ಅಡುಗೆ

ಮೊಸರು ಅವಲಕ್ಕಿ

ರುಚಿಕರವಾದ ಮೊಸರು ಅವಲಕ್ಕಿ ಮಾಡುವ ವಿಧಾನ...

ಮೊಸರು ಅವಲಕ್ಕಿ
ಮೊಸರು ಅವಲಕ್ಕಿ
Published On :

ಬೇಕಾಗುವ ಪದಾರ್ಥಗಳು...

  • ಮೀಡಿಯಂ ಅವಲಕ್ಕಿ-ಅರ್ಧ ಪಾವು
  • ಮೊಸರು-1 ಪಾವು
  • ಕಾಯಿತುರಿ-1 ಹಿಡಿ
  • ಕರಿಬೇವು- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಜಜ್ಜಿದ ಹಸಿ ಶುಂಠಿ- ಸ್ವಲ್ಪ
  • ಹಸಿ ಮೆಣಸಿನಕಾಯಿ ಪೇಸ್ಟ್‌-1 ಚಮಚ
  • ಉಪ್ಪು-ರುಚಿಗೆ ತಕ್ಕಷ್ಟು
  • ದಾಳಿಂಬೆ ಬೀಜ-1 ಹಿಡಿ
  • ಒಗ್ಗರಣೆಗೆ ಇಂಗು
  • ಸಾಸಿವೆ- ಸ್ವಲ್ಪ
  • ಜೀರಿಗೆ- ಸ್ವಲ್ಪ
  • ಉದ್ದಿನ ಬೇಳೆ, ಕಡ್ಲೆಬೇಳೆ-ಸ್ವಲ್ಪ

ಮಾಡುವ ವಿಧಾನ...

  • ಅವಲಕ್ಕಿಯನ್ನು ಮೆತ್ತಗಾಗುವಷ್ಟು ಮಾತ್ರ ನೀರಲ್ಲಿ ನೆನೆಸಿಡಿ. ಒಂದು ಪಾತ್ರೆಗೆ ಅವಲಕ್ಕಿ ಹಾಕಿ. ಬಾಣಲೆಗೆ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಸ್ವಲ್ಪ ತುಪ್ಪಕ್ಕೆ ಹಾಕಿ ಒಗ್ಗರಿಸಿಕೊಂಡು ಅವಲಕ್ಕಿ ಮೇಲೆ ಹಾಕಿ.
  • ನಂತರ ಉಪ್ಪು, ಕಾಯಿತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಶುಂಠಿ ಸಹ ಹಾಕಿ ಗಟ್ಟಿ ಮೊಸರನ್ನು ಮತ್ತು ದಾಳಿಂಬೆ ಬೀಜವನ್ನು ಹಾಕಿ ಚೆನ್ನಾಗಿ ಕಲೆಸಿದರೆ, ರುಚಿಕರವಾದ ಮೊಸರಿನ ಅವಲಕ್ಕಿ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.