ಆರೋಗ್ಯ-ಜೀವನಶೈಲಿ

ಮುಟ್ಟು ಬಾ

ಮುಟ್ಟು ಬಾ
Published On :

ಲೈಂಗಿಕತೆ ಬಗ್ಗೆ ಓಪನ್ನಾಗಿ ಮಾತನಾಡೋದು ತಪ್ಪು ಎನ್ನುವುದು ಹಲವರ 'ತಪ್ಪು ಗ್ರಹಿಕೆ'. ಇಂಥ ಸನ್ನಿವೇಶದ ಮಧ್ಯೆ ಲೈಂಗಿಕ ವಿಜ್ಞಾನ ಪಠ್ಯವಾಗಲಿ ಎಂಬ ಕೂಗು ಕೇಳಿ ಬರುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಅದಿರಲಿ. ಋತುಸ್ರಾವದ ಅವಧಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹಲವರು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಹಿಂದಿನಿಂದ ನಡೆದುಬಂದ ಕಟ್ಟುಪಾಡು. ಮತ್ತೆ ಕೆಲವರಲ್ಲಿ ಅಜ್ಞಾನದ ಕಾರಣದಿಂದ 'ಮಿಲನ'ದಿಂದ ದೂರ ಉಳಿಯುತ್ತಾರೆ.
ಆದರೆ, ತಜ್ಞರ ಪ್ರಕಾರ 'ಪಿರಿಯಡ್‌' ದಿನಗಳಲ್ಲೂ ಧಾರಾಳವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎನ್ನುತ್ತಾರೆ. ಅದಕ್ಕಿಂತ ಪೂರ್ವದಲ್ಲಿ ಕೆಲವು ಮುನ್ನೆಚರಿಕೆ ಕ್ರಮ ಅನುಸರಿಸುವುದು ಒಳಿತು ಎನ್ನುತ್ತಾರೆ ತಜ್ಞರು.
ಸೋಂಕು ತಗುಲುವ ಸಾಧ್ಯತೆ
ಮೊದಲೇ ಹೇಳಿದಂತೆ 'ಪಿರಿಯಡ್‌' ದಿನಗಳಲ್ಲೂ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಆದರೆ, ಇಬ್ಬರಲ್ಲಿ ಒಬ್ಬರಿಗೆ ಸೋಂಕು ಇದ್ದರೆ ಅದು ಮತ್ತೊಬ್ಬರಿಗೆ ತಗುಲುವ ಸಾಧ್ಯತೆ ಅಧಿಕ. ಹಾಗಾಗಿ ಸೋಂಕು ತಗುಲದಂತೆ ನಿಗಾ ವಹಿಸುವುದು ತೀರಾ ಅಗತ್ಯ. ಅಂದರೆ ಸುರಕ್ಷಾ ಕ್ರಮ ಕೈಗೊಳ್ಳಬೇಕು. ತುಸು ಅಜಾಗೃತೆ ವಹಿಸಿದರೆ ಸೋಂಕು ಬರಬಹುದು.
ಡೆಂಟಲ್ ಡ್ಯಾಮ್ ಕವಚ
ಹಾಗಂತ ಆ ದಿನಗಳಲ್ಲಿ ಮಿಲನದಿಂದ ದೂರವಿದ್ದು ವಿರಹ ವೇದನೆ ಅನುಭವಿಸಬೇಕಿಲ್ಲ. ಅದಕ್ಕಾಗಿಯೇ ವೈವಿಧ್ಯ ಕಾಂಡೋಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವು 'ಪಿರಿಯಡ್‌' ಟೈಮ್‌ನಲ್ಲಿ ಬ್ಯಾಕ್ಟೀರಿಯಾದಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ. ಆ ಪೈಕಿ ಡೆಂಟಲ್ ಡ್ಯಾಮ್ ಕೂಡ ವಿನೂತನ ಸಾಧನ. ಇದನ್ನು ಅಳವಡಿಸಿಕೊಂಡರೆ ಯಾವುದೇ ಅಡೆತಡೆಗಳಿಲ್ಲದೆ 'ಸುಖ' ಅನುಭವಿಸಬಹುದು. ಅದನ್ನು ಬಳಸುವುದಕ್ಕಿಂತ ಪೂರ್ವದಲ್ಲಿ ತಜ್ಞರ ಸಲಹೆ ಪಡೆಯಬೇಕು.
ಕೀಳರಿಮೆ ಬೇಡ
'ಪಿರಿಯಡ್‌' ಕೂಡ ಪ್ರಕೃತಿ ಕೊಡುಗೆ. ಇದರ ಕುರಿತು ಕೀಳರಿಮೆ ಭಾವ ತರವಲ್ಲ. ಈ ಅವಧಿಯಲ್ಲಿ ಮಹಿಳೆಯರಲ್ಲಿ ಸುಸ್ತು, ಆಯಾಸ, ಬಳಲಿಕೆ ಸಹಜ. ಯಾಕಾದರೂ ಇದು ಬರುತ್ತೆ ಎಂಬ ಕೀಳರಿಮೆ ಮನಸ್ಸಿನಿಂದ ತೆಗೆದು ಹಾಕಬೇಕು. ಪ್ರಕೃತಿಯ ಕೊಡುಗೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಗರ್ಭ ಧರಿಸುವ ಸಾಧ್ಯತೆ ಕಡಿಮೆ
ಋತುಸ್ರಾವ ಅವಧಿಯಲ್ಲಿ ಮಾಡುವ ಮಿಲನ ಮಹೋತ್ಸವದಿಂದ ಗರ್ಭ ಧರಿಸುವ ಸಾಧ್ಯತೆ ತೀರಾ ಕಡಿಮೆ. ಮಗು ಪಡೆಯಲು ಈ ಅವಧಿಯಲ್ಲಿ ಮಿಲನ ಸರಿಯಲ್ಲ. ಅದಕ್ಕಾಗಿ ಋತುಸ್ರಾವದ ನಂತರ ಅಂದರೆ ಫಲಿತ ದಿನಗಳ ಸಮಯ ಪ್ರಶಸ್ತ. ಇನ್ನು ಮಹಿಳೆಯರ 'ಪಿರಿಯಡ್‌' ದಿನಗಳ ಸಂದರ್ಭವನ್ನು ಕೆಲವು ಕಾಮುಕರು ಅವರನ್ನು ದುರುಪಯೋಗ ಮಾಡಿಕೊಳ್ಳಬಹುದು. ಆದ್ದರಿಂದ ಮಹಿಳೆಯರು ಜಾಗೃತರಾಗಿರುವುದು ಅಗತ್ಯ. <

