ಮೆಣಸಿನ ರಸಮ್
ರುಚಿಕರವಾದ ಮೆಣಸಿನ ರಸಮ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಹುಣಸೆಹಣ್ಣು: ಸ್ವಲ್ಪ
- ಟೊಮೆಟೊ: ಕತ್ತರಿಸಿದ್ದು 1
- ತುಪ್ಪ: 1 ಚಮಚ
- ಕಾಳು ಮೆಣಸಿನ ಪುಡಿ: 2 ಚಮಚ
- ಅರಿಶಿನ ಪುಡಿ: 1/4 ಚಮಚ
- ಬೆಲ್ಲ: 1 ಚಮಚ
- ಇಂಗು: 1/8 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಸಾಸಿವೆ: ಸ್ವಲ್ಪ
- ಕರಿಬೇವು- ಸ್ವಲ್ಪ
- ಕೊತ್ತಂಬರಿ ಸೊಪ್ಪು: ಸ್ವಲ್ಪ
ಮಾಡುವ ವಿಧಾನ...
- ಹುಣಸೆಹಣ್ಣನ್ನು ಒಂದು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. ತಿರುಳು ಮತ್ತು ಬೀಜಗಳನ್ನು ತೆಗೆದು ರಸವನ್ನು ತೆಗೆದಿಟ್ಟುಕೊಳ್ಳಿ
- ಬಳಿಕ ಒಂದು ಪಾತ್ರೆಯಲ್ಲಿ ಹುಣಸೆ ನೀರು, ಟೊಮ್ಯಾಟೋ, ಮೆಣಸಿನ ಪುಡಿ, ಬೆಲ್ಲ, ಅರಿಶಿಣದ ಪುಡಿ, ಉಪ್ಪು ಹಾಗೂ ನೀರು ಸೇರಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಪ್ಯಾನ್ ವೊಂದರಲ್ಲಿ ತುಪ್ಪ ಹಾಕಿ. ಕಾದ ನಂತರ ಸಾಸಿವೆ, ಕರಿಬೇವು ಹಾಗೂ ಇಂಗು ಹಾಕಿ ಕೆಂಪಗಾದ ಬಳಿಕ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನ ಜೊತೆಗೆ ಇದನ್ನು ರಸಕ್ಕೆ ಸೇರಿಸಿದರೆ ರುಚಿಕರವಾದ ಮೆಣಸಿನ ರಸಮ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


