ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸುವ ವಿಧಾನ
ಗಣೇಶ ಚತುರ್ಥಿ ಹಬ್ಬಕ್ಕೆ ಗಣಪನಿಗೆ ಪ್ರಿಯವಾದ ಮೋದಕ

ಬೇಕಾಗುವ ಪದಾರ್ಥಗಳು
ಒಂದು ಕಪ್ ಮೈದಾ ಹಿಟ್ಟು
ಒಂದು ಕಪ್ ಗೋಧಿ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ
2 ಚಮಚ ತುಪ್ಪ
ಒಂದೂವರೆ ಕಪ್ ತೆಂಗಿನ ತುರಿ
ಒಂದು ಕಪ್ ಚೆನ್ನಾಗಿ ಹುಡಿ ಮಾಡಿದ ಬೆಲ್ಲ
ತಯಾರಿಸುವ ವಿಧಾನ
ಮೈದಾಹಿಟ್ಟು, ಗೋಧಿ ಹಿಟ್ಟು, ಸಕ್ಕರೆ ಮತ್ತು ಉಪ್ಪು ಸೇರಿಸಿ ಅದಕ್ಕೆ 2 ಚಮಚ ಬಿಸಿ ಮಾಡಿದ ತುಪ್ಪ ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ 14 ರಿಂದ 15 ನಿಮಿಷ ಹಾಗೆಯೇ ಬಿಡಿ.
ಹೂರಣ ತಯಾರಿಸಲು ಬಾಣಲೆಗೆ ಒಂದೂವರೆ ಕಪ್ ತೆಂಗಿನ ತುರಿ, ಒಂದು ಕಪ್ ಚೆನ್ನಾಗಿ ಹುಡಿ ಮಾಡಿದ ಬೆಲ್ಲ ಸೇರಿಸಿ ಮಿಶ್ರಣ ಮಾಡಿ. ಬೆಂಕಿಯ ಬಿಸಿಗೆ ಬೆಲ್ಲ ಕರಗಲು ಪ್ರಾರಂಭವಾಗುತ್ತದೆ. ಬೆಲ್ಲ ಕರಗಿದ ಬಳಿಕ ಬಾಣಲೆಯನ್ನು ಕೆಳಗಿಳಿಸಿ. ಸ್ವಲ್ಪ ಏಲಕ್ಕಿ, ಡ್ರೈ ಫ್ರುಟ್ಸ್, ತುಪ್ಪ ಸೇರಿಸಬಹುದು.
ಹಿಟ್ಟನ್ನು ಮೈದಾದಲ್ಲಿ ಅದ್ದಿ ಚಪಾತಿಯಂತೆ ಲಟ್ಟಿಸಬೇಕು. ಬೇಕಾದ ಗಾತ್ರಕ್ಕೆ ಹಿಟ್ಟನ್ನು ಲಟ್ಟಿಸಬಹುದು. ಬಳಿಕ ತಯಾರಿಸಿಟ್ಟ ಹೂರಣವನ್ನು ಅದರ ಮಧ್ಯದಲ್ಲಿ ಇಟ್ಟು ಕೈಯಲ್ಲೇ ತಿರುಗಿಸುತ್ತಾ ಸರಿಯಾದ ಆಕಾರಕ್ಕೆ ತರಬೇಕು. ಬಳಿಕ ಕುದಿಯುವ ಎಣ್ಣೆಗೆ ಅದನ್ನು ಹಾಕಿ ಸರಿಯಾಗಿ ಬೆಂದ ಬಳಿಕ ಎಣ್ಣೆಯಿಂದ ತೆಗೆಯಬೇಕು. ಮೋದಕ ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


