ಆರೋಗ್ಯ-ಜೀವನಶೈಲಿ

ಗರ್ಭಿಣಿಗೆ ಮೆನು

ಗರ್ಭಿಣಿಗೆ ಮೆನು
Published On :

ಸಿಹಿ ಇರಲಿ, ಕಹಿ ಇರಲಿ ಗರ್ಭಿಣಿಯರಿಗೆ ಕಂಡಿದ್ದೆಲ್ಲಾ ತಿನ್ನಬೇಕೆಂಬ ಆಸೆ. ತಿನ್ನಲು ಕುಳಿತರೆ ಏನೂ ಸೇರುವುದಿಲ್ಲ. ಒಂದೆರಡು ತುತ್ತು ತಿಂದು ಮೇಲೇಳುತ್ತಾರೆ. ಆ ಮೇಲೆ ಮತ್ತೊಂದರೆಡೆ ಗಮನಹರಿಸುತ್ತಾರೆ. ಮಾಡರ್ನ್ ಯುಗದಲ್ಲಿ ಮೈಮಾಟ ಚೆನ್ನಾಗಿರಲೆಂದು ಡಯೆಟ್ ಮಾಡಿದವರಿಗಂತೂ ತುಸು ಕಷ್ಟವೇ ಸರಿ. ಅದು ಬೇಡ, ಇದು ಬೇಡ ಎಂಬ ರಗಳೆಯ ಮಧ್ಯೆ 'ಬಯಕೆ' ಬೆಟ್ಟದಷ್ಟಾಗುತ್ತದೆ. 'ಇಷ್ಟ- ಕಷ್ಟ'ದ ಬಯಕೆ ಮಾತ್ರ ತೀರುವುದಿಲ್ಲ. ಹೀಗಾಗಿ ಬದಲಾದ ಜೀವನ ಶೈಲಿಯಲ್ಲಿ ಗರ್ಭಿಣಿಯರಿಗೆ ಉತ್ತಮ ಹಾಗೂ ಆರೋಗ್ಯಕರವಾದ 'ಫಾಸ್ಟ್ ಫುಡ್‌' ಟಿಪ್ಸ್ ಇಲ್ಲಿವೆ...

