ಅಡುಗೆ

ಬಾದಾಮಿ ಕಟ್ಲೆಟ್

ರುಚಿಕರವಾದ ಬಾದಾಮಿ ಕಟ್ಲೆಟ್ ಮಾಡುವ ವಿಧಾನ...

ಬಾದಾಮಿ ಕಟ್ಲೆಟ್
ಬಾದಾಮಿ ಕಟ್ಲೆಟ್
Published On :

ಬೇಕಾಗುವ ಪದಾರ್ಥಗಳು...

  • ಬಾದಾಮಿ ಪುಡಿ – 25 ಗ್ರಾಂ
  • ಒಣದ್ರಾಕ್ಷಿ – 25 ಗ್ರಾಂ
  • ಆಲೂಗಡ್ಡೆ- ಎರಡು (ಬೇಯಿಸಿದ್ದು)
  • ಪನೀರ್-2 ಚಮಚ (ಪುಡಿ ಮಾಡಿದ್ದು)
  • ಬ್ರೆಡ್ ಕ್ರಂಬ್ಸ್ – 2 ಚಮಚ
  • ಚಾಟ್ ಮಸಾಲ-ಒಂದು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಹಸಿ ಮೆಣಸಿನಕಾಯಿ- 2
  • ಕಾರ್ನ್‌ಫ್ಲೋರ್ – ಮೂರು ಚಮಚ
  • ಗಸಗಸೆ-ಒಂದು ಚಮಚ
  • ಎಣ್ಣೆ-ಅಗತ್ಯಕ್ಕೆ ಬೇಕಾಗುವಷ್ಟು

ಮಾಡುವ ವಿಧಾನ...

  • ದ್ರಾಕ್ಷಿ ಹಾಗೂ ಬಾದಾಮಿಯನ್ನು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಬಾದಾಮಿ ಸಿಪ್ಪೆ ತೆಗೆದಿಟ್ಟುಕೊಳ್ಳಿ. ಸಣ್ಣಸಣ್ಣದಾರಿ ಕತ್ತರಿಸಿಕೊಳ್ಳಿ. ಇದಕ್ಕೆ ಚಾಟ್ ಮಸಾಲಾ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆ, ಪನೀರ್, ಬ್ರೆಡ್ ಕ್ರಂಬ್ಸ್, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಈ ಮಿಶ್ರಣವನ್ನು ಸಣ್ಣ ಸಣ್ಣ  ಉಂಡೆಗಳಾಗಿ ಮಾಡಿ. ಕಾರ್ನ್‌ಫ್ಲೋರ್ ನೀರಿನಲ್ಲಿ ಕಲಸಿ. ತಯಾರಾದ ಕಟ್ಲೆಟ್‌ಗಳನ್ನು ಕಾರ್ನ್‌ಫ್ಲೋರ್ ದ್ರಾವಣದಲ್ಲಿ ಅದ್ದಿ. ಅದರ ಮೇಲೆ ಗಸಗಸೆ ಹಾಕಿ. ಬಾಣಲೆಯಲ್ಲಿ ಎಣ್ಣೆ  ಬಿಸಿ ಮಾಡಿ ಅದರಲ್ಲಿ ಕಟ್ಲೆಟ್‌ಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬಾದಾಮಿ ಕಟ್ಲೆಟ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.