ಟೊಮೆಟೊ ಸೇವ್
ರುಚಿಕರವಾದ ಟೊಮೆಟೋ ಸೇವ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಟೊಮೆಟೊ- 1
- ಕಡಲೆ ಹಿಟ್ಟು – 2 ಬಟ್ಟಲು
- ಅಕ್ಕಿ ಹಿಟ್ಟು – ಅರ್ಧ ಕಬಟ್ಟಲುಪ್
- ಅರಿಶಿಣದ ಪುಡಿ– ಅರ್ಧ ಚಮಚ
- ಕಾಶ್ಮೀರಿ ಚಿಲ್ಲಿ ಪೌಡರ್– 1 ಚಮಚ
- ಇಂಗು– ಚಿಟಿಕೆ
- ಉಪ್ಪು – 1 ಚಮಚ
- ಬೆಣ್ಣೆ – 2 ಚಮಚ
- ಓಂಕಾಳು – ಅರ್ಧ ಚಮಚ
- ಎಣ್ಣೆ – ಕರಿಯಲು
ಮಾಡುವ ವಿಧಾನ...
- ಮೊದಲಿಗೆ ಟೊಮೆಟೊವನ್ನು ಮಿಕ್ಸಿ ಜಾರ್‌ಗೆ ಹಾಕಿ ನೀರು ಹಾಕದಂತೆ ನುಣ್ಣಗೆ ರುಬ್ಬಿಕೊಳ್ಳಿ.
- ಒಂದು ದೊಡ್ಡ ಬಟ್ಟಲಿನಲ್ಲಿ ಜರಡಿ ಹಿಡಿದು ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಮೆಣಸಿನ ಪುಡಿ, ಇಂಗು ಮತ್ತು ಉಪ್ಪು ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
- ಈ ಮಿಶ್ರಣಕ್ಕೆ ಬೆಣ್ಣೆ ಹಾಗೂ ಓಂಕಾಳು ಸೇರಿಸಿ ಮಿಶ್ರಣ ಮಾಡಿ.
- ಟೊಮೆಟೊ ಪ್ಯೂರಿಯಲ್ಲಿ ಬೀಜ ಹಾಗೂ ಸಿಪ್ಪೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೋಸಿ, ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ಚಕ್ಕುಲಿ ಹಿಟ್ಟಿನ ಹದದಂತೆ ಮೃದುವಾದ ಹಿಟ್ಟನ್ನು ತಯಾರಿಸಿ.
- ನಂತರ ಸಣ್ಣ ಸಣ್ಣ ರಂಧ್ರಗಳಿರುವ ಚಕ್ಕುಲಿ ಮೇಕರ್ ತೆಗೆದುಕೊಂಡು, ಒಳ ಭಾಗದಲ್ಲಿ ಸ್ವಲ್ಪ ಎಣ್ಣೆ ಹಚ್ಚಿ, ಚೆಂಡಿನ ಗಾತ್ರದ ಮಿಶ್ರಣವನ್ನು ಚಕ್ಕುಲಿ ಮೇಕರ್ ಒಳಗೆ ಹಾಕಿ ತಯಾರಿಸಿಡಿ.
- ಕಾದ ಎಣ್ಣೆಯಲ್ಲಿ ಸೇವ್ ಅನ್ನು ಒತ್ತಿ, ಒಂದು ಸುತ್ತು ವೃತ್ತವಾಗಿ ಹರಡಿ. ಈಗ ಸೇವ್ ಅನ್ನು ಗರಿಗರಿಯಾಗಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಸೇವ್ ಅನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹಾಕಿ. ಇದೀಗ ರುಚಿಕರವಾದ ಟೊಮೆಟೊ ಸೇವ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


