ಎಂಬ ಎಂಜೈಮ್ ಪ್ರೊಟೀನ್ ಅನ್ನು ಕರಗಿಸುತ್ತದೆ. ನಾರಿನಂಶ ಇರುವ ಆಹಾರವನ್ನೂ ಜೀರ್ಣ ಮಾಡಿಸಿ ಹೊಟ್ಟೆ ಉಬ್ಬರಿಸುವಿಕೆಯನ್ನು ತಡೆಯುತ್ತದೆ.
-ಆದರ್ಶ ಎಸ್. ಅಂಚೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


