ಸಂತೋಷ ಅಹಾ ಒಹೋ!

ಇಂದಿನ ಆಧುನಿಕಯುಗದಲ್ಲಿ ಪ್ರತಿಯೊಬ್ಬರು ಕೂಡಾ ಒತ್ತಡದಲ್ಲೇ ಬದುಕುತ್ತಿದ್ದಾರೆ. ಸತತ ಕೆಲಸ, ಸಿಗದ ವಿಶ್ರಾಂತಿ, ಹಣದ ತೀವ್ರ ಅಡಚಣೆ, ಆರೋಗ್ಯ ಸಮಸ್ಯೆ... ಹೀಗೆ ಹತ್ತಾರು ತೊಂದರೆಗಳನ್ನು ಎದುರಿಸವಾಗ 'ಸಂತೋಷ' ಎಂಬುದು ಸಿಕ್ಕುವುದಿಲ್ಲ. ಆನಂದವನ್ನು ಮರೆತವರಿಗೆ ಬೇಗನೆ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಹಾಗಾಗಿ, ಪ್ರತಿ ಕ್ಷಣವೂ ನಾವು ಸಂತೋಷದಿಂದಿರಲು ಪ್ರಯತ್ನಿಸಬೇಕು.
ವಿಶೇಷ ಎಂದರೆ, ನಮ್ಮ ಸಂತೋಷ ಕೂಡಾ ಮೆದುಳಿನ ಅಧೀನದಲ್ಲೇ ಇದೆ. ಯಾಕೆಂದರೆ, ಎಂಡಾರ್ಫಿನ್ಸ್ ಹಾರ್ಮೋನು ಏರುಪೇರಾದರೆ ಸಂತೋಷದ ಗ್ರಾಫ್ ಕೂಡಾ ಏರುಪೇರಾಗುತ್ತದೆ. ಅಲ್ಲದೆ, ವ್ಯಕ್ತಿಯ ಸಾಮಾನ್ಯ ಕ್ರಿಯೆ, ಭಾವನೆ, ಮಾನಸಿಕ ಅಸಮತೋಲನ, ಸಂತೋಷ, ದುಃಖಕ್ಕೆ ಸ್ಪಂದಿಸುವ ಡೋಪಿಮಿನ್- ಸೆರಾಟೋನಿಕ್ ಹಾರ್ಮೋನಗಳು ತಮ್ಮ ಸ್ರವಿಕೆಯನ್ನು ಕಡಿಮೆ ಮಾಡಿದರೆ ವ್ಯಕ್ತಿ ಸದಾಕಾಲ ಚಿಂತಾಕ್ರಾಂತನಾಗುತ್ತಾನೆ. ಹೀಗೆ, ಸಂತೋಷದಿಂದ ಇರಬೇಕಾದ ಜೀವನ ಗೊಂದಲದ ಗೂಡಾಗಬೇಕಾಗುತ್ತದೆ. ಹಾಗಾದರೆ, ಸಂತೋಷದಿಂದರಲು ಏನು ಮಾಡಬೇಕು...? ಸಾಮಾಜಿಕ ಮನಃಶಾಸ್ತ್ರಜ್ಞರು ಇದಕ್ಕಾಗಿ ಕೆಲವು ಸುಲಭದ ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆ ಸ್ವೀಕರಿಸಿದರೆ ಸಂತೋಷದಿಂದರು ಸಾಧ್ಯ.
ಯಶಸ್ಸೇ ಜೀವನವಲ್ಲ
ಯಶಸ್ಸು, ಜಯ ಪಡೆಯದಿದ್ದಲ್ಲಿ ಜೀವನ ವ್ಯರ್ಥ ಎಂಬ ಭಾವನೆಯನ್ನು ತೆಗೆದು ಹಾಕಬೇಕು. ಯಶಸ್ವಿಯಾದವರೆಲ್ಲರೂ ಸಂತೋಷದಿಂದ ಇರಲ್ಲ. ಹಣದಿಂದ ಸಂತೋಷ ಎಂಬುದು ಎಲ್ಲ ಹಂತದಲ್ಲೂ ದೊರೆಯುವುದಿಲ್ಲ. ತೀವ್ರವಾಗಿ ಹಣದಿಂದ ಹಿಂದೆ ಹೋದರೆ ಯಶಸ್ಸು-ಸಂತೋಷ ಖಂಡಿತ ಸಿಗದು. ಹಾಗಾಗಿ, ಯಶಸ್ಸು ಒಂದೇ ಜೀವನವಲ್ಲ.
ಸಮಯ ಪರಿಪಾಲನೆ
ನಮ್ಮ ಬದುಕು ಉಜ್ವಲವಾಗಬೇಕಿದ್ದರೆ ಸಮಯ ಪರಿಪಾಲನೆ ಅಗತ್ಯ. ನಿಮ್ಮ ಸಮಯದ ವೇಳಾಪಟ್ಟಿಯನ್ನು ತಯಾರಿಸಿ, ಅದರಂತೆ ಮುಂದುವರಿಯಿರಿ.
