ಆರೋಗ್ಯ-ಜೀವನಶೈಲಿ

ಅಪ್ಪುಗೆ ಚಳವಳಿ

ಅಪ್ಪುಗೆ ಚಳವಳಿ
Published On :

'ಮುನ್ನಾಭಾಯಿ ಎಂಬಿಬಿಎಸ್' ಸಿನಿಮಾದಲ್ಲಿ ನಟ ಸಂಜಯ್ ದತ್ 'ಜಾದೂ ಕಿ ಜಪ್ಪಿ' ಕೊಡುವುದನ್ನು ನೀವು ನೋಡಿದ್ದೀರಿ ಮತ್ತು ಇಂಥದ್ದು ಸಿನಿಮಾದಲ್ಲಿ ಮಾತ್ರ ಸಾಧ್ಯ ಎಂದುಕೊಂಡಿರುತ್ತೀರಿ. ಆದರೆ, ಹೀಗೆ ಒಬ್ಬರನ್ನು ಅಪ್ಪಿಕೊಳ್ಳುವುದರಿಂದ ಮತ್ತೊಬ್ಬರಿಗೆ ಸಕಾರಾತ್ಮಕ ಪರಿಣಾಮ ಬೀರುವುದು ನಿಜ ಎನ್ನುತ್ತದೆ ವಿಜ್ಞಾನ.
ಇತ್ತೀಚೆಗಿನ ಅಧ್ಯಯನವೊಂದು ಈ ಗುಟ್ಟನ್ನು ಬಹಿರಂಗಗೊಳಿಸಿದೆ. ಆಲಿಂಗನದಿಂದ ಸ್ವಾಸ್ಥ್ಯ ಸಂಬಂಧಿ ಲಾಭಗಳಾಗುತ್ತವಂತೆ. ಸ್ಮರಣ ಶಕ್ತಿ ಹೆಚ್ಚಾಗುವುದಲ್ಲದೆ, ಒತ್ತಡ ಕಡಿಮೆ ಮಾಡುವ ಶಕ್ತಿಯೂ ಇದಕ್ಕಿದೆ!
ಒಬ್ಬರನ್ನೊಬ್ಬರು ಅಪ್ಪಿಕೊಂಡಾಗ ಅವರ ದೇಹದಲ್ಲಿ ಅಕ್ಸಿಟೋಸಿನಿನ್ ಹಾರ್ಮೋನು ಉತ್ಪಾದನೆಯಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ದೇಹದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಚಿಂತೆಗಳು ದೂರವಾಗುತ್ತವೆ. ನೆನಪಿನ ಶಕ್ತಿ ವೃದ್ಧಿಯಾಗುತ್ತದೆ.
ವಿಯೆನ್ನಾ ವಿವಿಯ ಸಂಶೋಧನೆ ಪ್ರಕಾರ, ನೀವು ಯಾರನ್ನಾದರೂ ಅಪ್ಪಿಕೊಳ್ಳುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಪರಿಚಿತರನ್ನು ಅಥವಾ ಆತ್ಮೀಯರನ್ನು ಮಾತ್ರ ಅಪ್ಪಿಕೊಳ್ಳಿ. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯ ಹೆಚ್ಚು.
ನ್ಯೂರಾಫಿಜಿಯಾಜಿಸ್ಟ್ ಬಾರ್ಗೆನ್ಸೆಂಡ್ ಕಾಲೇರ್ ಪ್ರಕಾರ, ಪರಿಚಿತರ ಅಪ್ಪುಗೆಯಿಂದ ಲಾಭ ಹೆಚ್ಚು. ಒಂದು ವೇಳೆ ಆಲಂಗಿಸಿಕೊಳ್ಳುವ ವ್ಯಕ್ತಿ ಅಪರಿಚಿತನಾಗಿದ್ದರೆ ಅಥವಾ ಇಬ್ಬರಲ್ಲಿ ಒಬ್ಬನಿಗೆ ಅಪ್ಪಿಕೊಳ್ಳುವ ಮನಸ್ಸು ಇಲ್ಲದಿದ್ದರೆ ಅಂಥ ಅಪ್ಪುಗೆಯಿಂದ ಮನಸ್ಸು ಹಿಗ್ಗುವುದಿಲ್ಲ. ಅದರಿಂದ ಚಿಂತೆಗಳು ಹೆಚ್ಚಾಗುತ್ತವಂತೆ.

ಅಕ್ಸಿಟೋಸಿನಿನ್ ಪಾತ್ರ
ಪೋಷಕರು- ಮಕ್ಕಳು ಮತ್ತು ದಂಪತಿ ಮಧ್ಯ ಪ್ರೀತಿ ವೃದ್ಧಿಸುವಂತೆ ಮಾಡುವುದೇ ಈ ಅಕ್ಸಿಟೋಸಿನಿನ್ ಕೆಲಸ. ಸಕಾರಾತ್ಮಕ ಸಂಬಂಧಿಗಳ ಪ್ರೀತಿಯ ಆಲಿಂಗನದಲ್ಲಿ ಇದರ ಸ್ರವಿಕೆ ಹೆಚ್ಚು ಹೆಚ್ಚಾಗಿ ಆಗುತ್ತದೆ. ವಿಶೇಷವಾಗಿ ಮಹಿಳೆಯರು ಮಕ್ಕಳಿಗೆ ಜನ್ಮ ನೀಡುವಾಗ ಮತ್ತು ಮೊಲೆಯುಣಿಸುವಾಗ ಈ ಹಾರ್ಮೋನು ಅಧಿಕ ಸ್ರಾವಗೊಳ್ಳುತ್ತದೆ. ಇದು ತಾಯಿ ಮತ್ತು ಮಗುವಿನ ಸಂಬಂಧವನ್ನು ಹೆಚ್ಚು ಹೆಚ್ಚು ಗಾಢವಾಗಿಸುತ್ತದೆ.

- ಎಂ.ಬಿ. ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.