ಜಿಂಜರ್ ಚಿಕನ್
ರುಚಿಕರವಾದ ಜಿಂಜರ್ ಚಿಕನ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಬೋನ್ ಲೆಸ್ ಚಿಕನ್ – ಅರ್ಧ ಕೆಜಿ
- ಮೆಣಸಿನ ಪುಡಿ –ಒಂದು ಚಮಚ
- ಶುಂಠಿ -ಬೆಳ್ಳುಳ್ಳಿ ಪೇಸ್ಟ್
- ಕಾರ್ನ್‌ಫ್ಲವರ್ –ಒಂದು ಚಮಚ
- ಮೈದಾ ಹಿಟ್ಟು –ಎರಡು ಚಮಚ
- ಈರುಳ್ಳಿ-2
- ಹಸಿ ಮೆಣಸಿನಕಾಯಿ-4
- ಬೆಳ್ಳುಳ್ಳಿ, ಶುಂಠಿ ಪೇಸ್ಟ್- ಒಂದು ಚಮಚ
- ಮೊಟ್ಟೆ- ಒಂದು
- ಸೋಯಾ ಸಾಸ್- ಒಂದು 1-2 ಚಮಚ
- ವೆನಿಗರ್ –ಒಂದು ಚಮಚ
- ಟೊಮೊಟೊ ಸಾಸ್ –2-4 ಚಮಚ
- ಸಿಜ್ವನ್ ಸಾಸ್ -ಒಂದು ಕಪ್
- ಖಾರದಪುಡಿ –ಅರ್ಧ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಒಂದು ಪಾತ್ರೆಗೆ ಅರ್ಧ ಕೆ.ಜಿ ಚಿಕನ್, ಮೆಣಸಿನ ಪುಡಿ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಕಾರ್ನ್‌ಫ್ಲವರ್, ಮೈದಾ ಹಿಟ್ಟು, ಮೊಟ್ಟೆಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷಗಳ ಕಾಲ ನೆನೆಸಿಡಿ.
- ಬಳಿಕ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ನೆನೆಸಿಟ್ಟಿದ್ದ ಚಿಕನ್ ಅನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.
- ನಂತರ ಒಂದು ಅಗಲವಾದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ. ಈರುಳ್ಳಿ ಬೆಂದು ಕೆಂಪಾದ ಮೇಲೆ ಸೋಯಾ ಸಾಸ್, ವೆನಿಗರ್, ಟೊಮೊಟೊ ಸಾಸ್, ಸಿಜ್ವನ್ ಸಾಸ್, ಖಾರದಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಬಳಿಕ ಫ್ರೈ ಮಾಡಿಕೊಂಡಿರುವ ಚಿಕನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 10ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಕರವಾದ ಜಿಂಜರ್ ಚಿಕನ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


