ಮಲೈ ಕುಲ್ಫಿ | Malai Kulfi recipe in Kannada
ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳಲ್ಲಿ ಮಲಾಯಿ ಕುಲ್ಫಿ ವಿಶೇಷ ಸ್ಥಾನ ಹೊಂದಿದೆ. ಹಾಲು ಹಾಗೂ ಏಲಕ್ಕಿಯ ಸುವಾಸನೆ, ಡ್ರೈ ಫ್ರೂಟ್ಸ್‌ನಿಂದ ತಯಾರಾಗುವ ಈ ಕುಲ್ಫಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳಲ್ಲಿ ಮಲಾಯಿ ಕುಲ್ಫಿ ವಿಶೇಷ ಸ್ಥಾನ ಹೊಂದಿದೆ. ಹಾಲು ಹಾಗೂ ಏಲಕ್ಕಿಯ ಸುವಾಸನೆ, ಡ್ರೈ ಫ್ರೂಟ್ಸ್‌ನಿಂದ ತಯಾರಾಗುವ ಈ ಕುಲ್ಫಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.
ಬೇಕಾಗುವ ಪದಾರ್ಥಗಳು...
ಹಾಲು – 1 ಲೀಟರ್
ಸಕ್ಕರೆ – ½ ಬಟ್ಟಲು
ಖೋವಾ (ಮಾವಾ) – 100 ಗ್ರಾಂ
ಕಾರ್ನ್ ಫ್ಲೋರ್ – 1 ಚಮಚ
ಹಾಲು – 2 ಟೇಬಲ್ ಸ್ಪೂನ್ (ಕಾರ್ನ್ ಫ್ಲೋರ್ ಕಲಸಲು)
ಏಲಕ್ಕಿ ಪುಡಿ – ½ ಚಮಚ
ಬಾದಾಮಿ – 10 (ಸಣ್ಣದಾಗಿ ಕತ್ತರಿಸಿದ್ದು)
ಗೋಡಂಬಿ – 10 (ಸಣ್ಣದಾಗಿ ಕತ್ತರಿಸಿದ್ದು)
ಪಿಸ್ತಾ – 10 (ಸಣ್ಣದಾಗಿ ಕತ್ತರಿಸಿದ್ದು)
ಕೇಸರಿ ದಳ- ಸ್ವಲ್ಪ (ಐಚ್ಛಿಕ)
ಮಾಡುವ ವಿಧಾನ...
ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.
ಹಾಲು ಕುದಿಯಲು ಆರಂಭಿಸಿದ ನಂತರ ಆಗಾಗ ಕಲಕುತ್ತಾ ಅದರ ಪ್ರಮಾಣ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಯಲು ಬಿಡಿ
ಬಳಿಕ ಕಾರ್ನ್ ಫ್ಲೋರ್ ಅನ್ನು 2 ಚಮಚ ಹಾಲಿನಲ್ಲಿ ಕರಗಿಸಿ ಕೈಯಾಡಿಸುತ್ತಾ ಹಾಲಿಗೆ ಸೇರಿಸಿ.
ಬಳಿಕ ಸಕ್ಕರೆ, ಖೋವಾ ಮತ್ತು ಕೇಸರಿಯನ್ನು ಸೇರಿಸಿ ಚೆನ್ನಾಗಿ ಕಲಸಿ.
ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ 5-10 ನಿಮಿಷ ಕುದಿಸಿ.
ಈಗ ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ಮತ್ತು ಪಿಸ್ತಾವನ್ನು ಸೇರಿಸಿ.
ಮಿಶ್ರಣ ಸಂಪೂರ್ಣ ತಣ್ಣಗಾದ ಬಳಿಕ ಕುಲ್ಫಿ ಅಚ್ಚು ಅಥವಾ ಸಣ್ಣ ಕಪ್‌ಗಳಲ್ಲಿ ತುಂಬಿ.
6-8 ಗಂಟೆಗಳ ಕಾಲ ಅಥವಾ ರಾತ್ರಿ ಪೂರ್ತಿ ಫ್ರೀಜರ್‌ನಲ್ಲಿ ಇಡಿ.
ನಂತರ ಅಚ್ಚಿನಿಂದ ತೆಗೆದು ಪಿಸ್ತಾ ತುಂಡುಗಳಿಂದ ಅಲಂಕರಿಸಿದರೆ ರುಚಿಕರವಾದ ಮಲಾಯಿ ಕುಲ್ಫಿ ಸವಿಯಲು ಸಿದ್ಧ.
ಸಲಹೆ:
ಹೆಚ್ಚು ರುಚಿಗಾಗಿ ಕಂಡೆನ್ಸ್ಡ್ ಮಿಲ್ಕ್ ಬಳಸಬಹುದು.
ಗುಲಾಬಿ ಎಸೆನ್ಸ್ ಅಥವಾ ಕೇಸರಿ ಸೇರಿಸಿದರೆ ಕುಲ್ಫಿಯ ಸುವಾಸನೆ ಹೆಚ್ಚುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



