ಎಳ್ಳು ಚಿಕ್ಕಿ
ರುಚಿಕರವಾದ ಎಳ್ಳು ಚಿಕ್ಕಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಬಿಳಿ ಎಳ್ಳು – 1 ಬಟ್ಟಲು
- ಪುಡಿ ಮಾಡಿದ ಬೆಲ್ಲ – 1 ಬಟ್ಟಲು
- ನೀರು- ಸ್ವಲ್ಪ
- ತುಪ್ಪ – ಸ್ವಲ್ಪ
- ಏಲಕ್ಕಿ ಪುಡಿ – ಕಾಲು ಚಮಚ
- ಅಡುಗೆ ಸೋಡಾ – ಕಾಲು ಚಮಚ
ಮಾಡುವ ವಿಧಾನ...
- ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಎಳ್ಳನ್ನು ಹಾಕಿಕೊಂಡು 2 ನಿಮಿಷಗಳವರೆಗೆ ಫ್ರೈ ಮಾಡಿಕೊಂಡು ಪಕ್ಕಕ್ಕಿಡಿ.
- ಬಳಿಕ ಅದೇ ಪ್ಯಾನ್‌ಗೆ ಬೆಲ್ಲ ಹಾಕಿ, 2 ಚಮಚ ನೀರನ್ನು ಸೇರಿಸಿಕೊಳ್ಳಿ. ಮೀಡಿಯಮ್ ಉರಿಯಲ್ಲಿ ಬೆಲ್ಲವನ್ನು ಕರಗಿಸಿಕೊಳ್ಳಿ.ಕರಗಿಸಿದ ಬೆಲ್ಲಕ್ಕೆ ಒಂದು ಚಮಚ ತುಪ್ಪ, ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಬೆಲ್ಲದ ಪಾಕ ಕಂದು ಬಣ್ಣ ಆಗುವವರೆಗೆ ತಿರುವಿಕೊಳ್ಳಿ.
- ನಂತರ ಆ ಮಿಶ್ರಣಕ್ಕೆ ಕಾಲು ಚಮಚ ಅಡುಗೆ ಸೋಡಾವನ್ನು ಹಾಕಿ ಸ್ವಲ್ಪ ಫ್ರೈ ಮಾಡಿ, ಬಳಿಕ ಎಳ್ಳನ್ನು ಸೇರಿಸಿಕೊಳ್ಳಿ.
- ಸಣ್ಣ ಉರಿಯಲ್ಲಿ 2 ರಿಂದ 3 ನಿಮಿಷ ಈ ಮಿಶ್ರಣವನ್ನು ತಿರುವಿಕೊಳ್ಳಬೇಕು. ಈಗ ಒಂದು ಪ್ಲೇಟ್‌ಗೆ ತುಪ್ಪ ಸವರಿ ಬೆಲ್ಲ ಮತ್ತು ಎಳ್ಳಿನ ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿಕೊಳ್ಳಿ.ನಂತರ ಸಮತಟ್ಟಾಗಿ ಪ್ಲೇಟ್‌ಗೆ ಹರಡಿಕೊಂಡು ಬಿಸಿಯಿರುವಾಗಲೇ ಚೌಕಾಕಾರದಲ್ಲಿ ಚಾಕುವಿನಿಂದ ತುಂಡರಿಸಿಕೊಳ್ಳಿ. ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ಇದೀಗ ಎಳ್ಳು ಚಿಕ್ಕಿ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


