ಅಡುಗೆ

ಬಟರ್ ಮಶ್ರೂಮ್ ಮಸಾಲಾ | Butter Mushroom Masala Recipe in Kannada

ರುಚಿಕರವಾದ ಬಟರ್ ಮಶ್ರೂಮ್ ಮಸಾಲಾ ಮಾಡುವ ವಿಧಾನ...

ಬಟರ್ ಮಶ್ರೂಮ್ ಮಸಾಲಾ | Butter Mushroom Masala Recipe in Kannada
ಬಟರ್ ಮಶ್ರೂಮ್ ಮಸಾಲಾ
Published On :

ಬೇಕಾಗುವ ಪದಾರ್ಥಗಳು..

  • ಮಶ್ರೂಮ್ - 300 ಗ್ರಾಂ

  • ಅಚ್ಚ ಖಾರದ ಪುಡಿ - 1 ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ

  • ಅರಿಶಿಣದ ಪುಡಿ- ಸ್ವಲ್ಪ

  • ದನಿಯಾ ಪುಡಿ - 1 ಚಮಚ

  • ಗರಂ ಮಸಾಲ - 1/2 ಚಮಚ

  • ಬೆಣ್ಣೆ - 2 ಚಮಚ

  • ಜೀರಿಗೆ - 1/4 ಚಮಚ

  • ಮರಾಟಿಮೊಗ್ಗು- 2

  • ಚಕ್ಕೆ- ಸ್ವಲ್ಪ

  • ಏಲಕ್ಕಿ - 2

  • ಲವಂಗದ ಎಲೆ (ಪಲಾವ್ ಎಲೆ)- 3-4

  • ಈರುಳ್ಳಿ - 2

  • ಬಟಾಣಿ - 1 ಬಟ್ಟಲು

  • ಟೊಮೆಟೋ - 1

  • ಗೋಡಂಬಿ - ಸ್ವಲ್ಪ

  • ಟೊಮೆಟೋ ಪೇಸ್ಟ್ - 1 ಬಟ್ಟಲು

  • ಮೊಸರು - 1/2 ಬಟ್ಟಲು

  • ಮೆಣಸಿನ ಪುಡಿ - 1 ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು-ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಮಶ್ರೂಮ್ ಗಳನ್ನು ಚೆನ್ನಾಗಿ ತೊಳೆದು ಬೇಕಾದ ಆಕಾರಕ್ಕೆ ಕತ್ತರಿಸಿ ಒಂದು ಪಾತ್ರೆಗೆ ಹಾಕಿಕೊಳ್ಳಿ.

  • ನಂತರ ಇದಕ್ಕೆ ಅರಿಶಿಣಪುಡಿ, ದನಿಯಾ ಪುಡಿ ಹಾಗೂ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ನಂತರ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಚಮಚ ಬೆಣ್ಣೆ ಹಾಕಿ. ಕಾದ ನಂತರ ಮಶ್ರೂಮ್ ಗಳನ್ನು ಹಾಕಿ ಫ್ರೈ ಮಾಡಿಕೊಳ್ಳಿ.

  • ನಂತರ ಮಿಕ್ಸಿ ಜಾರ್'ಗೆ ಟೊಮೆಟೋ ಹಾಗೂ ಗೋಡಂಬಿ ಹಾಕಿ ಪೇಸ್ಟ್ ಮಾಡಿಕೊಳ್ಳಿ.

  • ನಂತರ ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ 1 ಚಮಚ ಬೆಣ್ಣೆ ಹಾಕಿ. ಕಾದ ನಂತರ ಜೀರಿಗೆ, ಮರಾಠಿ ಮೊಗ್ಗು, ಚಕ್ಕೆ, ಏಲಕ್ಕಿ, ಜೀರಿಗೆ ಹಾಗೂ ಪಲಾವ್ ಎಲೆ ಹಾಕಿ. ಕೆಂಪಗಾದ ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ.

  • ಅದು ಕೆಂಪಗಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿಕೊಂಡ ಟೊಮೆಟೋ, ಬಟಾಣಿ ಹಾಗೂ ಉಪ್ಪು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೋ ಮೆತ್ತಗಾದ ಬಳಿಕ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಹಾಕಿ ಮಿಶ್ರಣ ಮಾಡಿ.

  • ಇದೀಗ ಮೊಸರು ಹಾಗೂ ರುಬ್ಬಿಕೊಂಡ ಟೊಮೆಟೋ ಪೇಸ್, ಉಪ್ಪು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಮಸಾಲೆ ಗಟ್ಟಿಯಾಗುತ್ತಿದ್ದ ಫ್ರೈ ಮಾಡಿಕೊಂಡ ಮಶ್ರೂಮ್ ಹಾಕಿ 5 ನಿಮಿಷ ಕುದಿಯಲು ಬಿಡಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಬಟರ್ ಮಶ್ರೂಮ್ ಮಸಾಲಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.