ನಿದ್ದೆಯಿಂದ ಬುದ್ಧಿ

ಹಾಸಿಗೆಯೇ ಸ್ವರ್ಗ ಎಂಬ ಮಾತಿನಲ್ಲಿ ಸತ್ಯವಿದೆ. ಸೂರ್ಯ ನೆತ್ತಿಯ ಮೇಲೆ ಬಂದರೂ ಕೆಲವರಿಗೆ ಏಳೋಕೇ ಮನಸ್ಸಾಗಲ್ಲ! ಆರೋಗ್ಯವಾಗಿರಬೇಕಾದರೆ ಆರು ಗಂಟೆಯಿಂದ ಎಂಟು ಗಂಟೆ ಕಾಲ ಮಲಗಬೇಕು. ಆಗ ಮಾತ್ರ ಆರೋಗ್ಯ, ಮನಸ್ಸು ಚಲನಶೀಲವಾಗಿರುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಆದರೆ, ಕೆಲವರು ಸರಿಯಾಗಿ ನಿದ್ರಿಸುವುದಿಲ್ಲ. ವಯಸ್ಸಾದವರದಂತೂ, ನಿದ್ರೆ ಹತ್ತಿರ ಸುಳಿಯೊಲ್ಲ ಎಂಬ ಕಂಪ್ಲೇಂಟು. ಇದರಿಂದ ನೆನಪಿನ ಶಕ್ತಿ ಕುಗ್ಗಿ ದೇಹ ಬಳಲುತ್ತದೆ. ಮನಸ್ಸಿಗೆ ಸಮಾಧಾನ ಎಂಬುದೇ ಇರುವುದಿಲ್ಲ.
ನಿದ್ರೆ ಇಲ್ಲದೆ ಹದಗೆಟ್ಟ ತಮ್ಮ ಬುದ್ಧಿಶಕ್ತಿಯನ್ನು ಚುರುಕುಗೊಳಿಸಿ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಅನೇಕರು ಮಾರ್ಗೋಪಾಯ ಹುಡುಕುತ್ತಾರೆ. ಔಷಧೋಪಚಾರ ಮಾಡುತ್ತಾರೆ. ಜಾಹಿರಾತುಗಳ ಮೊರೆಹೋಗುತ್ತಾರೆ. ಇದಾವುದರಿಂದಲೂ ಪರಿಹಾರ ಸಿಗುವುದಿಲ್ಲ. ಈತ್ತೀಚೆಗೆ ಲಂಡನ್‌ನ ಯಾರ್ಕ್ ಮತ್ತು ಶೇಫೀಲ್ಡ್ ಹಾಲಂ ವಿಶ್ವವಿದ್ಯಾಲಯದ ತಜ್ಞರ ತಂಡ ಇದಕ್ಕೊಂದು ರಾಮಬಾಣ ಕಂಡು ಹಿಡಿದಿದೆ. ಅದೇನೆಂದರೆ, ನಿಮ್ಮ ಆರೋಗ್ಯ, ನೆನಪಿನ ಶಕ್ತಿ ಹಾಗೂ ನೀವು ಹೊಸ ಹೊಸ ಪದಗಳನ್ನು ನೆನಪಿಟ್ಟುಕೊಳ್ಳಬೇಕಾದರೆ ಹೆಚ್ಚು ಕಾಲ ನಿದ್ರಿಸಬೇಕು! ಸರಿಯಾದ ಸಮಯಕ್ಕೆ ಮಲಗಿ ಸರಿಯಾದ ಸಮಯಕ್ಕೆ ಏಳಬೇಕು. ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೊ, ಅಷ್ಟೇ ಅವನ ದೇಹದ ವಿಶ್ರಾಂತಿಗೆ ನಿದ್ರೆ ಮುಖ್ಯ. ಅದು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಸರಿಯಾದ ನಿದ್ರೆಯಿಂದಲೇ ಆರೋಗ್ಯ ಸಿಗುವುದು. ಯಾವಾಗಲೂ ಆ್ಯಕ್ಟಿವ್ ಮತ್ತು ಅಲರ್ಟ್ ಆಗಿರಲು ನಿದ್ರೆ ಅನಿವಾರ್ಯ.