  • ಹಣ್ಣುಗಳು ಆರೋಗ್ಯಕ್ಕೆ ಉತ್ತಮ. ಸೇಬು, ಹಲಸು, ಬಾಳೇಹಣ್ಣು, ಪೇರಲ, ಕಿತ್ತಳೆ, ಮೊಸಂಬಿ ಸೇರಿದಂತೆ ಇನ್ನಿತರೆ ಹಣ್ಣುಗಳನ್ನು ಜ್ಯೂಸ್ ಮಾಡಿಕೊಂಡು ಪ್ರತಿದಿನ ಕುಡಿಯಿರಿ. ಜ್ಯೂಸ್ ಕುಡಿಯಲು ತೊಂದರೆ ಎನಿಸಿದರೆ ಕತ್ತರಿಸಿ ಆಗಾಗ ತಿನ್ನುತ್ತಿರಿ. ಇದರಿಂದ ಪೌಷ್ಟಿಕಾಂಶದ ಜತೆಗೆ 'ಬಯಕೆ'ಯೂ ಈಡೇರುತ್ತದೆ.
  • ಹಸಿ ತರಕಾರಿ ಗರ್ಭಿಣಿಯರಿಗೆ ತುಂಬಾ ಸಹಕಾರಿ. ಟೊಮೇಟೊ, ಕ್ಯಾರೆಟ್, ಸೌತೆಕಾಯಿ, ಸೊಪ್ಪು ಸೇರಿದಂತೆ ಇತರೆ ಹಸಿ ತರಕಾರಿ ತಿನ್ನುವುದರಿಂದ ಆರೋಗ್ಯಕರ ಹೆರಿಗೆಗೆ ಸಹಾಯಕವಾಗುತ್ತದೆ.
  • ನಿತ್ಯ ಕನಿಷ್ಠ 6 ಚಮಚದಷ್ಟು ಕೆನೆ ಮೊಸರು ಸೇವಿಸಿ. ಇದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ. ಅಲ್ಲದೇ ಪೌಷ್ಟಿಕಾಂಶ ಹಾಗೂ ಖನಿಜಾಂಶಗಳೂ ಹೇರಳವಾಗಿ ಲಭ್ಯವಾಗುತ್ತವೆ.
  • ಹಣ್ಣು, ಮೊಸರು ತಿನ್ನುವುದರ ಜತೆಗೆ ಒಣ ದ್ರಾಕ್ಷಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಪೊಟ್ಯಾಷಿಯಂ, ಖನಿಜಾಂಶಗಳು ದೇಹ ಸೇರುತ್ತವೆ. ಇದು ಹುಟ್ಟಲಿರುವ ಮಕ್ಕಳ ಹಲ್ಲನ್ನು ಗಟ್ಟಿಮುಟ್ಟಾಗಿ ಬೆಳೆಯಲು ಸಹಾಯ ಮಾಡುತ್ತದೆ. ಬಾದಾಮಿ, ಕೇಸರಿ ತಿನ್ನುವುದು ರೂಢಿಸಿಕೊಳ್ಳಿ.
  • ಮನೆಯಲ್ಲೇ ಲಭ್ಯವಾಗುವ ದ್ವಿದಳ ಧಾನ್ಯಗಳನ್ನು ನೆನೆಸಿ ಮೊಳಕೆಯೊಡೆಸಿ ನಿತ್ಯ ಒಂದು ಕಪ್ಪಿನಷ್ಟು ತಿನ್ನಿ. ಕಚೇರಿ ಅಥವಾ ಹೊರಗಡೆ ತೆರಳುವಾಗ ಬ್ಯಾಗ್‌ನಲ್ಲಿಟ್ಟುಕೊಂಡು ಹೋಗಿ. ಬಿಡುವಿದ್ದಾಗ ತಿನ್ನಿ.
  • ವಿಟಮಿನ್ 'ಎ' ಹೆಚ್ಚಿಗೆ ಲಭ್ಯವಾಗುವುದು ಕ್ಯಾರೆಟ್‌ನಲ್ಲಿ. ನಿತ್ಯ ಒಂದು ಅಥವಾ ಎರಡು ಕ್ಯಾರೆಟ್ ತಪ್ಪದೇ ತಿನ್ನಿ. ಕಚೇರಿಗೆ ಹೋಗುವಾಗ ಸಣ್ಣ ತುಂಡುಗಳಾಗಿ ಮಾಡಿಕೊಂಡು ಚಿಕ್ಕ ಬಾಕ್ಸ್‌ನಲ್ಲಿಟ್ಟುಕೊಂಡು ಹೋಗಿ. ಮಧ್ಯಾಹ್ನ ಊಟ ಅಥವಾ ಟೀ ಸಮಯದಲ್ಲಿ ತಿನ್ನಿ.
  • ಒಂದು ಗ್ಲಾಸ್ ಗಿಣ್ಣನ್ನು ಸೇವಿಸಿ. ಒಂದು ಗ್ಲಾಸ್ ಗಿಣ್ಣು, 8 ಗ್ಲಾಸ್ ಹಾಲಿಗೆ ಸಮ.
  • ಕಿತ್ತಳೆಹಣ್ಣಿನಲ್ಲಿ ವಿಟಮಿನ್ 'ಡಿ' ಹಾಗೂ ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ. ನಿತ್ಯ ಕನಿಷ್ಠ ಎರಡು ಕಿತ್ತಳೆ ಹಣ್ಣು ತಿನ್ನುವ ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಿರಿ.
  • ಫೋಲಿಕ್ ಆ್ಯಸಿಡ್ ಲಭ್ಯವಾಗುವ ದ್ವಿದಳ ಧಾನ್ಯ ಹೆಚ್ಚು ಸೇವಿಸಿ. ಕಚೇರಿ ಅಥವಾ ಹೊರಗಡೆ ಹೋಗುವಾಗ ಬಾಕ್ಸ್‌ನಲ್ಲಿಟ್ಟುಕೊಂಡು ಹೋಗಿ. ಬಿಡುವಿದ್ದಾಗ ತಿನ್ನುವ ರೂಢಿ ಬೆಳೆಸಿಕೊಳ್ಳಿ.
  • ಬೊಜ್ಜು ರಹಿತ ಗಟ್ಟಿ ಪದಾರ್ಥ ಹಾಗೂ ಆಹಾರ ಸೇವಿಸಿ. ಇದರಿಂದ ಅನವಶ್ಯಕ ಬೊಜ್ಜು ಬೆಳೆಯುವುದು ತಪ್ಪುತ್ತದೆ. 'ಬಯಕೆ'ಯಾಗುತ್ತಿದೆ ಎಂದು ಕಂಡ ಕಂಡದ್ದನ್ನೆಲ್ಲಾ ತಿನ್ನಬೇಡಿ.
- ಅಶ್ವಿನಿ ಮೂಲಿಮನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.