ಅಡುಗೆ

ಹೊರಗೆ ಕ್ರಿಸ್ಪಿ, ಒಳಗೆ ಜ್ಯೂಸಿ; ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿ ಮಟನ್ ಕಬಾಬ್; ರುಚಿಗೆ ಫಿದಾ ಗ್ಯಾರಂಟಿ..!

ಹೊರಗೆ ಸಿಗುವ ಮಟನ್ ಕಬಾಬ್‌ನ ಸುವಾಸನೆ ಮತ್ತು ರುಚಿಯನ್ನು ಮನೆಯಲ್ಲೇ ಸವಿಯಬೇಕೆಂದರೆ ಈ ಸುಲಭ ರೆಸಿಪಿ ನಿಮಗಾಗಿ.

ಹೊರಗೆ ಕ್ರಿಸ್ಪಿ, ಒಳಗೆ ಜ್ಯೂಸಿ; ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿ ಮಟನ್ ಕಬಾಬ್; ರುಚಿಗೆ ಫಿದಾ ಗ್ಯಾರಂಟಿ..!
ಮಟನ್ ಕಬಾಬ್
Published On :

ಹೊರಗೆ ಸಿಗುವ ಮಟನ್ ಕಬಾಬ್‌ನ ಸುವಾಸನೆ ಮತ್ತು ರುಚಿಯನ್ನು ಮನೆಯಲ್ಲೇ ಸವಿಯಬೇಕೆಂದರೆ ಈ ಸುಲಭ ರೆಸಿಪಿ ನಿಮಗಾಗಿ. ಮಸಾಲೆಗಳ ಸುವಾಸನೆ, ಮೊಸರಿನ ಮೃದುತ್ವ ಮತ್ತು ಸರಿಯಾದ ಮೆರಿನೇಷನ್‌ನಿಂದ ತಯಾರಾಗುವ ಈ ಮಟನ್ ಕಬಾಬ್ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿ ಹಾಗೂ ರಸಭರಿತವಾಗಿರುತ್ತದೆ. ಸಂಜೆ ಸ್ನ್ಯಾಕ್‌, ಪಾರ್ಟಿ ಸ್ಟಾರ್ಟರ್‌ ಅಥವಾ ವಿಶೇಷ ಊಟಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು...

  • ಮಟನ್ (ಎಲುಬಿಲ್ಲದ) – 500 ಗ್ರಾಂ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ

  • ಮೊಸರು – 3 ಚಮಚ

  • ಅಚ್ಚ ಖಾರದ ಪುಡಿ – 2 ಚಮಚ

  • ಅರಿಶಿನ – ¼ ಚಮಚ

  • ದನಿಯಾ ಪುಡಿ – 1 ಚಮಚ

  • ಜೀರಿಗೆ ಪುಡಿ – 1 ಚಮಚ

  • ಗರಂ ಮಸಾಲೆ – 1 ಚಮಚ

  • ಕಾಳು ಮೆಣಸಿನ ಪುಡಿ – ½ ಚಮಚ

  • ನಿಂಬೆ ರಸ – 1 ಚಮಚ

  • ಕಡಲೆಹಿಟ್ಟು – 2 ಚಮಚ

  • ಎಣ್ಣೆ ಅಥವಾ ತುಪ್ಪ – 2 ಚಮಚ

  • ಉಪ್ಪು – ರುಚಿಗೆ ಚಮಚ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಪುದೀನಾ ಸೊಪ್ಪು – ಸ್ವಲ್ಪ

  • ಕಬಾಬ್ ಕಡ್ಡಿಗಳು (ಸ್ಕ್ಯೂವರ್) – ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಒಂದು ಪಾತ್ರೆಯಲ್ಲಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಶಿನ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಕಾಳು ಮೆಣಸಿನ ಪುಡಿ, ನಿಂಬೆ ರಸ, ಉಪ್ಪು ಹಾಗೂ ಹುರಿದ ಕಡಲೆಹಿಟ್ಟು ಸೇರಿಸಿ ಮಿಶ್ರಣ ಮಾಡಿ.

