ಅಡುಗೆ

ಬಾದಾಮಿ-ಖರ್ಜೂರದ ಹಾಲು

ರುಚಿಕರ ಹಾಗೂ ಆರೋಗ್ಯಕರವಾದ ಬಾದಾಮಿ-ಖರ್ಜೂರದ ಹಾಲು ಮಾಡುವ ವಿಧಾನ...

ಬಾದಾಮಿ-ಖರ್ಜೂರದ ಹಾಲು
ಬಾದಾಮಿ-ಖರ್ಜೂರದ ಹಾಲು
Published On :

ಬೇಕಾಗುವ ಪದಾರ್ಥಗಳು...

  • ಹಾಲು – 3 ಬಟ್ಟಲು
  • ಖರ್ಜೂರ – 10
  • ಸಕ್ಕರೆ ಅಥವಾ ಬೆಲ್ಲ- ರುಚಿಗೆ ತಕ್ಕಷ್ಟು
  • ಬಾದಾಮಿ – 12
  • ಏಲಕ್ಕಿ ಪುಡಿ – ಕಾಲು ಚಮಚ
  • ಕೇಸರಿ ದಳ– ಸ್ವಲ್ಪ (ಬಿಸಿ ಹಾಲಿನಲ್ಲಿ ನೆನೆಸಿಟ್ಟುಕೊಳ್ಳಿ)

ಮಾಡುವ ವಿಧಾನ...

  • ಮೊದಲಿಗೆ ಬಾದಾಮಿಯನ್ನು ರಾತ್ರಿ ಅಥವಾ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಅದರ ಸಿಪ್ಪೆ ಸುಲಿದು ಪಕ್ಕಕ್ಕಿಡಿ.
  • ಪಾತ್ರೆಯಲ್ಲಿ ಹಾಲನ್ನು ಸುಮಾರು 5 ನಿಮಿಷಗಳ ಕಾಲ ಕುದಿಸಿಕೊಳ್ಳಿ.
  • ಬಾದಾಮಿ ಹಾಗೂ ಖರ್ಜೂರವನ್ನು 5 ಚಮಚ ಹಾಲಿನೊಂದಿಗೆ ಮಿಕ್ಸಿ ಜಾರ್‌ನಲ್ಲಿ ಹಾಕಿ, ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
  • ಈಗ ಪೇಸ್ಟ್ ಅನ್ನು ಕುದಿಯುತ್ತಿರುವ ಹಾಲಿಗೆ ಹಾಕಿ 3-4 ನಿಮಿಷ ಕುದಿಯಲು ಬಿಡಿ. ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ಬಳಿಕ ಏಲಕ್ಕಿ ಪುಡಿ ಸೇರಿಸಿ, ಉರಿಯನ್ನು ಆಫ್ ಮಾಡಿ.
  • ಕೊನೆಯಲ್ಲಿ ಹಾಲಿನಲ್ಲಿ ನೆನೆಸಿದ ಕೇಸರಿ ದಳವನ್ನು ಸೇರಿಸಿ, ಬಾದಾಮಿ ಚೂರುಗಳಿಂದ ಅಲಂಕರಿಸಿದರೆ, ರುಚಿಕರ ಹಾಗೂ ಆರೋಗ್ಯಕರ ಬಾದಾಮಿ-ಖರ್ಜೂರದ ಹಾಲು ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.