ಆರೋಗ್ಯ-ಜೀವನಶೈಲಿ

ಉಪಾಹಾರ ಉಪಕಾರ

ಕೆಲವರು ತೆಳ್ಳಗಾಗಲು ಏನೇನೋ ಮಾಡ್ತಾರೆ. ಒಂದೆರಡು ಹೊತ್ತು ತಿನ್ನುವುದನ್ನೂ ಬಿಡ್ತಾರೆ. ಆದರೆ, ಊಟ ಬಿಡುವುದರಿಂದ ಯಾರೂ ಸ್ಲಿಮ್ ಆಗುವುದಿಲ್ಲ...

ಉಪಾಹಾರ ಉಪಕಾರ
Published On :

ಕೆಲವರು ತೆಳ್ಳಗಾಗಲು ಏನೇನೋ ಮಾಡ್ತಾರೆ. ಒಂದೆರಡು ಹೊತ್ತು ತಿನ್ನುವುದನ್ನೂ ಬಿಡ್ತಾರೆ. ಆದರೆ, ಊಟ ಬಿಡುವುದರಿಂದ ಯಾರೂ ಸ್ಲಿಮ್ ಆಗುವುದಿಲ್ಲ. ಬದಲಿಗೆ ನಿಶ್ಯಕ್ತಿ ಕಾಡುತ್ತದೆ.
ಅದಕ್ಕಾಗಿಯೇ ಬೆಳಗ್ಗೆಯ ತಿಂಡಿಯಲ್ಲಿ ವೈವಿಧ್ಯ, ರುಚಿ ಮತ್ತು ಶಕ್ತಿ ಎಲ್ಲವೂ ಇರಬೇಕು. ಮೊಟ್ಟೆಯೂ ಅಗತ್ಯ. ಇದನ್ನು ಫುಲ್ಫಿಲ್ ಮಾಡೋದ್ರಲ್ಲಿ ಪ್ರತಿ ಗೃಹಿಣಿಯೂ ಸುಸ್ತಾಗುವುದು ಸುಳ್ಳಲ್ಲ. ತಜ್ಞರೂ ಪ್ರೊಟೀನ್, ಖನಿಜಗಳು ಹಾಗೂ ಅಗತ್ಯ ವಿಟಮಿನ್ಗಳನ್ನು ಹೊಂದಿರುವ ಪೌಷ್ಟಿಕಾಂಶಯುತ ಬ್ರೇಕ್ಫಾಸ್ಟ್ ಸೇವಿಸಿ ಎಂದೇ ಸಲಹೆ ನೀಡುತ್ತಾರೆ.

ದೇಹದ ಎಂಜಿನ್ ಗೆ ಇಂಧನ
ಕಡೇ ಬಾರಿಗೆ ಆಹಾರ ತಿಂದ 8-12 ಗಂಟೆಗಳೊಳಗೆ ದೇಹದ ಎಂಜಿನ್ ಸುಸೂತ್ರವಾಗಿ ಓಡಲು ಇಂಧನ ತುಂಬಿಸುವುದು ಅತ್ಯಗತ್ಯ. ಆದರೆ ಬೆಳಗಿನ ಒತ್ತಡಗಳು, ಸರಿಯಾಗಿ ಹಸಿವು ಆಗದಿರುವುದು ಮತ್ತು ಬೆಳಗಿನ ಮೂಡ್ ಸರಿಯಿಲ್ಲದಿರುವುದು ಇತ್ಯಾದಿಗಳಿಂದ ಬೇಕಾಬಿಟ್ಟಿ ಬ್ರೇಕ್ಫಾಸ್ಟ್ ಸೇವಿಸುವವರೇ ಹೆಚ್ಚು. ಉಪಾಹಾರದಿಂದ ವಿಶೇಷವಾಗಿ ಮಕ್ಕಳಲ್ಲಿ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಇದು ತೂಕ ನಿರ್ವಹಣೆಗೆ ಅತ್ಯಂತ ಸಹಕಾರಿ. ಮನಸ್ಸು ಸಮಾಧಾನವಾಗಿರುತ್ತದೆ ಮತ್ತು ಸೂಕ್ತ ಉಪಾಹಾರ ಸೇವಿಸುವವರನ್ನು ಹೃದ್ರೋಗ ಕಾಡುವುದು ಕಡಿಮೆ.

ಏನಿರಬೇಕು ಉಪಾಹಾರದಲ್ಲಿ?
ಉಪಾಹಾರ ಅಗತ್ಯ ಪ್ರೊಟೀನ್, ನಾರು, ವಿಟಮಿನ್ಗಳು ಮತ್ತು ಖನಿಜಗಳೊಂದಿಗೆ ಶಕ್ತಿಯನ್ನೂ ನೀಡುವಂತಿರಬೇಕು. ಸಮತೋಲಿತ ಉಪಾಹಾರದಲ್ಲಿ ಕನಿಷ್ಠ 3 ಅಗತ್ಯ ಆಹಾರ ಗುಂಪುಗಳಾದ ಕಾಳುಗಳು, ಹಾಲಿನ ಉತ್ಪನ್ನಗಳು (ಹಾಲು ಅಥವಾ ಮೊಸರು) ಮತ್ತು ಹಣ್ಣು ಅಥವಾ ತರಕಾರಿಗಳಿರಬೇಕು. ತಿನ್ನಲು ಸಿದ್ಧವಿರುವ ಕಾಳುಗಳು, ಹಾಲು ಮತ್ತು ಹಣ್ಣು ಬೆಳಗಿನ ಉಪಾಹಾರಕ್ಕೆ ಉತ್ತಮ ಆಯ್ಕೆ. ಮೊಟ್ಟೆ ಹಾಗೂ ಇಡೀ ಕಾಳುಗಳ ಟೋಸ್ಟ್, ಹಣ್ಣು, ತರಕಾರಿ ಪರೋಟಾ (ಎಣ್ಣೆ ಹಾಕದೆ) ಮತ್ತು ಮೊಸರು ಅಥವಾ ಮಜ್ಜಿಗೆಯೂ ಸಮತೋಲಿತ ಉಪಾಹಾರವೇ.

ಕಾಳುಗಳು ಏಕೆ ಬೇಕು?

  •     ಪೌಷ್ಟಿಕಾಂಶಯುಕ್ತ ಕಾಳುಗಳು ಯೋಗಕ್ಷೇವು ಹೆಚ್ಚಿಸುತ್ತವೆ.
  •     ಆತಂಕ ಮತ್ತು ಖಿನ್ನತೆಗಳನ್ನು ಕಡಿಮೆ ಮಾಡುತ್ತದೆ.
  •     ದೇಹದ ತೂಕ ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಕಾಳುಗಳು ಸಹಕಾರಿ.
  •     ಕಾಳುಗಳಲ್ಲಿ ಕಬ್ಬಿಣ, ಕ್ಯಾಲ್ಷಿಯಂ ಮತ್ತು ಸತುವಿನಂಥ ಖನಿಜಗಳಿರುತ್ತವೆ.
  •     ಎ, ಸಿ ಮತ್ತು ಬಿ ಕಾಂಪ್ಲೆಕ್ಸ್ ವಿಟಮಿನ್ಗಳಿರುತ್ತವೆ.
ವಾರದಲ್ಲಿ ಸಮತೋಲಿತ ಆಹಾರ ಹೇಗಿರಬೇಕು?
- ಚಾರು ದತ್ತ, ಪೌಷ್ಟಿಕಾಂಶ ತಜ್ಞ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.