  • ಈ ಮಸಾಲೆಗೆ ಮಟನ್ ಸೇರಿಸಿ ಚೆನ್ನಾಗಿ ಕಲಸಿ ಕನಿಷ್ಠ 4 ಗಂಟೆ ಅಥವಾ ರಾತ್ರಿ ಪೂರ್ತಿ ಫ್ರಿಡ್ಜ್ ನಲ್ಲಿಡಿ.

  • ಮೆರಿನೇಟ್ ಮಾಡಿದ ಮಟನ್ ತುಂಡುಗಳನ್ನು ಕಬಾಬ್ ಕಡ್ಡಿಗಳಿಗೆ ಒಂದೊಂದಾಗಿ ಚುಚ್ಚಿ.

  • ಓವನ್ ಅನ್ನು 200°C ಗೆ ಪ್ರೀಹೀಟ್ ಮಾಡಿ.

  • ಕಬಾಬ್‌ಗಳ ಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಚ್ಚಿ.

  • 20–25 ನಿಮಿಷ ಬೇಯಿಸಿ. ಮಧ್ಯದಲ್ಲಿ ಒಮ್ಮೆ ತಿರುಗಿಸಿ ಮತ್ತೆ ಎಣ್ಣೆ ಹಚ್ಚಿ.

  • ಕೊನೆಯ 4–5 ನಿಮಿಷ ಗ್ರಿಲ್ ಮೋಡ್‌ನಲ್ಲಿ ಬೇಯಿಸಿದರೆ ಹೊಟೇಲ್ ಶೈಲಿಯ ಬಣ್ಣ ಮತ್ತು ಸುವಾಸನೆ ಬರುತ್ತದೆ.

ತವಾ ವಿಧಾನ

  • ಓವನ್ ಇಲ್ಲದಿದ್ದರೆ ದಪ್ಪ ತವಾಗೆ ಸ್ವಲ್ಪ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಎಲ್ಲಾ ಬದಿಗಳೂ ಚೆನ್ನಾಗಿ ಬೇಯುವಂತೆ ತಿರುಗಿಸುತ್ತಾ 18–20 ನಿಮಿಷ ಬೇಯಿಸಿ.

ಟಿಪ್ಸ್...

  • ಮೃದುವಾದ ಕಬಾಬ್‌ಗಾಗಿ ಎಲುಬಿಲ್ಲದ ಮಟನ್ ಬಳಸುವುದು ಉತ್ತಮ.

  • ಹೆಚ್ಚು ಸಮಯ ಮೆರಿನೇಟ್ ಮಾಡಿದಷ್ಟು ಕಬಾಬ್ ಹೆಚ್ಚು ರುಚಿಯಾಗುತ್ತದೆ.

  • ಬೇಯಿಸುವಾಗ ಮಧ್ಯೆ ಮಧ್ಯೆ ಬೆಣ್ಣೆ ಅಥವಾ ತುಪ್ಪ ಹಚ್ಚಿದರೆ ಕಬಾಬ್ ರಸಭರಿತವಾಗಿರುತ್ತದೆ.

  • ಹೊಗೆ ಸುವಾಸನೆ ಬೇಕಿದ್ದರೆ ಕೊನೆಯಲ್ಲಿ ಸಣ್ಣ ಕಲ್ಲಿದ್ದಲಿಗೆ ತುಪ್ಪ ಹಾಕಿ ಪಾತ್ರೆಯೊಳಗೆ 2–3 ನಿಮಿಷ ಹೊಗೆ ನೀಡಿ (ಧೂಂಗರ್ ವಿಧಾನ).

  • ಈ ವಿಧಾನದಲ್ಲಿ ಮಾಡಿದ ಮಟನ್ ಕಬಾಬ್ ಹೊರಗಿನ ರೆಸ್ಟೋರೆಂಟ್ ಶೈಲಿಯ ರುಚಿಯನ್ನು ಮನೆಯಲ್ಲೇ ಸುಲಭವಾಗಿ ಸವಿಯಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.