ಅಡುಗೆ

ಉಪ್ಪಿಟ್ಟು ತಿಂದು ಬೇಸರವಾಗಿದೆಯಾ? ಒಮ್ಮೆ ಈ ಸ್ಪೆಷಲ್ ರವೆ ವಾಂಗಿಬಾತ್ ಟ್ರೈ ಮಾಡಿ...

ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ದೋಸೆ ತಿಂದು ಬೇಸರವಾಗಿದೆಯಾ? ಹಾಗಾದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ, ಮಸಾಲೆಯುಕ್ತ ರವೆ ವಾಂಗಿ ಬಾತ್ ತಯಾರಿಸಿ ನೋಡಿ.

ಉಪ್ಪಿಟ್ಟು ತಿಂದು ಬೇಸರವಾಗಿದೆಯಾ? ಒಮ್ಮೆ ಈ ಸ್ಪೆಷಲ್ ರವೆ ವಾಂಗಿಬಾತ್ ಟ್ರೈ ಮಾಡಿ...
ರವೆ ವಾಂಗಿ ಬಾತ್
Published On :

ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ದೋಸೆ ತಿಂದು ಬೇಸರವಾಗಿದೆಯಾ? ಹಾಗಾದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ, ಮಸಾಲೆಯುಕ್ತ ರವೆ ವಾಂಗಿ ಬಾತ್ ತಯಾರಿಸಿ ನೋಡಿ.

ರವೆ, ಟೊಮೆಟೊ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಬಟಾಣಿ ಹಾಗೂ ವಾಂಗಿಬಾತ್ ಪುಡಿ ಬಳಸಿ ಮಾಡುವ ಈ ತಿಂಡಿ ರುಚಿಯ ಜೊತೆಗೆ ತರಕಾರಿಗಳನ್ನೂ ಒಳಗೊಂಡಿರುತ್ತದೆ. ಮನೆಯಲ್ಲೇ ಸುಲಭವಾಗಿ ಸಿಗುವ ಪದಾರ್ಥಗಳಿಂದ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ರೆಸಿಪಿ ಬೆಳಗಿನ ಉಪಾಹಾರಕ್ಕೂ, ಸಂಜೆ ತಿಂಡಿಗೂ ಸೂಕ್ತ. ಹಾಗಾದರೆ, ಘಮಘಮಿಸುವ ರುಚಿಕರವಾದ ರವೆ ವಾಂಗಿ ಬಾತ್ ಮಾಡುವ ಸುಲಭ ವಿಧಾನ ತಿಳಿಯೋಣ ಬನ್ನಿ...

ಬೇಕಾಗುವ ಪದಾರ್ಥಗಳು...

  • ಟೊಮೆಟೋ- 1

  • ಬ್ಯಾಡಗಿ ಮೆಣಸಿನ ಕಾಯಿ- 3-4

  • ಶುಂಠಿ- ಸ್ವಲ್ಪ

  • ಬೆಳ್ಳುಳ್ಳಿೃ-ಸ್ವಲ್ಪ

  • ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)

  • ಹಸಿಮೆಣಸಿನಕಾಯಿ- 3 (ಸಣ್ಣಗೆ ಹೆಚ್ಚಿದ್ದು)

  • ಕ್ಯಾರೆಟ್- 1 (ಸಣ್ಣಗೆ ಹೆಚ್ಚಿದ್ದು)

  • ಬೀನ್ಸ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)

  • ಬಟಾಣಿ-ಸ್ವಲ್ಪ

  • ಎಣ್ಣೆ- ಸ್ವಲ್ಪ

  • ಸಾಸಿವೆ-ಸ್ವಲ್ಪ

  • ಕರಿಬೇವು-ಸ್ವಲ್ಪ

  • ಉಪ್ಪು- ರುಚಿಗೆ ತಕ್ಕಷ್ಟು

  • ಅರಿಶಿಣದ ಪುಡಿ- ಸ್ವಲ್ಪ

  • ರವೆ-1 ಬಟ್ಟಲು

  • ವಾಂಗಿಬಾತ್ ಪುಡಿ-1.5 ಚಮಚ

ಮಾಡುವ ವಿಧಾನ...

ಮೊದಲಿಗೆ ಬಿಸಿ ನೀರಿನಲ್ಲಿ ಬ್ಯಾಡಗಿ ಮೆಣಸಿನ ಕಾಯಿಯನ್ನ 10 ನಿಮಿಷ ನೆನೆಸಿಟ್ಟುಕೊಳ್ಳಿ. ಬಳಿಕ ಮಿಕ್ಸಿ ಜಾರ್'ಗೆ ಟೊಮೆಟೋ, ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಇದೀಗ ಒಲೆಯ ಮೇಲೆ ಪಾತ್ರೆ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಕರಿಬೇವು. ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಕೆಂಪಗೆ ಹಿರಿಯಿರಿ.

ಬಳಿಕ ಬೀನ್ಸ್, ಕ್ಯಾರೆಟ್ ಹಾಗೂ ಬಟಾಣಿ ಹಾಕಿ ಸ್ವಲ್ಪ ಕಾಲ ಕೈಯಾಡಿಸಿ. ತರಕಾರಿ ಬೆಂದ ಬಳಿಕ ರುಬ್ಬಿಕೊಂಡ ಮಿಶ್ರಣ ಹಾಕಿ, ಎಣ್ಣೆ ಬಿಡುವವರೆಗೆ ಹುರಿಯಿರಿ. ಇಷ್ಟಪಡುವವರು ಉದ್ದ ಬದನೆಕಾಯಿಯನ್ನೂ ಬಳಸಬಹುದು.

ನಂತರ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ ಹಾಗೂ ವಾಂಗಿಬಾತ್ ಪುಡಿ ಹಾಕಿ ಮಿಶ್ರಣ ಮಾಡಿ. ಇದೀಗ ಒಂದು ಬಟ್ಟಲು ರವೆಗೆ 2 ಬಟ್ಟಲು ನೀರು ಹಾಕಿ. 5 ನಿಮಿಷಗಳ ಕುದಿಯಲು ಬಿಡಿ. ಎಣ್ಣೆ ಹಾಕಿ ಹುರಿದುಕೊಂಡ ರವೆಯನ್ನು ಹಾಕಿ ನಿಧಾನವಾಗಿ ಕೈಯಾಡಿಸಿ. ಇದೀಗ ರುಚಿಕರವಾದ ರವೆ ವಾಂಗಿ ಭಾತ್ ಸವಿಯಲು ಸಿದ್ಧ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.