ಕೇಶಸೇವೆ

ಎಲ್ಲರಲ್ಲೂ ಸೌಂದರ್ಯೋಪಾಸಕ ಗುಣ ಇದ್ದೇ ಇರುತ್ತೆ. ಗಂಟೆಗಟ್ಟಲೆ ಕನ್ನಡಿ ಮುಂದೆ ಕಾಲ ಕಳೆಯುವರಿಗೇನೂ ಕಮ್ಮಿ ಇಲ್ಲ. ಸಭೆ, ಸಮಾರಂಭಗಳಲ್ಲಿ ಈಜಟಿಡಿಜ್ಠ ್ಟಜಿ ಆಡಿಡ್ಠಿಛ್ಛಡ್ಝ್ಟಿಟಿ ಆಗಬೇಕೆಂಬುದು ಎಲ್ಲರ ಆಸೆ. ಎಲ್ಲರ ಗಮನ ಸೆಳೆಯಲು ಎಷ್ಟೆಲ್ಲ ಸಾಹಸಪಡುತ್ತೇವೆ. ಸಮಾರಂಭಗಳು ಬಂತೆಂದರೆ ಬ್ಯೂಟಿ ಪಾರ್ಲರ್‌ಗೆ ಮಾರುಹೋಗದವರು ಬೆರಳೆಣಿಕೆಯಷ್ಟು ಜನ ಮಾತ್ರ ಅನ್ನಿ. ಇತ್ತೀಚಿನ ದಿನಗಳಲ್ಲಿ ಸ್ಟೈಲ್, ಸ್ಮೈಲ್ ಆಗಿ ಕಾಣಿಸಲು ಕ್ಲಿನಿಕ್‌ಗಳ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆಲ್ಲ ಕಾರಣ ಅವರಲ್ಲಿರುವ ಬಾಹ್ಯ ಸೌಂದರ್ಯದ ಪರಿಕಲ್ಪನೆ. ಸೌಂದರ್ಯವೃದ್ಧಿಗೆ ಇಲ್ಲಿವೆ ಇನ್ನಷ್ಟು ಟಿಪ್ಸ್...
ನೀಳವಾದ ಕೇಶ, ಹರವು
ಚಿಕಿತ್ಸೆಯಿಂದ ನೀಳವಾದ ಕೇಶ ರಾಶಿಯಿಂದ ಕೂದಲಿಗೆ ಹೊಸತನದ ಸ್ಪರ್ಶ ನೀಡಬಹುದು. ನೈಜ ಅಥವಾ ನೈಸರ್ಗಿಕದತ್ತವಾದ ಕೇಶ ರಾಶಿಯನ್ನೂ ಹೊಂದಬಹುದು. ಕೂದಲು ಬೆಳವಣಿಗೆಗೆ ಸಹಕಾರಿಯಾಗಬಲ್ಲ ಅಂಶಗಳನ್ನು ಅಳವಡಿಸಿಕೊಳ್ಳಬಹುದು. ಇರುವ ಕೋಶ ರಾಶಿಗೆ 'ಗ್ಲಾಮರ್ ಟಚ್' ಕೊಡಲು ವಿವಿಧ ಬಣ್ಣಗಳಲ್ಲಿ 'ಶೇಡ್' ಕೂಡ ಮಾಡಿಕೊಳ್ಳಬಹುದು.
ಉಜ್ವಲ ಛಾಯಾ ಕೇಶಕ್ಕೆ...
ನೀವು ಕೂದಲು ಪೋಷಣೆಯಲ್ಲಿ ರಸಾಯನಿಕ ಬಳಕೆಯಿಂದ ದೂರವಿದ್ದು, ಕೇಶ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡಬಹುದು. ಕೃತಕ ಕೇಶದಿಂದ 'ಹೈಲೇಟ್' ಆಗುವ ಹಾಗೆ ಯಾಕೆ ಮಾಡಬೇಕು? ಈಗಿರುವ ಕೇಶರಾಶಿಗೆ ತರಹೇವಾರಿ ಬಣ್ಣಗಳ ಲೇಪನ ಮಾಡಬಹುದು. ಹೊಂಬಣ್ಣ, ಕಂದುಬಣ್ಣ, ತಾಮ್ರ ಬಣ್ಣ, ಕೆಂಪು ಬಣ್ಣ ಹಾಗೂ ನೇರಳೆ ಬಣ್ಣಗಳ ಲೇಪನದಿಂದ ಕೇಶ ರಾಶಿಯಲ್ಲಿನ ಕೆಲವು ಕೂದಲನ್ನು ಎದ್ದು ಕಾಣುವ ಹಾಗೆ ಮಾಡಬಹುದು.
