ಚರ್ಮಗೀತೆ

Published On :
ಮಳೆಗಾಲ ಬಂತೆಂದರೆ ಒಂಥರಾ ಖುಷಿ. ಬೇಸಿಗೆಯ ಬೇಗೆಯಲ್ಲಿ ಬೆಂದ ಮನಸುಗಳಿಗೆ ಆಹ್ಲಾದ ತರುತ್ತದೆ ಈ ಮಳೆ. ಆದರೆ, ಆರೋಗ್ಯ ಮಾತ್ರ ಆತಂಕದಲ್ಲಿ ಕಂಪಿಸುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಚರ್ಮವನ್ನು ಹೇಗೆ ರಕ್ಷಿಸಿಕೊಳ್ಳುವುದೆಂಬ ಪ್ರಶ್ನೆಯೂ ಹುಟ್ಟುತ್ತದೆ. ಇದಕ್ಕಿದೆ ಸೌಂದರ್ಯದ ಸಿಂಪಲ್ ಸಲಹೆ...
ಏನು ಮಾಡಬೇಕು?
- ನಿಮ್ಮದು ಎಣ್ಣೆ ಚರ್ಮ ಆಗಿದ್ದರೆ ನೀರಿನಂಶದಿಂದ ಕೂಡಿರುವ ಮಾಯಿಸ್ಚುಲೈಸರ್ ಬಸಬೇಕು. ಮುಖಕ್ಕೆ ಲೇಪಿಸಿಕೊಂಡು 10 ನಿಮಿಷದ ಬಳಿಕ ತೊಳೆದುಕೊಳ್ಳಬೇಕು.
- ಟೊಮೇಟೊವನ್ನು ಚೆನ್ನಾಗಿ ಕಿವುಚಿ ಅದರ ಜತೆ ಮುಲ್ತಾನ್ ಮಿಟ್ಟಿಯನ್ನು ಮಿಶ್ರಣ ಮಾಡಬೇಕು. ಅದನ್ನು ಪೇಸ್ಟ್ ಆಗಿ ಮಾಡಿಕೊಳ್ಳಬೇಕು. ಬಳಿಕ ಮುಖ ಕೈ, ಕಾಲುಗಳಿಗೆ ಲೇಪಿಸಿಕೊಳ್ಳಬೇಕು. 10 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಕಲೆಗಳೆಲ್ಲ ಮಾಯವಾಗುತ್ತವೆ.
- ಒಣ ಚರ್ಮ ಇದ್ದರೆ, ಬಾಳೆಹಣ್ಣು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ, ಅದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ.
- ಕಲ್ಲಂಗಡಿ ಹಣ್ಣಿನೊಂದಿಗೆ ಹಾಲಿನ ಪೌಡರ್ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಅದನ್ನು ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಕಾಂತಿ ಹೆಚ್ಚಾಗುತ್ತದೆ.
- ಆ್ಯಂಟಿ ಪಂಗಲ್ ಪೌಡರನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಸೋಂಕು ನಿವಾರಿಸಬಹುದು.
- ಚರ್ಮದ ಕಾಯಿಲೆ ಬರಲು ಮತ್ತೊಂದು ಕಾರಣವೆಂದರೆ ಒದ್ದೆಯಾದ ಬಟ್ಟೆ, ಶೂಗಳನ್ನು ಧರಿಸುವುದು. ಹಾಗಾಗಿ, ಇಂಥ ಪ್ರವೃತ್ತಿಯನ್ನು ಆದಷ್ಟು ಬಿಟ್ಟುಬಿಡಿ.
- ಆರ್.ಎಸ್. ಶ್ರೀಕಾಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


