ಕಾರಿನ ಒಳಗೆ ಮತ್ತು ಹೊರಗೆ ಬಳಸಬಹುದಾದ ಪಯೊನೀರ್ ಡಿಟ್ಯಾಚಬಲ್ ಟ್ಯಾಬ್ಲೆಟ್ ಬಿಡುಗಡೆ!
ಇನ್-ಕಾರ್ ಎಂಟರ್ಟೈನ್ಮೆಂಟ್ ಸಿಸ್ಟಮ್ ತಯಾರಕರಾದ ಪಯೊನೀರ್ ಇಂಡಿಯಾ, ಡಿಟ್ಯಾಚಬಲ್ ಬಹುಪಯೋಗಿ ಟ್ಯಾಬ್ಲೆಟ್ ಕಾಂಬೊವನ್ನು ಬಿಡುಗಡೆ ಮಾಡಿದೆ.

ಇನ್-ಕಾರ್ ಎಂಟರ್ಟೈನ್ಮೆಂಟ್ ಸಿಸ್ಟಮ್ ತಯಾರಕರಾದ ಪಯೊನೀರ್ ಇಂಡಿಯಾ, ಡಿಟ್ಯಾಚಬಲ್ ಬಹುಪಯೋಗಿ ಟ್ಯಾಬ್ಲೆಟ್ ಕಾಂಬೊವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 33,890 ರೂ. ಆಗಿರುತ್ತದೆ.
ಸ್ಮಾರ್ಟ್ ಯೂನಿಟ್ ರಿಸೀವರ್ ಎಸ್‌ಡಿಎ -835TAB ಮತ್ತು SPH-T20BT ಕಾಂಬೋನಲ್ಲಿ ನಿಜವಾದ ಆಂಡ್ರಾಯ್ಡ್ ಓಎಸ್‌ಗೆ ಪ್ರಮಾಣೀಕರಿಸಿದ ಆಕ್ಸಸ್ ಇರುತ್ತದೆ ಮತ್ತು ಇದರಲ್ಲಿ ಗೂಗಲ್ ಮ್ಯಾಪ್ಸ್, ಯೂಟ್ಯೂಬ್, ಜಿಮೇಲ್ ಮತ್ತು ಪಯೊನೀರ್‌ನ ಪ್ರತ್ಯೇಕ ಅಪ್ಲಿಕೇಶನ್ "ಪಯೊನೀರ್ ಸ್ಮಾರ್ಟ್ ಸಿಂಕ್ ಆ್ಯಪ್" ಗಳನ್ನು ಮೊದಲೇ ಇನ್ ಸ್ಟಾಲ್ ಮಾಡಲಾಗಿದೆ.
ಎಸ್‌ಡಿಎ -835TAB ಟ್ಯಾಬ್ಲೆಟ್, 8 ಇಂಚಿನ ಹೈ-ರೆಸಲ್ಯೂಶನ್ ಸ್ಕ್ರೀನ್ ಡಿಸ್ಪ್ಲೇ ಮತ್ತು ಪಯೊನೀರ್‌ನ ಆಡಿಯೊಫೈಲ್ ಧ್ವನಿ ಗುಣಮಟ್ಟವನ್ನು ಹೊಂದಿದೆ.
ಕಂಪನಿಯ ಪ್ರಕಾರ, ಈ ಬಹುಪಯೋಗಿ ಟ್ಯಾಬ್ಲೆಟ್ ಅನ್ನು ವಾಹನದ ಒಳಗೆ ಮತ್ತು ಹೊರಗೆ ಬಳಸಬಹುದು.
ಆಡಿಯೊ ರಿಸೀವರ್, ಎಸ್‌ಪಿಹೆಚ್-T20BT, ಟ್ಯಾಬ್ಲೆಟ್ ಮೌಂಟ್ ಕ್ರ್ಯಾಡಲ್ ನೊಂದಿಗೆ 2-ಡಿಐಎನ್ ರಿಸೀವರ್ ಅನ್ನು ಹೊಂದಿದೆ. ಜೊತೆಗೆ, ಮೊಸ್ಫೆಟ್ 50Wx4 ಆಂಪ್ಲಿಫೈಯರ್, 3 ಆರ್ಸಿಎ ಪ್ರಿ-ಔಟ್, ರಿಯರ್ ಕ್ಯಾಮರಾ ಇನ್ಪುಟ್ ಮತ್ತು ಬ್ಲೂಟೂತ್ ಹೊಂದಿದೆ.
ಹಿಂಭಾಗದ ಸ್ಕ್ರೀನ್ ಗಳನ್ನು ಸಂಪರ್ಕಿಸಲು ಇದು ವೀಡಿಯೊ ಔಟ್‌ಪುಟ್, ಸ್ಟೀರಿಂಗ್ ವೀಲ್ ಕಂಟ್ರೋಲ್ ಮತ್ತು ಆಡಿಯೊ ಟ್ಯೂನಿಂಗ್ ಸೆಟ್ಟಿಂಗ್‌ಗಳನ್ನು ಸಂಪರ್ಕಿಸಲು ವೈರ್ಡ್ ರಿಮೋಟ್ ಅನ್ನು ಸಹ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