ತೆಳ್ಳಗಿನ ಕೇಶರಾಶಿ ಚಿಂತೆ ಬಿಡಿ
ತೆಳ್ಳಗಿನ ಕೇಶರಾಶಿ ಹೆಚ್ಚಾಗಿದೆಯೇ? ಅದಕ್ಕೆಲ್ಲ ನಮ್ಮ ಜೀವನ ಶೈಲಿ ಹಾಗೂ ಕೊಳಕು ಪರಿಸರವೂ ಕಾರಣ. ಆದರೆ ನಿಮಗಿಷ್ಟವಾದ ರೀತಿಯಲ್ಲಿ ಹೇರ್ ಸ್ಟೈಲ್ ರೂಪಿಸಿಕೊಳ್ಳಬಹುದು.
ಮುಖಕ್ಕೆ ಹೊಳಪು
ಮುಖಕ್ಕೆ ಮಸಾಜ್ ಮಾಡುವುದರಿಂದ ಕಾಂತಿ ಹೆಚ್ಚುತ್ತದೆ. ಮುಖದ ಚರ್ಮ ಮತ್ತು ಕೂದಲಿನ ಆಳದಲ್ಲಿ ಮಸಾಜ್ ಪ್ರಭಾವ ಬೀರುತ್ತದೆ. ಮಸಾಜ್‌ನಿಂದ ಸ್ನಾಯುಗಳಿಗೆ ಆರಾಮ ಮತ್ತು ರಕ್ತ ಸಂಚಾರ ಹೆಚ್ಚುತ್ತದೆ. ನಿಷ್ಕ್ರಿಯಗೊಂಡ ತ್ವಚೆಗೆ ಮಸಾಜ್ ಪ್ರಕ್ರಿಯೆ ಪರಿಣಾಮಕಾರಿ. 40-45 ನಿಮಿಷಗಳ ಈ ಚರ್ಮದ ಪಾಲಿಶಿಂಗ್ ನಿಮ್ಮ ಕಾಂತಿ ದುಪ್ಪಟ್ಟುಗೊಳಿಸುತ್ತದೆ.
ಚರ್ಮದ ಕಾಂತಿ ಮತ್ತೆ ಪಡೆಯಿರಿ
ಹಾಲಿನ ಉತ್ಪನ್ನಗಳ ಹುಳಿ ಪದಾರ್ಥ ಅಥವಾ ಹಣ್ಣು, ತರಕಾರಿಗಳನ್ನು ಮಂದವಾದ ತ್ವಚೆಗೆ ಲೇಪಿಸುವುದರಿಂದ ಚರ್ಮದ ಕಾಂತಿ ಕಂಗೊಳಿಸುತ್ತದೆ. ಬಿಸಿಲಿನಿಂದ ಚರ್ಮದ ಕಾಂತಿಹೀನವಾಗಿದ್ದರೂ ಈ ಲೇಪನ ಪ್ರಕ್ರಿಯೆಯಿಂದ ಚರ್ಮದ ಸೂಕ್ಷ್ಮರಂಧ್ರಗಳು ತೆರೆದುಕೊಂಡು ಕಾಂತಿ ಹೆಚ್ಚುತ್ತದೆ.
ನೋವು ರಹಿತ ಚಿಕಿತ್ಸೆ
ಪ್ರಮಾಣೀಕರಿಸಿದ ವೈದ್ಯರ ಮಾರ್ಗದರ್ಶನದಲ್ಲಿ ಕೂದಲು ಕಿರಿದಾಗಿಸಿಕೊಳ್ಳಬಹುದು. 'ಲೇಸರ್ ಹೇರ್ ರಿಡಕ್ಷನ್ ಸಿಸ್ಟಂ'ನಿಂದ ಚಿಕಿತ್ಸೆ ಪಡೆಯಬಹುದು. ನೋವು ರಹಿತವಾಗಿದ್ದು, ಸಾಂಪ್ರದಾಯಿಕ ವಿಧಾನದಲ್ಲಿ ಚಿಕಿತ್ಸೆ ದೊರೆಯುತ್ತದೆ.
- ರುದ್ರಗೌಡ ಮುರಾಳ
pramaadaka@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


