ಪೈನಾಪಲ್ ಹಲ್ವಾ
ರುಚಿಕರವಾದ ಪೈನಾಪಲ್ ಹಲ್ವಾ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಪೈನಾಪಲ್- 1
- ಕಾರ್ನ್ ಫ್ಲೋರ್ - 1 ಬಟ್ಟಲು
- ಸಕ್ಕರೆ- 2 ಬಟ್ಟಲು
- ದ್ರಾಕ್ಷಿ- ಸ್ವಲ್ಪ
- ಗೋಡಂಬಿ- ಸ್ವಲ್ಪ
- ಬಾದಾಮಿ- ಸ್ವಲ್ಪ
- ಕೇಸರಿ ದಳ ಅಥವಾ ಫುಡ್ ಕಲರ್ - ಸ್ವಲ್ಪ
- ತುಪ್ಪ- 1 ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಪೈನಾಪಲ್ ತೆಗೆದುಕೊಂಡು ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸಿ ಜಾರ್'ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಪೈನಾಪಲ್ ನ್ನು ಉಂಡೆಗಳಿಲ್ಲದಂತೆ ಸೋಸಿಕೊಳ್ಳಿ.
- ನಂತರ ಇದಕ್ಕೆ ಕಾರ್ನ್ ಫ್ಲೋರ್ ಹಾಕಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ. ಬಳಿಕ ಒಂದು ಬಟ್ಟಲು ನೀರು ಹಾಕಿ ಮಿಶ್ರಣ ಮಾಡಿ.
- ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ಒಂದು ಸಣ್ಣಬಟ್ಟಲು ನೀರು ಹಾಕಿ ಸಕ್ಕರೆ ಕರಗಲು ಬಿಡಿ. ನಂತರ ಒಂದು ನಿಮಿಷ ಕುದಿಸಿಕೊಂಡು ಪೈನಾಪಲ್-ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿಟ್ಟು ಸ್ಫೂನ್ ನಲ್ಲಿ ಕೈಯಾಡಿಸುತ್ತಲೇ ಇರಿ.
- ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಕೇಸರಿ ದಳ ಅಥವಾ ಫುಡ್ ಕಲರ್, ಏಲಕ್ಕಿ ಪುಡಿ ಹಾಕಿ ಕಲಸಿಕೊಳ್ಳಿ. ನಿಧಾನಗತಿಯಲ್ಲಿ ತುಪ್ಪವನ್ನು ಸ್ವಲ್ಪ, ಸ್ವಲ್ಪವೇ ಹಾಕಿ ಮಿಶ್ರಣ ಮಾಡಿಕೊಳ್ಳಿ.
- ಕೊನೆಯಲ್ಲಿ ಸಣ್ಣಗೆ ಕತ್ತರಿಸಿಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿ ಚೂರುಗಳನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪೈನಾಪಲ್ ಹಲ್ವಾ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


