ಅಡುಗೆ

ಮಶ್ರೂಮ್ ಫ್ರೈ- mushroom fry recipe in Kannada

ರುಚಿಕರವಾದ ಮಶ್ರೂಮ್ ಫ್ರೈ ಮಾಡುವ ವಿಧಾನ...

ಮಶ್ರೂಮ್ ಫ್ರೈ- mushroom fry recipe in Kannada
ಮಶ್ರೂಮ್ ಫ್ರೈ
Published On :

ಬೇಕಾಗುವ ಪದಾರ್ಥಗಳು...

  • ಮಶ್ರೂಮ್- 1 ಬಟ್ಟಲು

  • ಶುಂಠಿ- ಸ್ವಲ್ಪ

  • ಹಸಿ ಮೆಣಸಿನಕಾಯಿ-6

  • ಬೆಳ್ಳುಳ್ಳಿ-7 ಎಸಳು

  • ಖಾರದ ಪುಡಿ- 1 ಚಮಚ

  • ಅರಿಶಿನ ಪುಡಿ- ಅರ್ಧ ಚಮಚ

  • ಗರಂ ಮಸಾಲ-1 ಚಮಚ

  • ಕಾಳುಮೆಣಸಿನ ಪುಡಿ- ಅರ್ಧ ಚಮಚ

  • ಈರುಳ್ಳಿ -1

  • ಟೊಮಾಟೊ- 2

  • ಉಪ್ಪು- ರುಚಿಗೆ ತಕ್ಕಷ್ಟು

  • ಎಣ್ಣೆ- ಸ್ವಲ್ಪ

  • ಕರಿಬೇವು- ಸ್ವಲ್ಪ

ಮಾಡುವ ವಿಧಾನ...

  • ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಪಾನ್ ನಲ್ಲಿ ಎಣ್ಣೆ ಹಾಕಿ ಕಾದ ನಂತರ ರುಬ್ಬಿಕೊಂಡ ಪೇಸ್ಟ್ ಹಾಕಿ 2 ನಿಮಿಷ ಕೈಯಾಡಿಸಿ. ಬಳಿಕ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಕಾಳುಮೆಣಸಿನ ಪುಡಿ, ಈರುಳ್ಳಿ, ಟೊಮೆಟಾ ಎಲ್ಲಾ ಹಾಕಿ ಮಿಕ್ಸ್ ಮಾಡಿ ಕೆಂಪಗಾಗುವವರೆ ಹುರಿಯಿರಿ. ಬಳಿಕ ಸ್ವಲ್ಪ ನೀರು ಹಾಕಿ.

  • ನೀರು ಕುದಿ ಬಂದ ಬಳಿಕ ಇದೀಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಮಶ್ರೂಮ್ ಹಾಕಿ. ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿಕೊಂಡು ನೀರು ಇಂಗಿದ ಮೇಲೆ ಗ್ರೇವಿ ಗಟ್ಟಿಯಾದೊಡನೆ ಇಳಿಸಿ. ಇದೀಗ ರುಚಿಕರವಾದ ಮಶ್ರೂಮ್ ಫ್ರೈ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.