ಸ್ಪೆಷಲ್ ಚಟ್ನಿ
ರುಚಿಕರವಾದ ಸ್ಪೆಷಲ್ ಚಟ್ನಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಬಿಳಿ ಎಳ್ಳು ಅಥವಾ ಕಡಲೆಕಾಯಿ ಬೀಜ - 3 ಚಮಚ
- ಟೊಮೋಟೋ-ಕತ್ತರಿಸಿದ್ದು 4
- ಈರುಳ್ಳಿ- ಕತ್ತರಿಸಿದ್ದು
- ಮೆಣಸಿನಕಾಯಿ -8-9
- ಶುಂಠಿ- ಸ್ವಲ್ಪ
- ಹುಣಸೆಹಣ್ಣು - ಸ್ವಲ್ಪ
- ಬೆಳ್ಳುಳ್ಳಿ- 6-7 ಎಸಳು
- ಕರಿಬೇವು- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಜೀರಿಗೆ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 1-2 ಚಮಚ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಬಿಳಿ ಎಳ್ಳು ಅಥವಾ ಕಡಲೆಕಾಯಿ ಬೀಜವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಟೊಮೆಟೋ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಅರ್ಧ ಲೋಟ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ, ಹುಣಸೆಹಣ್ಣು, ಉಪ್ಪು ಹಾಕಿ 5 ನಿಮಿಷ ಕುದಿಸಿಕೊಳ್ಳಿ. ನಂತರ ಇದು ತಣ್ಣಗಾಗಲು ಬಿಡಿ.
- ತಣ್ಣಗಾದ ಬಳಿಕ ಎಲ್ಲವನ್ನೂ ರುಬ್ಬಿಕೊಂಡರೆ ರುಚಿಕರವಾದ ಸ್ಪೆಷಲ್ ಚಟ್ನಿ ಇಡ್ಲಿ, ದೋಸೆ, ಚಪಾತಿಯೊಂದಿಗೆ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