ಮುಖದಲ್ಲಿ ಮಂದಹಾಸವಿರಲಿ
ಸದಾ ಸಿಟ್ಟು, ಕೋಪ, ಬೇಜಾರು ತೋರ್ಪಡಿಸದೇ ಮುಖದಲ್ಲಿ ಸದಾ ಮಂದಹಾಸವಿರಲಿ. ಆಶಾವಾದದ ಮಾತನಾಡಿ. ನಿರಾಶವಾದಿಯಾಗೋದು ಬೇಡ. ನಕಾರಾತ್ಮಕ ಯೋಚನೆಗಳಿಗೆ ಗುಡ್‌ಬೈ ಹೇಳಿ.
ಸದಾ ಕ್ರಿಯಾಶೀಲರಾಗಿ
ಏಕಾಂಗಿಯಾಗಿ ಕೂರದೇ ಸದಾ ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ದೀರ್ಘ ವಿಶ್ರಾಂತಿ ಬೇಡ. ನಿಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ.
ವ್ಯಾಯಾಮ
ಹಗಲಿನಲ್ಲಿ 10ರಿಂದ 15 ನಿಮಿಷ ಕಿರುನಿದ್ದೆ, ವಾಕಿಂಗ್, ಜಾಗಿಂಗ್, ಧ್ಯಾನ, ಪ್ರಾಣಾಯಾಮ, ಏರೋಬಿಕ್ಸ್, ನಡಿಗೆ... ಹೀಗೆ ಮುಂತಾದವು ನಿಮ್ಮ ಬೇಜಾರು ಕಳೆಯಲು ಪ್ರಮುಖ ಮಾರ್ಗಗಳು. ಇವುಗಳಿಂದ ನಿಮ್ಮ ಫಿಟ್ನೆಸ್ ಕೂಡಾ ಹೆಚ್ಚುತ್ತದೆ.
ವಿಶ್ರಾಂತಿ
ರಾತ್ರಿ ಹೊತ್ತು ಸಾಕಷ್ಟು ಮಲಗಿ ವಿಶ್ರಾಂತಿ ಪಡೆದುಕೊಳ್ಳಿ. 6ರಿಂದ 8 ಗಂಟೆ ನಿದ್ದೆ ಅತ್ಯುತ್ತಮವಾದದ್ದು. ಆದರೆ, ನಿದ್ದೆಯೇ ಪೂರ್ತಿ ವಿಶ್ರಾಂತಿಯಾಗದಿರಲಿ. ಕೆಲಸದ ಬದಾಲವಣೆಯೂ ವಿಶ್ರಾಂತಿ ಎಂಬುದು ನೆನಪಿಟ್ಟುಕೊಳ್ಳಿ.
ಸಂಬಂಧಕ್ಕೆ ಬೆಲೆ ಕೊಡಿ
ನಿಮ್ಮ ಆತ್ಮೀಯರು, ಸ್ನೇಹಿತರು, ನೆಂಟರ ಜೊತೆ ಸದಾಕಾಲ ಬೆರೆಯಿರಿ. ಅವರೊಡನೆ ನಿಮ್ಮ ಭಾವನೆ ಹಂಚಿಕೊಳ್ಳಿ. ಇದರಿಂದ ನೀವು 'ಸುರಕ್ಷಿತ' ಎಂಬ ಭಾವನೆ ಬರುತ್ತದೆ. ಒಬ್ಬಂಟಿ ಯಾಗಿರಬೇಡಿ. ನಿಮ್ಮ ಕೆಲಸದ ಮಧ್ಯೆ ಎರಡ್ಮೂರು ದಿನಕ್ಕೊಮ್ಮೆ ನಿಮ್ಮ ಸ್ನೇಹಿತರೊಡನೆ ಬೆರೆಯಿರಿ.
ಸಹಾಯ ಹಸ್ತ
ಇತರರಿಗೆ ನಿಮ್ಮ ಕೈಲಾದಮಟ್ಟಿಗೆ ಸಹಾಯ ಮಾಡಿ. ಸಂಕುಚಿತ ಭಾವನೆ ತೊಡೆದು ವಿಶಾಲ ಮನೋಭಾವ ಬೆಳೆಸಿಕೊಳ್ಳಿ.
ಕೃತಜ್ಞತೆ ವ್ಯಕ್ತಪಡಿಸಿ
ಇತರರಿಂದ ಸಹಾಯ ಪಡೆದಾಗ ಕೃತಜ್ಞತೆ ಸಲ್ಲಿಸುವುದನ್ನು ಮರೆಯಬೇಡಿ. ಸಹಾಯ ಪಡೆದವರಿಂದ ದ್ರೋಹ ಮಾಡಬೇಡಿ. ಒಂದು ಥ್ಯಾಂಕ್ಸ್ ಹೇಳಿದರೆ ಮನಸ್ಸು ಹಗುರವಾಗುತ್ತದೆ.
ನಂಬಿಕೆ
ಜೀವನದಲ್ಲಿ ನಂಬಿಕೆ ಅತ್ಯಗತ್ಯ. ಅನುಮಾನದ ದೃಷ್ಟಿಕೋನ ಇಟ್ಟುಕೊಳ್ಳದಿರಿ. ಆಧ್ಯಾತ್ಮ ಭಾವನೆ ಕೂಡಾ ಅಷ್ಟೇ ಮುಖ್ಯವಾದದ್ದು. ಜೀವನದ ಬಗ್ಗೆ ಅತಿ ನಿರೀಕ್ಷೆ ಬೇಡ.
-ಡಾ. ಕೆ.ವಿ.ಸಂತೋಷ ಹೊಳಲ್ಕೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


