ಆಲೂಗಡ್ಡೆ ಹಪ್ಪಳ
ಆಲೂಗಡ್ಡೆ ಹಪ್ಪಳ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಆಲೂಗಡ್ಡೆ - 4
- ಉಪ್ಪು- ರುಚಿಗೆ ತಕ್ಕಷ್ಟು
- ಖಾರದ ಪುಡಿ- ಅರ್ಧ ಚಮಚ
- ಜೀರಿಗೆ- 1-2 ಚಮಚ
- ಎಣ್ಣೆ- ಒಂದು ಚಮಚ
ಮಾಡುವ ವಿಧಾನ..
- ಮೊದಲಿಗೆ ಕುಕ್ಕರ್ ತೆಗೆದುಕೊಂಡು ಅದಕ್ಕೆ ನಾಲ್ಕು ಆಲೂಗಡ್ಡೆಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ
- ನಂತರ ಬೆಂದ ಆಲೂಗಡ್ಡೆಗಳ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಿ. ನಂತರ ಕೈಯಲ್ಲಿ ಚೆನ್ನಾಗಿ ನುಣ್ಣಗೆ ಮಾಡಿಕೊಳ್ಳಿ. ನಂತರ ಉಪ್ಪು, ಅಚ್ಚ ಖಾರದ ಪುಡಿ, ಜೀರಿಗೆ, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಬಿಸಿಲಿನಲ್ಲಿ ಒಂದು ದೊಡ್ಡ ಕವರ್ ಹಾಕಿ ಆಲೂ ಮಿಶ್ರಣವನ್ನು ಸ್ಪೂನ್ ನಲ್ಲಿ ತೆಗೆದುಕೊಂಡು ಕವರ್ ಮೇಲೆ ಹಾಕಿ ಮತ್ತೊಂದು ಕವರ್ ನಿಂದ ಒತ್ತಿ. ಇದೇ ರೀತಿ ಎಲ್ಲಾ ಮಿಶ್ರಣವನ್ನೂ ಹಾಕಿ 2-3 ದಿನಗಳ ಕಾಲ ಒಣಗಿಸಿ ಎರಡೂ ಬದಿಯಲ್ಲಿ ಒಣಗಿಸಿಟ್ಟುಕೊಂಡರೆ, ಅಗತ್ಯವಿದ್ದ ಸಮಯದಲ್ಲಿ ಅಲೂ ಹಪ್ಪಳವನ್ನು ಎಣ್ಣೆಗೆ ಹಾಕಿ ಸವಿಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