ಸುರಕ್ಷಾ ಕ್ರಮ ಅನುಸರಿಸಿ...
ಸಾಮಾನ್ಯವಾಗಿ 'ಪಿರಿಯಡ್‌' ದಿನಗಳಲ್ಲಿ ಗಂಡು- ಹೆಣ್ಣುಗಳ ಮಿಲನಕ್ಕೆ ಯಾವುದೇ ಅಡ್ಡಿಯಿಲ್ಲ. ಇಂಥ ಸ್ಥಿತಿಗೆ ಹಿಂದಿನಿಂದ ಬಂದ ಕಟ್ಟುಪಾಡು ಕಾರಣ ಇರಬಹುದು. ಆದರೆ, ಇಬ್ಬರಲ್ಲಿ ಒಬ್ಬರಿಗೆ ಸೋಂಕು ಇದ್ದರೆ ಅದು ಇನ್ನೊಬ್ಬರಿಗೆ ತಗುಲಬಹುದು. ಅದಕ್ಕಾಗಿ ಸುರಕ್ಷಾ ಸಾಧನ, ಕ್ರಮ ಅನುಸರಿಸುವುದನ್ನು ಮರೆಯಬಾರದು.
- ಡಾ. ಪದ್ಮಿನಿ ಪ್ರಸಾದ್, ಲೈಂಗಿಕ ತಜ್ಞೆ

-ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.