ಯುಗಾದಿ ವಿಶೇಷ: ಹೋಳಿಗೆ
ರುಚಿಕರವಾದ ಹೋಳಿಗೆ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಮೈದಾ ಹಿಟ್ಟು ಅಥವಾ ಚಿರೋಟಿ ರವೆ -1 ಬಟ್ಟಲು
- ಅರಿಶಿಣದ ಪುಡಿ- ಸ್ವಲ್ಪ
- ಉಪ್ಪು-ಚಿಟಿಕೆಯಷ್ಟು
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ತೊಗರಿ ಬೇಳೆ- 2 ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
- ಕೊಬ್ಬರಿ ಪುಡಿ- ಮುಕ್ಕಾಲು ಬಟ್ಟಲು
ಮಾಡುವ ವಿಧಾನ...
- ಮೊದಲಿಗೆ ಮೈದಾ ಹಿಟ್ಟು ಅಥವಾ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಚಿಟಿಕೆ ಉಪ್ಪು, ಅರಿಶಿಣ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ, ಸ್ವಲ್ಪವೇ ನೀರಿ ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ಜಿಗುಟಾದ ಮತ್ತು ನಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
- ಬಳಿಕ ಹಿಟ್ಟು ಎಣ್ಣೆಯಲ್ಲಿ ಮುಳುಗಿಸುವಷ್ಟು ಎಣ್ಣೆಯನ್ನು ಹಾಕಿ. ಬಳಿಕ ಹಿಟ್ಟನ್ನು 3 ಗಂಟೆ ಅಥವಾಗ ಅದಕ್ಕಿಂತಲೂ ಹೆಚ್ಚು ಮುಚ್ಚಿಟ್ಟು, ನೆನೆಯಲು ಬಿಡಿ.
- ನಂತರ ಪ್ರೆಶರ್ ಕುಕ್ಕರ್ ನಲ್ಲಿ ಬೇಳೆ, ಅರಿಶಿಣದ ಪುಡಿ ಹಾಗೂ 1 ಚಮಚ ಎಣ್ಣೆಯನ್ನು ಹಾಕಿ. ಮಧ್ಯಮ ಉರಿಯಲ್ಲಿ 2 ಕೂಗು ಕೂಗಿಸಿಕೊಳ್ಳಿ.
- ನಂತರ ಪ್ರೆಶರ್ ಕುಕ್ಕರ್ ತಣ್ಣದಾದ ಬಳಿಕ ನೀರನ್ನು ಬಸಿದುಕೊಳ್ಳಿ. ಬಳಿಕ ಬೇಳೆಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿಕೊಂಡು, ಮರಳಿ ಬೇಳೆಯನ್ನು ಒಲೆಯ ಮೇಲಿಟ್ಟು ಅದಕ್ಕೆ, 2 ಬಟ್ಟಲು ಬೆಲ್ಲ ಸೇರಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ದಪ್ಪಗಾಗುವವರೆ, ತಳ ಹತ್ತದಂತೆ ಕೈಯಾಡಿಸುತ್ತಾ ನೋಡಿಕೊಳ್ಳಿ.
- ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಏಲಕ್ಕಿ ಪುಡಿ, ಹಾಗೂ ಕೊಬ್ಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
- ಇದು ತಣ್ಣಗಾದ ಬಳಿಕ ಅನುಕೂಲವಿದ್ದರೆ ಒರಳಿನಲ್ಲಿ ಹಾಕಿ ರುಬ್ಬಿಕೊಳ್ಳಿ. ಇಲ್ಲದಿದ್ದರೆ, ಮಿಕ್ಸಿ ಜಾರ್'ಗೆ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
- ನಂತರ ಈಗಾಗಲೇ ಸಿದ್ಧಪಡಿಸಿಕೊಂಡಿದ್ದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಕೈಯಿಂದ ಚಪ್ಪಟೆ ಮಾಡಿ, ಮಧ್ಯೆ ಬೇಳೆಯ ಊರಣವನ್ನು ಇಟ್ಟು ಎಲ್ಲಾ ಬದಿಗಳನ್ನೂ ಹಿಟ್ಟಿನಿಂದ ಮುಚ್ಚಿ. ಬಳಿಕ ಈ ಉಂಡೆಯನ್ನು ತಪಾತಿಯಂತೆ ತಟ್ಟಿಕೊಳ್ಳಿ.
- ಒಲೆಯ ಮೇಲೆ ತವಾ ಇಟ್ಟು, ಕಾದ ನಂತರ ಒಬ್ಬಟ್ಟನ್ನು ತವಾ ಮೇಲೆ ಹಾಕಿ, ಎಣ್ಣೆ ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿಕೊಂಡರೆ, ರುಚಿಕರವಾದ ಬೇಳೆ ಹೋಳಿಗೆ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


