ಈ ದೀಪಾವಳಿಗೆ ಮಾಡಿ ಪರ್ಫೆಕ್ಟ್ ಕಜ್ಜಾಯ...
ರುಚಿಕರವಾದ ಕಜ್ಜಾಯ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಅಕ್ಕಿ- 1 ಬಟ್ಟಲು
- ಬೆಲ್ಲ - ¾ ಕಪ್
- ಬಿಳಿ ಎಳ್ಳು- ಸ್ವಲ್ಪ
- ಗಸಗಸೆ- 1 ಚಮಚ
- ಏಲಕ್ಕಿ ಪುಡಿ- ಸ್ವಲ್ಪ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
- ಮೊದಲನೆಯದಾಗಿ, 1 ಕಪ್ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ. ಪ್ರತಿ 4 ಗಂಟೆಗಳಿಗೊಮ್ಮೆ ನೀರನ್ನು ಬದಲಾಯಿಸುವ ಮೂಲಕ ರಾತ್ರಿಯಿಡೀ ನೆನೆಸಿದರೆ ಚೆನ್ನಾಗಿರುತ್ತದೆ.
- ಬಳಿಕ ನೀರು ತೆಗೆದು ಕಾಟನ್ ಬಟ್ಟೆಯ ಮೇಲೆ ಅಕ್ಕಿಯನ್ನು ಹರಡಿ ನೀರಿನ ಅಂಶ ಒಣಗಲು ಬಿಡಿ. ನಂತರ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಟ್ಟುಕೊಳ್ಳಿ. ನಂತರ ಜರಡಿಯ ಸಹಾಯದಿಂದ ಅಕ್ಕಿಯಲ್ಲಿ ಉಂಡೆಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.
- ಈಗ ತವಾದಲ್ಲಿ 1 ಟೀಸ್ಪೂನ್ ಎಳ್ಳು ಮತ್ತು 1 ಟೀಸ್ಪೂನ್ ಗಸಗಸೆ ಡ್ರೈ ರೋಸ್ಟ್ ಮಾಡಿಕೊಳ್ಳಿ.
- ನಂತರ ದೊಡ್ಡ ಕಡಾಯಿಯನ್ನು ಒಲೆಯ ಮೇಲಿಟ್ಟು ¾ ಬೆಲ್ಲ ಮತ್ತು ¼ ಕಪ್ ನೀರನ್ನು ಹಾಕಿ. ಬೆಲ್ಲ ಕರಗುವವರೆಗೂ ಕೈಯಾಡಿಸಿ. ಬೆಲ್ಲದ ಪಾಕವನ್ನು 5 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿಕೊಂಡು. ನಂತರ ನಿಧಾನಗತಿಯಲ್ಲಿ ಅಕ್ಕಿ ಹಿಟ್ಟನ್ನು ಸೇರಿ ಉಂಡೆಗಳಿಲ್ಲದಂತೆ ಕೈಯಾಡಿಸಿ.
- ಬಳಿಕ ಎಳ್ಳು ಹಾಗೂ ಗಸಗಸೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಕ್ಕಿ ಹಿಟ್ಟಿನಲ್ಲಿ ತೇವಾಂಶ ಇರುವುದರಿಂದ ಮಿಶ್ರಣ ನೀರಾಗಿರುತ್ತದೆ. ಈ ಮಿಶ್ರಣವು ಒಂದು ರಾತ್ರಿ ನೆನೆಯಲು ಬಿಡಿ, ನಿಧಾನಗತಿಯಲ್ಲಿ ಮಿಶ್ರಣ ಗಟ್ಟಿಯಾಗುತ್ತದೆ.
- ನಂತರದ ದಿನ ಬಾಣಲೆಯನ್ನು ಒಲೆಯ ಮೇಲಿಟ್ಟು ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಕಜ್ಜಾಯದ ಆಕಾರದಲ್ಲಿ ತಟ್ಟಿ ಎಣ್ಣೆ ಬಿಟ್ಟು ಎರಡೂ ಬದಿಯಲ್ಲೂ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಕಜ್ಜಾಯ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


