ಅಡುಗೆ

ಹೋಳಿಗೆ ಸಾರು | Holige Saaru Recipe in Kannada

ರುಚಿಕರವಾಗ ಹೋಳಿಗೆ ಸಾರು ಮಾಡುವ ವಿಧಾನ...

ಹೋಳಿಗೆ ಸಾರು | Holige Saaru Recipe in Kannada
ಒಬ್ಬಟ್ಟಿನಿ ಸಾರು
Published On :

ಬೇಕಾಗುವ ಪದಾರ್ಥಗಳು...

  • ಬೇಳೆ ಬೇಯಿಸಿಕೊಂಡ ನೀರು- 2-3 ಬಟ್ಟಲು

  • ಈರುಳ್ಳಿ- 1

  • ಬೆಳ್ಳುಳ್ಳು- ಸ್ವಲ್ಪ

  • ಹುಣಸೆಹಣ್ಣು- ಲಿಂಬೆ ಗಾತ್ರದಷ್ಟು

  • ಜೀರಿಗೆ-ಸ್ವಲ್ಪ

  • ಮೆಣಸು-ಸ್ವಲ್ಪ

  • ಕರಿಬೇವು-ಸ್ವಲ್ಪ

  • ಕೊತ್ತಂಬರಿ ಸೊಪ್ಪು-ಸ್ವಲ್ಪ

  • ಒಬ್ಬಟ್ಟಿಗೆ ಮಾಡಿಕೊಂಡ ಹೂರಣ- 1 ಸಣ್ಣ ಬಟ್ಟಲು

  • ಸಾಂಬಾರ್ ಪುಡಿ- 1 ಚಮಚ

  • ಖಾರದ ಪುಡಿ- 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಟೊಮೆಟೋ- 3

  • ಅರಿಶಿನ – ಚಿಟಿಕೆ

  • ಒಣಮೆಣಸಿನಕಾಯಿ – 4-5

  • ತೆಂಗಿನ ತುರಿ – 1 ಬಟ್ಟಲು

  • ಎಣ್ಣೆ – 1 ಚಮಚ

  • ಸಾಸಿವೆ – ಸ್ವಲ್ಬ

  • ಕರಿಬೇವು – ಕೆಲವು

  • ಹಿಂಗು – ಚಿಟಿಕೆ

  • ತುಪ್ಪ ಅಥವಾ ಎಣ್ಣೆ – 1 ಚಮಚ

ಮಾಡುವ ವಿಧಾನ...

  • ಮೊದಲಿಗೆ ಒಂದು ಪ್ಯಾನ್'ಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಜಾರಿಗೆ, ಮೆಣಸು ಹಾಗೂ ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದು ತಣ್ಣಗಾಗಲು ಬಿಡಿ.

  • ನಂತರ ಮಿಕ್ಸಿ ಜಾರ್'ಗೆ ತೆಂಗಿನ ತುರಿ, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಎಣ್ಣೆಯಲ್ಲಿ ಹುರಿದುಕೊಂಡಿದ್ದನ್ನು ಸೇರಿಸಿ.

  • ಬಳಿಕ ಸಾಂಬಾರ್ ಪುಡಿ, ಖಾರದ ಪುಡಿ, ಟೊಮೆಟೋ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

  • ಮಾಸಾಲೆಯನ್ನು ಬೇಳೆ ಬೇಯಿಸಿಕೊಂಡ ನೀರಿಗೆ ಸೇರಿಸಿ, ಇದಕ್ಕೆ ಹುಣಸೆಹಣ್ಣಿನ ರಸ, ಹೂರಣ, ಅರಿಶಿಣದ ಪುಡಿ, ಉಪ್ಪು ಸೇರಿ ಚೆನ್ನಾಗಿ 10-15 ನಿಮಿಷ ಕುಡಿಸಿ.

  • ಬಳಿಕ ಪ್ಯಾನ್ ಒಂದಕ್ಕೆ ಎಣ್ಣೆ, ಸಾಸಿವೆ, ಕರಿಬೇವು, ಒಣಗಿದ ಮೆಣಸಿನ ಕಾಯಿ, ಇಂಗನ್ನು ಸೇರಿ ಒಗ್ಗರಣೆ ಹಾಕಿ ಸಾರಿಗೆ ಸೇರಿಸಿದರೆ ರುಚಿಕರವಾದ ಒಬ್ಬಟ್ಟಿನ ಸಾರು ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.