ಅಡುಗೆ

ಸೋಯಾಬಿನ್ ಚಂಕ್ಸ್​ ಗ್ರೇವಿ

ರುಚಿಕರವಾದ ಸೋಯಾಬಿನ್ ಚಂಕ್ಸ್​ ಗ್ರೇವಿ ಮಾಡುವ ವಿಧಾನ...

ಸೋಯಾಬಿನ್ ಚಂಕ್ಸ್​ ಗ್ರೇವಿ
ಸೋಯಾಬಿನ್ ಚಂಕ್ಸ್​ ಗ್ರೇವಿ
Published On :

ಬೇಕಾಗುವ ಪದಾರ್ಥಗಳು...

  • ಸೋಯಾಬಿನ್​ ಚಂಕ್ಸ್- 1 ಬಟ್ಟಲು
  • ಈರುಳ್ಳಿ-2
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್​-1 ಚಮಚ
  • ಅಚ್ಚ ಖಾರದ ಪುಡಿ- 1 ಚಮಚ
  • ಅರಿಶಿಣ-1/2 ಚಮಚ
  • ​ದನಿಯಾ ಪುಡಿ-1 ಚಮಚ
  • ಗರಂ ಮಸಾಲಾ-1/2 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ತುರಿದ ತೆಂಗಿನ ಕಾಯಿ- ಸ್ವಲ್ಪ
  • ಏಲಕ್ಕಿ-2
  • ಚಕ್ಕೆ.ಲವಂಗ- 2
  • ಕಸೂರಿ ಮೇತಿ-ಸ್ವಲ್ಪ
  • ಏಲಕ್ಕಿ-2
  • ಜೀರಿಗೆ-1/2 ಚಮಚ
  • ಟೊಮೆಟೋ-2
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ
  • ಗಸೆಗಸೆ- 1 ಚಮಚ
  • ಗೋಡಂಬಿ-5-6

ಮಾಡುವ ವಿಧಾನ...

  • ಮಿಕ್ಸಿ ಜಾರಿನಲ್ಲಿ ಗೋಡಂಬಿ, ಟೊಮೆಟೋ, ಗಸ ಗಸೆ ಸ್ವಲ್ಪ ನೀರನ್ನ ಹಾಕಿ ಗ್ರೈಂಡ್​ ಮಾಡಿಕೊಳ್ಳಿ.
  • ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನ ಹಾಕಿ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಕಸೂರಿ ಮೇತಿ ಹಾಕಿ ಹುರಿದುಕೊಳ್ಳಿ.
  • ಇದಕ್ಕೆ ಕತ್ತರಿಸಿದ ಈರುಳ್ಳಿ, ಸ್ವಲ್ಪ ಅರಿಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್​ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ.
  • ನಂತರ ಗರಂ ಮಸಾಲಾ, ಖಾರದ ಪುಡಿ, ದನಿಯಾ ಪುಡಿಯನ್ನ ಹಾಕಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.
  • ಬಳಿಕ ಬೆಚ್ಚನೆಯ ನೀರಿನಲ್ಲಿ ಕೆಲವೇ ನಿಮಿಷಗಳ ಕಾಲ ಬೇಯಿಸಿಟ್ಟ ಸೋಯಾ ಚಂಕ್ಸ್​ಗಳನ್ನ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಐದರಿಂದ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ರುಚಿಕರವಾದ ಸೋಯಾಬಿನ್ ಚಂಕ್ಸ್​ ಗ್ರೇವಿ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.