ನಿದ್ರಾಹೀನತೆಗೆ ಕಾರಣಗಳೇನು?
ನಿದ್ದೆಗೆಟ್ಟು ಓದುವವರು: ಕೆಲವರು ನಿದ್ದೆಗೆಟ್ಟು ಪುಸ್ತಕ ಓದುತ್ತಾರೆ ಅಥವಾ ಟಿವಿ ನೋಡುತ್ತಾರೆ. ಮಾರನೆ ದಿನ ಕಣ್ಣುಗಳು ಆಯಾಸಗೊಂಡಿರುತ್ತವೆ ದೇಹದಲ್ಲಿ ಏನೋ ಸೋಮಾರಿತನ ಆವರಿಸಿಕೊಳ್ಳುತ್ತದೆ. ಯಾವ ಕೆಲಸ ಮಾಡಲೂ ಮನಸ್ಸಿರುವುದಿಲ್ಲ. ಹೀಗಾಗಿ ಹೆಚ್ಚು ನಿದ್ದೆಗೆಟ್ಟು ಓದುವುದು ನಮ್ಮ ಆರೋಗ್ಯ, ನೆನಪಿನ ಶಕ್ತಿಗೆ ಹಾನಿಕರ.
ರಾತ್ರಿ ಪಾಳಿಯದಲ್ಲಿ ಕೆಲಸ: ಇದು ಅನಿವಾರ್ಯ ಮತ್ತು ಅಗತ್ಯವೇ ಆಗಿರಬಹುದು. ಆದರೆ ದೇಹ? ಆರಂಭದಲ್ಲಿ ಖುಷಿಯಂತೆ ಕಂಡರೂ ನಿಧಾನವಾಗಿ ನಿಮ್ಮಲ್ಲೇ ಕಿರಿಕಿರಿ, ನೋವು ಶುರುವಾಗಬಹುದು. ಜೀವ ತಿನ್ನುವ ಕಾಯಿಲೆ ನಿಮ್ಮನ್ನು ಆವರಿಸಿಕೊಳ್ಳಬಹುದು. ಬುದ್ಧಿಶಕ್ತಿ ತಗ್ಗಬಹುದು.
ನಿದ್ರೆ ಇಲ್ಲದಿದ್ರೆ ಆಗುವ ಸಮಸ್ಯೆಗಳು:
- ಜ್ಞಾಪಕ ಶಕ್ತಿಯ ಕೊರತೆ ಎದುರಾಗುತ್ತದೆ.
- ದೇಹಕ್ಕೆ ಆಯಾಸ
- ಹೃದಯಾಘಾತವಾಗಬಹುದು.
- ಮಾನಸಿಕವಾಗಿ ಕುಂದುಂಟಾಗುತ್ತದೆ.
- ಕಣ್ಣಿಗೆ ಆಯಾಸವಾಗುತ್ತದೆ.
- ತಲೆ ನೋವು ಕಾಣಿಸಿಕೊಳ್ಳುವುದು.
- ರಕ್ತದೊತ್ತಡ
- ಬಿಪಿ ಹೆಚ್ಚುತ್ತದೆ.
- ಡಯಾಬಿಟಿಸ್‌ಮತ್ತು ಬೊಜ್ಜು ಅವರಿಸಿಕೊಳ್ಳುತ್ತದೆ.
- ದಿನನಿತ್ಯ ಯೋಗ, ವ್ಯಾಯಾಮದಲ್ಲಿ ತೊಡಗಿ.
- ಹಣ್ಣು ತರಕಾರಿಗಳನ್ನು ತಿನ್ನಿ.
- ಮಲಗುವಾಗ ಹಾಲನ್ನು ಸೇವಿಸಿ.
- ಯೋಚನೆಗಳನ್ನು ಬಿಟ್ಟು ಬಿಡಿ.
- ಮೆತ್ತನೆಯ ಹಾಸಿಗೆಯನ್ನ ಬಳಸಿ.
- ಮಲಗುವ ಮೊದಲು ನಿಮ್ಮ ದೇಹವನ್ನು ಶುಚಿಗೊಳಿಸಿ.
vijay.suni925@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


