ಚಿಕನ್ ಸೂಪ್ | Chicken Soup Recipe in Kannada
ರುಚಿಕರವಾದ ಚಿಕನ್ ಸೂಪ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...
ಚಿಕನ್- 200-300 ಗ್ರಾಂ
ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
ಹಸಿಮೆಣಸಿನಕಾಯಿ- 3-4
ಕಾಳುಮೆಣಸು- ಸ್ವಲ್ಪ
ಚಕ್ಕೆ- ಸಣ್ಣ ಪೀಸ್
ಅರಿಶಿನ-ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು- ಸ್ವಲ್ಪ
ಎಣ್ಣೆ- ಅಗತ್ಯಕ್ಕನುಗುಣವಾಗಿ
ಮಾಡುವ ವಿಧಾನ...
ಒಲೆಯ ಮೇಲೆ ಕುಕ್ಕರ್ ಇಟ್ಟು, ಎಣ್ಣೆ ಹಾಕಿ. ಬಿಸಿ ಮಾಡಿ, ಇದಕ್ಕೆ ಬೆಳ್ಳುಳ್ಳಿ-ಈರುಳ್ಳಿ-ಶುಂಠಿ ಹಾಗೂ ಹಸಿ ಮೆಣಸಿನಕಾಯಿ, ಕಾಳು ಮೆಣಸು, ದಾಲ್ಚಿನ್ನಿ, ಚಿಕನ್ ಎಲ್ಲವನ್ನೂ ಹಾಕಿ ಕೆಲವು ನಿಮಿಷಗಳವರೆಗೆ ಕೈಯಾಡಿಸಿ ಚಿಕನ್ ಬಣ್ಣ ಬದಲಾದ ಮೇಲೆ ಅದಕ್ಕೆ ಉಪ್ಪು, ಅರಿಶಿಣ ಹಾಕಿ ತಿರುವಿ.
ಈಗ ಬೇಕಾದಷ್ಟು ನೀರು ಸೇರಿಸಿ 3-4 ಸೀಟಿ ಬರುವವರೆಗೆ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿದರೆ ರುಚಿಕರವಾದ ಚಿಕನ್ ಸೂಪ್ ಸವಿಯಲು ಸಿದ್ಧ.
ಟಿಪ್ಸ್:
ಇನ್ನೂ ಖಾರ ಬೇಕಂದ್ರೆ ಕಾಳು ಮೆಣಸಿನ ಪುಡಿ ಮೇಲೆ ಉದುರಿಸಿ.
ಗಟ್ಟಿ ಸೂಪ್ ಬೇಕಾದರೆ 1 ಟೀ ಚಮಚ ಕಾರ್ನ್ ಫ್ಲೋರ್ ಅನ್ನು ನೀರಲ್ಲಿ ಕಲಸಿ ಕೊನೆಯಲ್ಲಿ ಸೇರಿಸಿ ಕುದಿಸಿ.
ತರಕಾರಿ ಬೇಕೆಂದರೆ ಕ್ಯಾರೆಟ್, ಬೀನ್ಸ್ ಸಣ್ಣಗೆ ಹೆಚ್ಚಿ ಚಿಕನ್ ಜೊತೆ ಹಾಕಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


