ಆರೋಗ್ಯ-ಜೀವನಶೈಲಿ

ಖರ್ಚಿಲ್ಲದೇ ಬೆವರಿಳಿಸಿ

ಖರ್ಚಿಲ್ಲದೇ ಬೆವರಿಳಿಸಿ
Published On :

ದೇಹ ತೂಕ ಇಳಿಸಬೇಕೆನ್ನುವವರಿಗೆ ಸಿಹಿ ಸುದ್ದಿ. ತಿಂಗಳುಗಟ್ಟಲೆ ಜಿಮ್‌ಗೆ ಹೋಗಿ ಬೆವರಿಳಿಸಿ, ಜೇಬು ಬರಿದು ಮಾಡಿಕೊಂಡರೂ ಇನ್ನೂ ಹಾಗೆಯೇ ಇರುವ ದೇಹವನ್ನು ನೋಡಿ ಬೇಸರಿಸಬೇಕಾಗಿಲ್ಲ. ಮನೆಯಲ್ಲಿಯೇ ಸುಲಭವಾಗಿ ಸಿಗುವ ನೆಲ, ಗೋಡೆ, ಕುರ್ಚಿಗಳನ್ನು ಬಳಸಿ, ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಿಬಿಡಬಹುದಾದ ಹಲವು ಸಿಂಪಲ್ ವ್ಯಾಯಾಮಗಳಿಂದಲೂ ಪ್ರಖರ ಪರಿಣಾಮ ಸಾಧ್ಯ ಎಂಬುದನ್ನು ಅಮೆರಿಕದ ಸಂಶೋಧನಾ ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ.

ತೂಕ ಇಳಿಕೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಲು ಇಂಥ ಕೆಲವು ವ್ಯಾಯಾಮಗಳು ಸಹಕಾರಿ. ಈ ನಿಟ್ಟಿನಲ್ಲಿ 7 ನಿಮಿಷಗಳಲ್ಲಿ ಮಾಡಬಹುದಾದ 12 ಬಗೆಯ ವ್ಯಾಯಾಮಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಕೆಲವು ಸಂಪೂರ್ಣ ಶರೀರ, ಕೆಲವು ಮೇಲ್ಭಾಗದ ಶರೀರ ಹಾಗೂ ಕೆಲವು ಕೆಳಭಾಗದ ಶರೀರಕ್ಕೆ ಶಕ್ತಿ ಒದಗಿಸುತ್ತದೆ.

1.    ಡಂಬಲ್‌ಗಳನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ನಿಂತಲ್ಲಿಯೇ ಮೇಲೆ ಕೆಳಗೆ ಹಾರುವುದು (ಸಂಪೂರ್ಣ ಶರೀರಕ್ಕೆ).  
2.    ಗೋಡೆಗೆ ಒರಗಿ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಕುಳಿತುಕೊಳ್ಳುವುದು (ಕೆಳ ಶರೀರಕ್ಕೆ)
3.    ಪುಷ್ ಅಪ್( ಮೇಲ್ಭಾಗದ ಶರೀರಕ್ಕೆ)
4.    ಅಂಗಾತ ಮಲಗಿ ತಲೆಯ ಕೆಳಗೆ ಕೈ ಇಟ್ಟು ಹಾಗೆಯೇ ಏಳಲು ಪ್ರಯತ್ನಿಸುವುದು. (ಸಂಪೂರ್ಣ ಶರೀರಕ್ಕೆ).  
5.    ನಾಲ್ಕೈದು ಬಾರಿ ಕುರ್ಚಿಯ ಮೇಲೆ ಹತ್ತಿ ಕೆಳಗಿಳಿಯುವುದು (ಸಂಪೂರ್ಣ ಶರೀರಕ್ಕೆ).
6.    ನಿಂತುಕೊಂಡು ಮಂಡಿಯನ್ನು ಅರ್ಧ ಊರಲು ಸಿದ್ಧವಾಗಿರುವ ಸ್ಥಿತಿಯಲ್ಲಿರುವುದು (ಕೆಳ ಶರೀರಕ್ಕೆ).
7.    ಕವುಚಿ ಮಲಗಿ ಕೈಮೇಲೆ ಭಾರ ಹಾಕಿ ಶರೀರವನ್ನು ಮೇಲೆತ್ತುವುದು (ಕೆಳಭಾಗದ ಶರೀರಕ್ಕೆ).
8.    ಕವುಚಿ ಮಲಗಿಕೊಂಡು ಕೈಯ ಮಂಡಿಯ ಮೇಲೆ ಭಾರ ಹಾಕಿ ಶರೀರವನ್ನು ಮೇಲೆತ್ತುವುದು (ಸಂಪೂರ್ಣ ಶರೀರಕ್ಕೆ).
9.    ನಿಂತಲ್ಲಿಯೇ ಜೋರಾಗಿ ಓಡುವುದು (ಸಂಪೂರ್ಣ ಶರೀರಕ್ಕೆ).
10.    ನೇರವಾಗಿ ನಿಂತು ಒಮ್ಮೆ ಎಡಮಂಡಿ ಇನ್ನೊಮ್ಮೆ ಬಲಮಂಡಿಯನ್ನು ನೆಲಕ್ಕೆ ಊರುವುದು (ಶರೀರದ ಕೆಳಭಾಗಕ್ಕೆ).
11.    ಸುತ್ತುತ್ತಾ ಪುಷಪ್ ಮಾಡುವುದು (ಮೇಲ್ಭಾಗದ ಶರೀರಕ್ಕೆ).
12.    ಒಂದೊಂದು ಮಗ್ಗುಲಲ್ಲಿ ಮಲಗಿ ಕೈ ಮೇಲೆ ಭಾರಹಾಕಿ ದೇಹವನ್ನು ಮೇಲೆತ್ತುವುದು (ಸಂಪೂರ್ಣ ಶರೀರಕ್ಕೆ).

ಇಲ್ಲಿ ಹೇಳಿರುವ ಪ್ರತಿಯೊಂದು ವ್ಯಾಯಾಯಮವನ್ನೂ 30 ಸೆಕೆಂಡುಗಳ ಕಾಲ ಮಾಡಬೇಕು ಮತ್ತು ಪ್ರತಿ ವ್ಯಾಯಾಮದ ನಡುವೆ 10 ಸೆಕೆಂಡ್ ಅಂತರವಿರಬೇಕಾಗುತ್ತದೆ. ಹೀಗೆ 12 ಆಸನಕ್ಕೆ 7 ನಿಮಿಷ ತಗಲುತ್ತದೆ. ಹೀಗೆ 7 ನಿಮಿಷದ ಒಂದು ಪ್ಯಾಕೇಜನ್ನು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಎಷ್ಟು ಬಾರಿಯಾದರೂ ಮಾಡಬಹುದು.

- ಸುಧೀಂದ್ರ ಜಮ್ಮಟಿಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.